More

    ಚಿಕ್ಕಬಳ್ಳಾಪುರದಲ್ಲಿ ಸದ್ಗುರು ನೇತೃತ್ವದ ಮಣ್ಣು ಉಳಿಸಿ ಅಭಿಯಾನ

    ಚಿಕ್ಕಬಳ್ಳಾಪುರ: ಮಣ್ಣು ರಕ್ಷಣೆ ಸಲುವಾಗಿ ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನ ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ನೆರೆದಿದ್ದರು. ಬೈಕ್ ಪ್ರಯಾಣದ ಮೂಲಕ ಚಿಕ್ಕಬಳ್ಳಾಪುರದ ಜೂನಿಯರ್ ಕಾಲೇಜು ಮೈದಾನಕ್ಕೆ ಬಂದ ಸದ್ಗುರು, ಇಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದರು.

    ಕೆ.ವಿ.ಟ್ರಸ್ಟ್​ ಚೇರ್​ ಪರ್ಸನ್​ ನವೀನ ಕಿರಣ್, ನಗರದ ಪುರಸಭೆ ಸದಸ್ಯರಾದ ಮಹಾಕಾಳಿ ಬಾಬು ಮತ್ತು ಗಜೇಂದ್ರ, ಪ್ರಾದೇಶಿಕ ಆರೋಗ್ಯ ಅಧಿಕಾರಿ ಡಾ.ಪಿ.ವಿ. ರಮೇಶ್, ಪುರಸಭೆ ಮಾಜಿ ಸದಸ್ಯ ಮಂಜುನಾಥ್ ಮತ್ತು ಸ್ವಯಂಸೇವಕರು ಸದ್ಗುರು ಅವರನ್ನು ಆದರದಿಂದ ಬರಮಾಡಿಕೊಂಡು ಅಭಿಯಾನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

    ಚಿಕ್ಕಬಳ್ಳಾಪುರದ ಸ್ವಯಂಸೇವಕರು ಮತ್ತು ಜನಸಾಮಾನ್ಯರನ್ನು ಕುರಿತು ಭಾವುಕರಾಗಿ ಮಾತನಾಡಿದ ಸದ್ಗುರು, ನನ್ನ ತಾತನ ಊರಿನ ಜನರನ್ನು ಉದ್ದೇಶಿಸಿ ಮಾತನಾಡಲು ಇದು ನನ್ನ ಮೊದಲ ಅವಕಾಶ ಎನ್ನುತ್ತ ಕಾರ್ಯನೀತಿ ಸರ್ಕಾರ ಮಾಡುತ್ತದೆ, ಆದರೆ ಜನರೇ ಅದನ್ನು ಯಶಸ್ವಿಗೊಳಿಸಬೇಕು ಎಂದು ಮಣ್ಣು ರಕ್ಷಣೆಯ ಮಹತ್ವ ಮತ್ತು ಅಗತ್ಯವನ್ನು ವಿವರಿಸಿದರು.

    ದೀರ್ಘ ಕಾಲ ಗೈರಾಗಿದ್ದ ತಂದೆ ಕೆಲಸದಿಂದ ವಜಾ, ‘ಅಪ್ಪನಿಗೆ ಕೆಲ್ಸ ಕೊಡಿ’ ಎಂಬ ಪುತ್ರಿಯ ಕೋರಿಕೆಗೆ ಮರುಗಿ ಉದ್ಯೋಗ ಕೊಟ್ಟ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts