More

    ಜಾಲಿಲೈಫ್​ಗೆ ಸಾಧು; ನಿರ್ದೇಶನ ಐದು ವರ್ಷದ ಬಳಿಕ ಡೈರೆಕ್ಟರ್ ಕ್ಯಾಪ್

    ಬೆಂಗಳೂರು: ಸಾಧುಕೋಕಿಲ ಸಕಲಕಲಾವಲ್ಲಭ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಟನೆ ಜತೆಗೆ ಸಂಗೀತ ನಿರ್ದೇಶನಕ್ಕೂ ಸೈ, ಚಿತ್ರ ನಿರ್ದೇಶನಕ್ಕೂ ಸೈ ಎಂದಿದ್ದಾರವರು. ಆದರೆ, ಇತ್ತೀಚಿನ ಕೆಲ ದಿನಗಳಿಂದ ಅವರ ನಿರ್ದೇಶನದಲ್ಲಿ ಸಿನಿಮಾಗಳು ಮೂಡಿಬಂದಿರಲಿಲ್ಲ. ಇದೀಗ ಆ ಹಸಿವನ್ನು ನೀಗಿಸಲು ಕಾಲೇಜ್ ಎಳೆಯ ‘ಜಾಲಿ ಲೈಫ್’ ಸಿನಿಮಾ ಶುರುವಾಗುತ್ತಿದೆ. ಈ ಚಿತ್ರಕ್ಕೆ ಸಾಧುಕೋಕಿಲ ನಿರ್ದೇಶಕ!

    2016ರಲ್ಲಿ ಸುಮಂತ್ ಶೈಲೇಂದ್ರ ಮತ್ತು ಶಾನ್ವಿ ಶ್ರೀವಾತ್ಸವ ನಟಿಸಿದ್ದ ‘ಭಲೇ ಜೋಡಿ’ ಚಿತ್ರಕ್ಕೆ ಕೊನೆಯದಾಗಿ ಸಾಧುಕೋಕಿಲ ನಿರ್ದೇಶನ ಮಾಡಿದ್ದರು. ಅದಾದ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ಧರಿಸಿರಲಿಲ್ಲ. ಇದೀಗ ಹೊಸ ತಂಡದ ಜತೆಗೆ ಸಾಧು ಆಗಮಿಸುತ್ತಿದ್ದಾರೆ. ಈ ಹಿಂದೆ ‘ತ್ರಿಕೋನ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ರಾಜಶೇಖರ್ ಈ ಚಿತ್ರಕ್ಕೆ ನಿರ್ವಪಕರಾಗಿದ್ದಾರೆ. ಕಥೆ ಮತ್ತು ಚಿತ್ರಕಥೆಯನ್ನು ರಾಜಶೇಖರ್ ಅವರೇ ಬರೆದಿದ್ದು, ನಿರ್ದೇಶನ ಮಾತ್ರ ಸಾಧುಕೋಕಿಲ ಮಾಡಲಿದ್ದಾರೆ.

    ಅಂದಹಾಗೆ, ಮಾರ್ಚ್​ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಹಿರಿಯ ನಟ ಸುಚೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಇತ್ತೀಚೆಗಷ್ಟೇ 500ಕ್ಕೂ ಅಧಿಕ ಕಲಾವಿದರನ್ನು ಆಡಿಷನ್ ಮಾಡಿ ಅದರಲ್ಲಿ 18 ಮಂದಿಯನ್ನು ಆಯ್ದುಕೊಳ್ಳಲಾಗಿದೆ. ಚಿತ್ರದಲ್ಲಿನ 5 ಹಾಡುಗಳಿಗೆ ಸ್ವತಃ ಸಾಧುಕೋಕಿಲ ಸಂಗೀತ ನೀಡಲಿದ್ದಾರೆ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಮಾಡಲಿದ್ದಾರೆ.

    ಸ್ವಾಮೀಜಿಯ ಇಶಾರೆಗೇ ತಂತಾನೇ ಚಲಿಸಿ ತೇರುಮನೆ ಸೇರಿಕೊಂಡ ರಥ; ವಿಡಿಯೋ ವೈರಲ್​..

    ಎಲ್​ಪಿಜಿ ಗ್ರಾಹಕರಿಗೆ ಸಿಹಿಸುದ್ದಿ : ಸಿಲಿಂಡರ್​ಗಾಗಿ ಕಾಯುವ ಪಾಡು ತಪ್ಪಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts