More

    ಕ್ಯಾಲೆಂಡರ್​ ಯಾರು ಮಾಡಿದ್ದು; ಜನವರಿ, ಫೆಬ್ರವರಿ ವಾರಗಳ ಹೆಸರಿಟ್ಟವರು ಯಾರು? ವರ್ಷಕ್ಕೆ 10 ತಿಂಗಳು ಇದ್ದಿದ್ದು 12 ಆಗಿದ್ದು ಹೇಗೆ?

    ಕೆಲವೊಂದು ತಿಂಗಳಲ್ಲಿ 30 ದಿನ ಇದ್ರೆ ಇನ್ನೂ ಹಲವು ತಿಂಗಳಿನಲ್ಲಿ 31 ದಿನ ಇರುತ್ತೆ. ಜನವರಿಯಂದೇ ಯಾಕೆ ವರ್ಷ ಪ್ರಾರಂಭವಾಗುತ್ತೆ? ಒಂದು ವರ್ಷಕ್ಕೆ 12 ತಿಂಗಳು ಯಾಕೆ? ಅಷ್ಟಕ್ಕೂ ಮೊದಲು ಕ್ಯಾಲೆಂಡರನ್ನ ಪರಿಚಯಿಸಿದ್ದು ಯಾರು? ಈ ಎಲ್ಲಾ ಪ್ರಶ್ನೆಗೆ ಏನು ಉತ್ತರ ಅನ್ನೋದನ್ನ ನೋಡೋಣ:

    ಕಾಲವನ್ನ ಸೂಚಿಸಿ ಜನವರಿ, ಫೆಬ್ರವರಿ ಅಮತಾ ಹೆಸರಿಟ್ಟುದ್ದು ಅನ್ನೋದನ್ನ ನೋಡೋಣ. ಹಳೇ ಕ್ಯಾಲೆಂಡರ್​​ ಹೋಗಿ ಈ ವರ್ಷದ ಹೊಸ ಕ್ಯಾಲೆಂಡರ್​ ಎಲ್ಲೆಡೆ ಹಂಚಿಕೆಯಾಗುತ್ತಿದೆ. ಅದನ್ನ ನಾವು ಮೋಬೈಲ್​​ ಸ್ಕ್ರೀನ್​​ನಲ್ಲೂ ಬದಲಾಗಿರೋದನ್ನ ನೋಡೋಣ.

    ಕ್ಯಾಲೆಂಡರ್​​ ಅನ್ನೋದು ಲ್ಯಾಟಿನ್​ನ ಕ್ಯಾಲೆಂಡೆ ಅನ್ನೋ ಪದದಿಂದ ಬಂದಿದೆ. ರೋಮ್​ನಲ್ಲಿ ತಿಂಗಳ ಮೊದಲ ದಿನವನ್ನ ಕ್ಯಾಲೆಂಡೆ ಅಂತ್ಹೇಳಿ ಕರೀತಾರೆ. ಇನ್ನು ಕ್ಯಾಲೆಂಡರ್​​ಗೂ ಸಾಕಷ್ಟು ವರ್ಷದ ಇತಿಹಾಸವಿದೆ. ಹಿಂದಿನ ಕಾಲದಲೆಲ್ಲಾ ಸೂರ್ಯ, ಚಂದ್ರ ಬದಲಾದಂತೆ ಟೈಮ್​ ಅಳೆಯಲಾಗುತ್ತಿತ್ತು. ಇಲ್ಲಿ ಚಂದ್ರನೇ ಮುಖ್ಯ ಆಧಾರವಾಗಿರೋದ್ರಿಂದ ಅದನ್ನ ಲೂನಾರ್​ ಕ್ಯಾಲೆಂಡರ್​ ಅಮತ್ಹೇಳಿ ಕರೆಯಲಾಗುತ್ತಿತ್ತು.

    ಕ್ರಿಸ್ತಪೂರ್ವ 3 ಸಾವಿರದಿಂದ 1 ಸಾವಿರದವರೆಗಿದ್ದ ಈಜಿಪ್ಟಿನ್​​ನರು, ಸುಮೇರಿಯನರು ಮತ್ತು ವೇದಿಕ್​​​ ಕಾಲದ ಭಾರತೀಯರು ಈ ಲೂನಾರ್​​​ ಕ್ಯಾಲೆಂಡರನ್ನೇ ಬಳಸುತ್ತಿದ್ದರು.

    ಭಾರತದಲ್ಲಿ ಖಗೋಳಶಾಸ್ತ್ರಕ್ಕೆ ಬದ್ಧವಾದ ಸರಿಯಾಗಿ ರಚಿಸಿದ ಕ್ಯಾಲೆಂಡರ್​ ಪ್ರಚಲಿತದಲ್ಲಿತ್ತೆಂದು ಇತಿಹಾಸಕಾರರು ಹೇಳುತ್ತಾರೆ. ನಂತರದಲ್ಲಿ ಮಾಯನ್​ ಕ್ಯಾಲೆಂಡರ್​​, ಹಿಂದು ಕ್ಯಾಲೆಂಡರ್​, ಇಸ್ಲಾಮಿಕ್​​ ಕ್ಯಾಲೆಂಡರ್​ ಪ್ರಚಲಿತದಲಿದ್ವು. ಈಗ ಈ ಎಲ್ಲಾ ಕ್ಯಾಲೆಂಡರ್​ಗಳು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿದೆ. ಹಬ್ಬ ಹರಿದಿನಗಳಿಗೆ ಆಯಾ ಧರ್ಮದವರೂ ಈ ಕ್ಯಾಲೆಂಡರ್​​ಗಳನ್ನ ಬಳಸುತ್ತಾರೆ.

    ವಿಶ್ವಾದ್ಯಂತ ಬಳುಸುತ್ತಿರುವ ಕ್ಯಾಲೆಂಡರ್​ ಯಾವುದು?
    ನಾವಿದೀಗ ವಿಶ್ವಾದ್ಯಂತ ಜಾಗತಿಕವಾಗಿ ಬಳಸುತ್ತಿರೋದು ಗ್ರೆಗೊರಿಯನ್​ ಕ್ಯಾಲೆಂಡರ್​​. ಇದನ್ನ 1582 ರಲ್ಲಿ ರೋಮನ್​ ಕ್ಯಾಥೋಲಿಕ್​ ಚರ್ಚ್​​ನ ಪೋಪ್​ ಗ್ರೆಗರಿ13 ಅನ್ನುವವರು ತೆಗೆದುಕೊಂಡು ಬಂದವರು. ಆದ್ದರಿಂದ ಈ ಕ್ಯಾಲೆಂಡರ್​ಗೆ ಗ್ರೆಗೊರಿಯನ್​ ಕ್ಯಾಲೆಂಡರ್​ ಅನ್ನುವಂತಹ ಹೆಸರು ಬಂತು.

    ಈ ಕ್ಯಾಲೆಂಡರ್​​ನ ಮೂಲವನ್ನ ಹುಡುಕಿಕೊಂಡು ಹೋದಲ್ಲಿ ನಮಗೆ ರೋಮನ್​ ಮತ್ತು ಜೂಲಿಯನ್​ ಕ್ಯಾಂಲೆಂಡರ್​ಗಳು ಸಿಗುತ್ತದೆ. ರೋಮ್​ನ ಸ್ಥಾಪಕ ರೋಮಲನ್​ ಈ ರೋಮನ್​ ಕ್ಯಾಲೆಂಡರ್​ ಸಿದ್ಧ ಪಡಿಸಿದ್ದ ಎಂದು ಹೇಳಲಾಗುತ್ತೆ. ಇದೂ ಲೂನಾರ್​ ಕ್ಯಾಲೆಂಡರ್​ ಆಗಿದ್ದು, ಇದರಲ್ಲಿ 304 ದಿನಗಳ 10 ತಿಂಗಳು ಮಾತ್ರವಿತ್ತು, ಅಲ್ಲದೇ ವರ್ಷದ ಮೊದಲ ತಿಂಗಳು ಮಾರ್ಚ್​ ಎಂದು ಪರಿಗಣಿಸಲಾಗಿತ್ತು.

    ಗ್ರೆಗರಿ ಕ್ಯಾಲೆಂಡರನ್ನೇ ಜಗತ್ತಿನ ರಾಜ ವಂಶಸ್ತರು ಫಾಲೋ ಮಾಡೋಕೆ ಪ್ರಾರಂಭಿಸಿದ್ರು. ದೇಶಗಳ ಅದನ್ನೇ ಫಾಲೋ ಮಾಡೋಕೆ ಶುರು ಮಾಡಿದ್ವು. ಪರಿಣಾಮ ಇದೀಗ ವಿಶ್ವಾದ್ಯಂ.ತ ಗ್ರೆಗೊರಿಯನ್​ ಕ್ಯಾಲೆಂಡರನ್ನೇ ಫಾಲೋ ಮಾಡುತ್ತಿದ್ದಾರೆ.

    ಇನ್ನು ಪ್ರಾಚೀನ ರೋಮನ್​ ಕ್ಯಾಲೆಂಡರ್​​ಗಳಲ್ಲಿ 8 ದಿನಗಳ ವಾರವಿತ್ತು ಬಳಿಕ ಅದನ್ನ 7 ದಿನಕ್ಕೆ ಸೀಮಿತಗೊಳಿಸಲಾಯ್ತು. ಅದರಲ್ಲಿ ಬರುವ ದಿನಗಳಿಗೆ ಗ್ರಹಗಳ ಹೆಸರನ್ನ ಗ್ರೀಕ್​ ಮತ್ತ ಲ್ಯಾಟಿನ್​ ಭಾಷೆಗಳಲ್ಲಿ ಇಡಲಾಯ್ತು.
    SUNDAY-ಸೂರ್ಯ, MON-ಸೂರ್ಯ , TUES- ಚಂದ್ರ , WED-ಮಂಗಳ , THU-ಬುಧ , FRI-ಶುಕ್ರ, SAT-ಶನಿ ,
    ಇನ್ನು ಸೂರ್ಯ ಭೂಮಿಯನ್ನ ಸುತ್ತು ಹಾಕೋಕೆ 365 ದಿನ ಬೇಕು ಹಾಗಾಗಿ ವರ್ಷಕ್ಕೆ 365 ದಿನ ಎಂದು ಪರಿಗಣಿಸಲಾಗುತ್ತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts