More

    ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ(SAIL)ದಲ್ಲಿನ ಷೇರು ಮಾರಾಟಕ್ಕೆ ಕೇಂದ್ರ ಸರ್ಕಾರದ ಚಿಂತನೆ

    ನವದೆಹಲಿ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (SAIL)ನಲ್ಲಿರುವ ಶೇಕಡ 5 ಷೇರು ಮಾರಾಟ ಮಾಡಲು ಚಿಂತನೆ ನಡೆಸಿದೆ ಎಂದು ಡಿಪಾರ್ಟ್​ಮೆಂಟ್ ಆಫ್ ಇನ್​ವೆಸ್ಟ್​ಮೆಂಟ್​ ಆ್ಯಂಡ್ ಪಬ್ಲಿಕ್ ಅಸ್ಸೆಟ್​ ಮ್ಯಾನೇಜ್​ಮೆಂಟ್​ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಡಿಪಾರ್ಟ್​ಮೆಂಟ್ ಆಫ್ ಇನ್​ವೆಸ್ಟ್​ಮೆಂಟ್​ ಆ್ಯಂಡ್ ಪಬ್ಲಿಕ್ ಅಸ್ಸೆಟ್​ ಮ್ಯಾನೇಜ್​ಮೆಂಟ್​ ಹಾಗೂ ಉಕ್ಕು ಸಚಿವಾಲಯದ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಸೈಲ್​ನ ಶೇಕಡ 5 ಷೇರು ಮಾರಾಟ ಮಾಡುವ ಮೂಲಕ 1,000 ಕೋಟಿ ರೂಪಾಯಿಯನ್ನು ಬೊಕ್ಕಸಕ್ಕೆ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸಿಂಗಾಪುರ, ಹಾಂಕಾಂಗ್​ಗಳಲ್ಲಿ ರೋಡ್ ಷೋ ನಡೆಸಲು ತೀರ್ಮಾನಿಸಲಾಗಿದೆ. ಆದಾಗ್ಯೂ,ಕೊರೊನಾ ವೈರಸ್ ಕಾರಣಕ್ಕಾಗಿ ಹಾಂಕಾಂಗ್​ನಲ್ಲಿನ ರೋಡ್​ ಷೋವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಸೈಲ್​ನಲ್ಲಿ ಸದ್ಯ ಶೇಕಡ 75 ಪಾಲು ಸರ್ಕಾರದ್ದು ಇದೆ. ಇದಕ್ಕೂ ಮುನ್ನ 2014ರಲ್ಲಿ ಸರ್ಕಾರ ಸ್ಟೀಲ್​ ಸಿಪಿಎಸ್​ಇನಲ್ಲಿನ ಶೇಕಡ 5 ಪಾಲನ್ನು ಮಾರಾಟ ಮಾಡಿತ್ತು. ಸೈಲ್​ನ ಶೇಕಡ 5 ಷೇರುಗಳನ್ನು ಈಗ ಓಫರ್ ಫಾರ್ ಸೇಲ್​(OFS) ಮೂಲಕ ಮಾರಾಟ ಮಾಡಲು ಚಿಂತನೆ ನಡೆದಿದೆ. ಆದರೆ, ಇದಕ್ಕಾಗಿ ರೋಡ್ ಷೋ ಮೂಲಕವೇ ಹೂಡಿಕೆದಾರ ಗಮನಸೆಳೆಯಬೇಕಷ್ಟೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಸದ್ಯದ ಮಾರುಕಟ್ಟೆ ದರ ಪ್ರಕಾರ, ಸೈಲ್​ನ ಶೇಕಡ 5 ಷೇರುಗಳ ಮಾರಾಟದಿಂದ 1,000 ಕೋಟಿ ರೂಪಾಯಿ ಗಳಿಸಬಹುದಾಗಿದೆ. ಷೇರುಪೇಟೆಯಲ್ಲಿ ಶುಕ್ರವಾರ ಸೈಲ್​ನ ಷೇರು ಬೆಲೆ 48.65 ರೂಪಾಯಿನಲ್ಲಿ ವಹಿವಾಟು ಮುಗಿಸಿತ್ತು. ಪ್ರಸಕ್ತ ವರ್ಷ ಸರ್ಕಾರ ಹೂಡಿಕೆ ಹಿಂತೆಗೆತದ ಮೂಲಕ 65,000 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts