More

    ಕೆಲಸದ ಸಮಯದ ಸುರಕ್ಷತೆ ಜೀವನಕ್ಕೆ ಶ್ರೀರಕ್ಷೆ


    ಕೊಳ್ಳೇಗಾಲ : ಕೆಲಸ ಮಾಡುವಾಗ ತೆಗೆದುಕೊಳ್ಳುವ ಸುರಕ್ಷತೆ ನಿಮ್ಮ ಕುಟುಂಬಕ್ಕೆ ಜೀವನ ಪರ್ಯಂತ ಶ್ರೀ ರಕ್ಷೆ ಎಂದು ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ತಬಸುಂ ಬಾನು ಹೇಳಿದರು.


    ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಚೇರಿಯ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಪವರ್‌ಮನ್ ದಿವಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.


    ವಿದ್ಯುತ್ ಸ್ಥಾವರಗಳ ನಿರ್ವಹಣೆಯ ಸಂದರ್ಭದಲ್ಲಿ ಸುರಕ್ಷತಾ ಕ್ರಮವನ್ನು ಅನುಸರಿಸಿ ಕೆಲಸ ಮಾಡಬೇಕು. ಎಲ್ಲಿಯಾದರೂ ಲೋಪವಾದರೆ ಅಧಿಕಾರಗಳ ಗಮನಕ್ಕೆ ತನ್ನಿ. ತಾಂತ್ರಿಕತೆಯ ಸುಧಾರಣೆಯ ಬಗ್ಗೆ ಮೇಲಿನ ಅಧಿಕಾರಿಗಳ ಜತೆ ಚರ್ಚೆ ಮಾಡಿ ಪೂರೈಸುತ್ತೇನೆ ಎಂದು ಎಂದರು.


    ಸೆಸ್ಕ್ ನಿವೃತ್ತ ಮುಖ್ಯ ಇಂಜಿನಿಯರ್ ಒ.ಎ.ದಾಸ್ ಮಾತನಾಡಿ, ತಮ್ಮ ಸೇವಾವಧಿಯಲ್ಲಿ ನಿರ್ಲಕ್ಷ್ಯ ದಿಂದ ನಡೆದಂತಹ ಹಲವು ಅವಘಡಗಳ ಬಗ್ಗೆ ಮಾಹಿತಿ ನೀಡಿದರು. ಹಾಗೆ ಪವರ್‌ಮನ್‌ಗಳಿಗೆ ಸುರಕ್ಷತೆ ಇಲ್ಲದೆ ಕೆಲಸ ಮಾಡಬೇಡಿ. ವಿದ್ಯುತ್ ಬಹಳ ಸೂಕ್ಷ್ಮ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಹಾನಿಯಾಗಲಿದೆ ಎಂದರು.


    ವಿದ್ಯುತ್ ಪರಿವರ್ತಕ ನಿರೀಕ್ಷಕಿ ಅರ್ಚನಾ ಮಾತನಾಡಿ, ಪವರ್‌ಮನ್ ಸುರಕ್ಷತೆಯ ಬಗ್ಗೆ ಗೋಡೆ ಪರದೆಯಲ್ಲಿ ಸವಿವರವಾಗಿ ತಿಳಿಸುವ ಮೂಲಕ ಅರಿವು ಮೂಡಿಸಿದರು.

    ಸೆಸ್ಕ್ ಎಇಇ ರಾಜು, ಲಿಂಗರಾಜು, ಶಂಕರ್, ಆಂತರಿಕ ಲೆಕ್ಕಾಧಿಕಾರಿ ಮಹೇಶ್, ವಿನೋದ್, ಕೇಂದ್ರ ಕಾರ್ಯಕಾರಣಿ ಸದಸ್ಯ ಕೆ.ಮಹದೇವಯ್ಯ, ಪವರಮನ್ ಸಂಘದ ಅಧ್ಯಕ್ಷ ರೇವಣ್ಣ, ಕಾರ್ಯದರ್ಶಿ ನಂಜುಂಡೇಗೌಡ, ವಿನೋದ್, ಮಲ್ಲರಾಜು, ಲೈನ್‌ಮ್ಯಾನ್‌ಗಳು ಹಾಗೂ ಇಲಾಖೆ ಸಿಬ್ಬಂದಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts