More

    ಕೋವಿಡ್ ಸೋಂಕಿತೆಗೆ ಸುರಕ್ಷಿತ ಹೆರಿಗೆ

    ಆನಂದ ಮತ್ತಿಗಟ್ಟಿ ಸವಣೂರ
    ಕೋವಿಡ್ ಸೋಂಕಿತ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಪಿಪಿಇ ಕಿಟ್ ಧರಿಸಿ ಶಸ್ತ್ರ ಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
    ಆಸ್ಪತ್ರೆಯ ಕೋವಿಡ್ ಸೆಂಟರ್​ನಲ್ಲಿ ವೈದ್ಯರಾದ ಡಾ. ಶಂಕರಗೌಡ ಹಿರೇಗೌಡ್ರ ನೇತೃತ್ವದ ವೈದ್ಯರ ತಂಡದ ಸಾಧನೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
    ಮೇ 6ರಂದು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದ ತಾಲೂಕಿನ ಹೊಸನೀರಲಗಿ ನಿವಾಸಿಯನ್ನು ಕರೊನಾ ಖಚಿತಗೊಂಡ ಹಿನ್ನೆಲೆಯಲ್ಲಿ ಮೇ 8ರಂದು ಆಸ್ಪತ್ರೆಯ ಕೋವಿಡ್ ವಾರ್ಡ್​ಗೆ ಸೇರಿಸಲಾಗಿತ್ತು.
    ಕೋವಿಡ್ ವಾರ್ಡ್ ಸೇರ್ಪಡೆಯ ಸ್ವಲ್ಪ ಸಮಯದಲ್ಲೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ತಂಡ ಕೂಡಲೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.
    ತಾಯಿಗೆ ಕೋವಿಡ್ ಸೋಂಕು ತಗಲಿದ್ದರೂ ನವಜಾತ ಶಿಶುವಿಗೆ (ಗಂಡು ಮಗುವಿಗೆ) ಸೋಂಕು ತಗಲದಿರುವುದು ಅಚ್ಚರಿ ಮೂಡಿಸಿದೆ. ಹೆರಿಗೆಯನ್ನು ಸರಳ ರೀತಿಯಲ್ಲಿ ಕೈಗೊಂಡ ವೈದ್ಯರ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಪಟ್ಟಣದ ಸಾರ್ವಜನಿಕರು, ಇಂತಹ ಸಂದರ್ಭದಲ್ಲಿ ತಾಯಿ ಹಾಗೂ ಮಗುವನ್ನು ಕಾಪಾಡಿದ ವೈದ್ಯರು ದೇವರಿಗೆ ಸಮವಾಗಿದ್ದಾರೆ ಎಂದು ಕೊಂಡಾಡಿದ್ದಾರೆ.
    ವೈದ್ಯರ ತಂಡದಲ್ಲಿ ಆಸ್ಪತ್ರೆಯ ಡಾ. ಸುಜಾತಾ ಸಂಗೂರ, ಡಾ. ಅಜೀಖಾನ್, ಸ್ಟಾಪ್​ನರ್ಸ್ ನಜೀಮಾ ಮಕಾನದಾರ, ವೀಣಾ ಇನಾಮತಿ, ಮೈಲಾರಿ ಬಿಸೆ ಇದ್ದರು.

    ಕೋವಿಡ್ ಸೋಂಕಿತ ಗರ್ಭಿಣಿಗೆ ಮೊದಲ ಹೆರಿಗೆಯಾಗಿದ್ದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿಕೊಳ್ಳುವುದು ಅನಿವಾರ್ಯವಾಯಿತು. ಸವಣೂರಿನಲ್ಲಿನ ಕೋವಿಡ್ ವಾರ್ಡ್​ನಲ್ಲಿ ಇದು ಪ್ರಥಮ ಹೆರಿಗೆಯಾಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
    | ಡಾ. ಶಂಕರಗೌಡ ಹಿರೇಗೌಡ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts