More

    ಸಾರ್ವಜನಿಕ ಸಂಚಾರಕ್ಕೆ ಅನುವಾಗುವಂತೆ ರಸ್ತೆ, ಸೇತುವೆ ನಿರ್ಮಿಸಲು ಶಾಸಕ ಖಡಕ್ ಸೂಚನೆ

    ಹಾಸನ: ಜನಸಾಮಾನ್ಯರಿಗೆ ಅನುಕೂಲವಾಗುವಂತೆ ರಸ್ತೆ, ಸೇತುವೆ ನಿರ್ಮಾಣ ಮಾಡಲು ಎತ್ತಿನಹೊಳೆ ಯೋಜನೆಯ ಅಧಿಕಾರಿಗಳಿಗೆ ಶಾಸಕ ಎಚ್. ಕೆ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

    ಆಲೂರು ತಾಲೂಕಿನ ಕೆರೆಹಳ್ಳಿ ಗ್ರಾಮದ ಮಾರ್ಗವಾಗಿ ಹಾದು ಹೋಗುತ್ತಿರುವ ಎತ್ತಿನಹೊಳೆ ಕಾಲುವೆ ಪರಿಶೀಲಿಸಿ ಭಾನುವಾರ ಮಾತನಾಡಿದರು. ರಸ್ತೆ ಮಟ್ಟಕ್ಕಿಂತ ಸೇತುವೆಯನ್ನು ಎತ್ತರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವಾಹನಗಳು, ಜಾನುವಾರುಗಳು, ಜನಸಾಮಾನ್ಯರು ತಿರುಗಾಡಲು ತೊಂದರೆಯಾಗುತ್ತದೆ. ಸೇತುವೆ ಮಟ್ಟದಲ್ಲಿ ರಸ್ತೆ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು.

    ಹಾಸನ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್ ಮಂಜೇಗೌಡ ಮಾತನಾಡಿ, ಎತ್ತಿನ ಹೊಳೆ ಯೋಜನೆ ಕಾಮಗಾರಿಗೆ ಈಗಾಗಲೇ ಗ್ರಾಮದ ಹಲವಾರು ಜನರು ಭೂಮಿಯನ್ನು ಕಳೆದುಕೊಂಡಿದ್ದು ಇನ್ನೂ ಯಾವೊಬ್ಬ ರೈತರಿಗೂ ಪರಿಹಾರ ಬಂದಿರುವುದಿಲ್ಲ ಇಂತಹ ಸಂದರ್ಭದಲ್ಲಿ ಗ್ರಾಮಸ್ಥರ ಕೋರಿಕೆಯಂತೆ ಕಡಿದಾದ ಎಂಬಾಕ್ ಮೆಂಟನ್ನು ಇಳಿಜಾರಿನ ರಸ್ತೆಯಾಗಿ ಪರಿವರ್ತಿಸಿ ಹಾಲಿ ಇರುವ ಅಂಕುಡೊಂಕು ರಸ್ತೆಯನ್ನು ಬಿಟ್ಟು ನೇರವಾದ ರಸ್ತೆಯನ್ನು ನಿರ್ಮಿಸಲು ಗ್ರಾಮದ ರೈತ ಪ್ರೇಮರಾಜು ಎಂಬುವರು ತಮ್ಮ ಜಮೀನನ್ನು ಬಿಟ್ಟುಕೊಡಲು ಮುಂದೆ ಬಂದಿದ್ದು ಅವರ ಜಮೀನನ್ನು ಕಾನೂನಿನ ರೀತಿಯಲ್ಲಿ ಭೂ ಸ್ವಾಧೀನ ಪಡಿಸಿಕೊಂಡು ಹಾಲಿ ನಿರ್ಮಿಸುತ್ತಿರುವ ಸೇತುವೆಗೆ ನೇರ ರಸ್ತೆಯ ಸಂಪರ್ಕವನ್ನು ಕಲ್ಪಿಸಬೇಕೆಂದು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts