More

    ಮೈಸೂರು ದಸರಾಗೆ ಸಾಗರ್ ಡೌಟು!

    ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಸಾಗರ್‌ಗೆ ಮೈಸೂರು ದಸರಾದ ಜಂಬೂ ಸವಾರಿಗೆ ತೆರಳುವ ಸಾಧ್ಯತೆಗಳು ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ. ನಾಲ್ಕು ದಿನದ ಹಿಂದೆ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದ ಮೈಸೂರು ದಸರಾಕ್ಕೆ ಆನೆಗಳ ಆಯ್ಕೆ ಸಮಿತಿ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಒಂದು ವೇಳೆ ಅವರು ಸಾಗರ್‌ಗೆ ಬೇಡಿಕೆಯಿಟ್ಟರೂ ಶಿವಮೊಗ್ಗ ದಸರಾದಲ್ಲಿ ಸಾಗರ್ ಭಾಗವಹಿಸಬೇಕಿರುವುದರಿಂದ ಆತನನ್ನು ಕಳುಹಿಸುವುದು ಹೇಗೆ ಎಂಬ ಚಿಂತೆ ಅರಣ್ಯ ಅಧಿಕಾರಿಗಳದ್ದು.

    ಸದ್ಯಕ್ಕೆ ಬಿಡಾರದ ಆನೆಗಳ ಪೈಕಿ ಸಾಗರ್, ಭಾನುಮತಿ ಹಾಗೂ ಕುಂತಿ ಅತ್ಯಂತ ಸೌಮ್ಯ ಗುಣದ, ಸಾವಿರಾರು ಜನರ ನಡುವೆಯೂ ಬೆದರದೇ ಸಾಗುವ ಗುಣ ಹೊಂದಿವೆ. ಸಾಗರ್ ಶಿವಮೊಗ್ಗ ದಸರಾದಲ್ಲಿ ಹಲವು ವರ್ಷಗಳಿಂದ ಭಾಗವಹಿಸಿ ಗಮನ ಸೆಳೆದಿದ್ದಾನೆ. ಹೀಗಾಗಿ ಆತನನ್ನು ಮೈಸೂರಿಗೆ ಕಳುಹಿಸುವ ಸಾಧ್ಯತೆಗಳಿಲ್ಲ.
    ಭಾನುಮತಿ ಗರ್ಭವತಿಯಾಗಿದ್ದಾಳೆ. ಕುಂತಿ ಬಾಣಂತನದಲ್ಲಿದ್ದಾಳೆ. ಹೀಗಾಗಿ ಸಕ್ರೆಬೈಲು ಆನೆ ಬಿಡಾರದಿಂದ ಆನೆಗಳನ್ನು ಮೈಸೂರು ದಸರಾಕ್ಕೆ ಕಳುಹಿಸುವ ಸಾಧ್ಯತೆಗಳು ತೀರಾ ವಿರಳ. ಶಿವಮೊಗ್ಗ ದಸರಾ ಮಾತ್ರವಲ್ಲದೇ ಕಾಡಾನೆ, ಹುಲಿ, ಚಿರತೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲೂ ಭಾಗಹಿಸಿದ ಧೈರ್ಯವಂತ ಸಾಗರ್ ಬಗ್ಗೆ ಆಯ್ಕೆ ತಂಡದ ಒಲವು ಇರುವಂತಿದೆ. ಆದರೆ ಆತನನ್ನು ಕಳುಹಿಸಿಕೊಡುವುದು ಹೇಗೆ ಎಂಬ ಪೀಕಲಾಟ ಅರಣ್ಯ ಅಧಿಕಾರಿಗಳದ್ದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts