More

    ದೇಸಿ ಅಖಾಡದಲ್ಲಿ ಸಾಕ್ಷಿ ಮಲಿಕ್ ಅಭ್ಯಾಸ…

    ಬೆಂಗಳೂರು: ಕರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿಂದ ಜಾಗತಿಕ ಕ್ರೀಡಾಲೋಕವೇ ನಿಂತ ನೀರಾಗಿತ್ತು. ಇದೀಗ ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳು ಆರಂಭಗೊಳ್ಳುತ್ತಿವೆ. ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಕ್ರೀಡಾ ಸಚಿವಾಲಯದ ಕೆಲವೊಂದು ಮಾರ್ಗಸೂಚಿಗಳೊಂದಿಗೆ ಕ್ರೀಡಾ ಚಟುವಟಿಕೆಗಳಿಗೆ ಅಸ್ತು ಎಂದಿವೆ. ಆದರೆ, ದೈಹಿಕ ಸಂಪರ್ಕ ಕ್ರೀಡೆಗಳಿಗೆ ಇನ್ನು ಅನುಮತಿ ಸಿಕ್ಕಿಲ್ಲ. ಇದರಿಂದಾಗಿ 2016ರ ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಕುಸ್ತಿ ಪಟು ಸಾಕ್ಷಿ ಮಲಿಕ್ ತವರಿನಲ್ಲಿ ದೇಸಿ ಅಖಾಡದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.


    ಇದನ್ನೂ ಓದಿ: ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಸೆಹ್ವಾಗ್ ಕುಟುಂಬ

    ದೇಸಿ ಅಖಾಡದಲ್ಲಿ ಸಾಕ್ಷಿ ಮಲಿಕ್ ಅಭ್ಯಾಸ...ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಮೇಲೆ ಕಣ್ಣಿಟ್ಟಿರುವ ಸಾಕ್ಷಿ ಮಲಿಕ್ ಈ ಬಾರಿಯೂ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ. ಇದಕ್ಕಾಗಿ ಅಗತ್ಯ ತರಬೇತಿ ಮುಂದುವರಿಸಿರುವ ಸಾಕ್ಷಿ, ಲಾಕ್‌ಡೌನ್ ನಡುವೆಯೂ ಮ್ಯಾಟ್ ಬದಲಿಗೆ ದೇಸಿ ಮಣ್ಣಿನ ಅಖಾಡದಲ್ಲಿ ತರಬೇತಿ ನಡೆಸುತ್ತಿದ್ದಾರೆ. ಹಂತ ಹಂತವಾಗಿ ಕ್ರೀಡಾ ಚಟುವಟಿಕೆ ಆರಂಭಗೊಂಡ ಹಿನ್ನೆಲೆಯಲ್ಲಿ ಸಾಕ್ಷಿ ಅಖಾಡಕ್ಕೆ ಧುಮುಕ್ಕಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕುಸ್ತಿಪಟುಗಳಿಗೆ ಸಾಯ್‌ನಲ್ಲಿ ತರಬೇತಿಗೆ ವ್ಯವಸ್ಥೆ ಇಲ್ಲದ ಕಾರಣ, ಸಾಕ್ಷಿ ಮಲಿಕ್ ಹರಿಯಾಣದಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ. ಪತಿ ಸತ್ಯವ್ರತ್ ಕಡಿಯಾನ್ ಇವರಿಗೆ ಸಾಥ್ ನೀಡುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಅರ್ಹತೆ ಕೂಟಗಳು ಶೀಘ್ರವೇ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಅಭ್ಯಾಸ ಕೈಗೊಳ್ಳುತ್ತಿರುವೆ. ಮ್ಯಾಟ್‌ನಲ್ಲಿ ಸ್ಪರ್ಧಾತ್ಮಕ ಟೂರ್ನಿಗಳು ನಡೆದರೂ ಸದ್ಯಕ್ಕೆ ಮಣ್ಣಿನಲ್ಲಿ ಅಭ್ಯಾಸ ನಡೆಸುತ್ತಿರುವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ:ಮನೆಯಲ್ಲಿ ಕ್ರೀಡೆ ಬಗ್ಗೆ ಮಾತನಾಡಲ್ವಂತೆ ಕಾರ್ತಿಕ್-ದೀಪಿಕಾ ದಂಪತಿ!

     ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ
    2016ರ ರಿಯೋ ಒಲಿಂಪಿಕ್ಸ್ ಮಹಿಳೆಯರ 58 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಜಯಿಸಿದ್ದರು. ಈ ಮೂಲಕ ಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದರು. ಬಳಿಕ ಸಾಕ್ಷಿ ನಿರ್ವಹಣೆ ಕೂಡ ಅಷ್ಟಾಗಿ ಸುಧಾರಿಸಲಿಲ್ಲ. ಲಾಕ್‌ಡೌನ್ ವೇಳೆ ಮನೆಯಲ್ಲೇ ಲಾಕ್ ಆಗಿದ್ದ ಸಾಕ್ಷಿ ದೂರದರ್ಶನದಲ್ಲಿ ಮರುಪ್ರಸಾರಗೊಂಡ ‘ಮಹಾಭಾರತ್’ ಧಾರಾವಾಹಿ ವೀಕ್ಷಿಸಿದರಂತೆ. ನನ್ನ ಪಾಲಕರು ಯಾವಾಗಲೂ ಈ ಧಾರಾವಾಹಿ ಬಗ್ಗೆ ಹೇಳುತ್ತಿದ್ದರು, ಪ್ರತಿ ಎಪಿಸೋಡ್ ನೋಡಿದೆ ಎಂದು ಸಾಕ್ಷಿ ಹೇಳುತ್ತಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts