More

    ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ; ಕೊಯಂಬತ್ತೂರಿನಲ್ಲಿ ಹಕ್ಕು ಚಲಾಯಿಸಿದ ಸದ್ಗುರು

    ಕೊಯಂಬತ್ತೂರು: 543 ಲೋಕಸಭೆ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಇಂದು (ಏಪ್ರಿಲ್ 19) ಮೊದಲ ಹಂತದ ಮತದಾನ ನಡೆಯುತ್ತಿದೆ. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಟ್ಟು 102 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಈ ಪೈಕಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 1,600ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನವೂ ಶಾಂತ ರೀತಿಯಿಂದ ನಡೆಯುತ್ತಿದ್ದು ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

    ಇನ್ನು ಲೋಕಸಭೆ ಚುನಾವಣೆ ನಿಮಿತ್ತ ಇಶಾ ಫೌಂಡೇಶನ್​ನ ಸಂಸ್ಥಾಪಕರಾದ ವಾಸುದೇವ ಅವರು ತಮಿಳುನಾಡಿದ ಕೊಯಂಬತ್ತೂರಿನಲ್ಲಿ ಮತ ಚಲಾಯಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸದ್ಗುರು ಗುಣಮುಖರಾಗುತ್ತಿದ್ದಾರೆ.

    ಏಪ್ರಿಲ್​ 19ರಂದು ಬೆಳಗ್ಗೆ 07 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 06ಕ್ಕೆ ಮುಕ್ತಾಯವಾಗಲಿದೆ. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಒಂದೆಡೆಯಿಂದ ಇನ್ನೊಂದೆಡೆ ಕರೆದೊಯ್ಯಲು 41 ಹೆಲಿಕಾಪ್ಟರ್‌ಗಳು, 84 ವಿಶೇಷ ರೈಲುಗಳು ಹಾಗೂ ಸರಿಸುಮಾರು ಒಂದು ಲಕ್ಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

    ಇದನ್ನೂ ಓದಿ: ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆಗಳನ್ನು ಬರೆದ ರೋಹಿತ್​ ಶರ್ಮಾ; ಏನದು?

    ಯಾವ್ಯಾವ ರಾಜ್ಯಗಳಲ್ಲಿ ಮತದಾನ?

    1) ಅರುಣಾಚಲಪ್ರದೇಶ (2): ಅರುಣಾಚಲ ಪೂರ್ವ, ಅರುಣಾಚಲ ಪಶ್ಚಿಮ

    2) ಅಸ್ಸಾಂ (5): ಕಾಜಿರಂಗ, ಸೋನಿತ್‌ಪುರ್, ಲಖಿಂಪುರ, ದಿಬ್ರುಗಢ್, ಜೋರ್ಹತ್

    3) ಬಿಹಾರ (4): ಔರಂಗಾಬಾದ್, ಗಯಾ, ನಾವಡಾ, ಜಮುಯಿ

    4) ಛತ್ತೀಸ್‌ಗಢ (1): ಬಸ್ತಾರ್ (ST)

    5) ಮಧ್ಯಪ್ರದೇಶ (6): ಛಿಂದ್ವಾರಾ, ಸಿಧಿ, ಶಹದೋಲ್, ಜಬಲ್ಪುರ್, ಮಂಡ್ಲಾ, ಬಾಲಾಘಾಟ್

    6) ಮಹಾರಾಷ್ಟ್ರ (5): ನಾಗ್ಪುರ್, ಗಡ್ಚಿರೋಲಿ-ಚಿಮೂರ್ (ಎಸ್ಟಿ), ಭಂಡಾರಾ-ಗೊಂಡಿಯಾ, ಚಂದ್ರಾಪುರ್, ರಾಮ್ಟೆಕ್ (ಎಸ್ಸಿ)

    7) ಮಣಿಪುರ (2)

    8) ಮೇಘಾಲಯ (2): ಶಿಲ್ಲಾಂಗ್ ಮತ್ತು ತುರಾ

    9) ಮಿಜೋರಾಂ (1): ಮಿಜೋರಾಂ

    10) ನಾಗಾಲ್ಯಾಂಡ್ (1): ನಾಗಾಲ್ಯಾಂಡ್

    11) ಸಿಕ್ಕಿಂ (1): ಸಿಕ್ಕಿಂ

    12) ತ್ರಿಪುರ (1): ತ್ರಿಪುರ ಪಶ್ಚಿಮ

    13) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1): ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

    14) ಜಮ್ಮು ಮತ್ತು ಕಾಶ್ಮೀರ (1): ಉಧಂಪುರ

    15) ಲಕ್ಷದ್ವೀಪ (1): ಲಕ್ಷದ್ವೀಪ

    16) ಪುದುಚೇರಿ (1): ಪುದುಚೇರಿ

    17) ಪಶ್ಚಿಮ ಬಂಗಾಳ (3): ಕೂಚ್‌ಬೆಹರ್, ಅಲಿಪುರ್ದುವಾರ್, ಜಲ್ಪೈಗುರಿ

    18) ಉತ್ತರಾಖಂಡ (5): ನೈನಿತಾಲ್-ಉಧಮ್ ಸಿಂಗ್ ನಗರ, ಅಲ್ಮೋರಾ, ಹರಿದ್ವಾರ, ಗರ್ವಾಲ್ (ಪೌರಿ), ತೆಹ್ರಿ ಗರ್ವಾಲ್

    19) ಉತ್ತರ ಪ್ರದೇಶ (8): ಸಹರಾನ್ಪುರ್, ಕೈರಾನಾ, ಮುಜಾಫರ್ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ್, ಪಿಲಿಭಿತ್

    20) ರಾಜಸ್ಥಾನ (12): ಗಂಗಾನಗರ, ಬಿಕಾನೇರ್, ಚುರು, ಜುಂಜುನು, ಸಿಕರ್, ಜೈಪುರ ಗ್ರಾಮಾಂತರ, ಜೈಪುರ, ಅಲ್ವಾರ್, ಭರತ್‌ಪುರ್, ಕರೌಲಿ-ಧೋಲ್‌ಪುರ್, ದೌಸಾ, ನಾಗೌರ್

    21) ತಮಿಳುನಾಡು (39): ತಿರುವಳ್ಳೂರ್ (SC), ಚೆನ್ನೈ ಉತ್ತರ , ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಶ್ರೀಪೆರಂಬದೂರ್, ಕಾಂಚೀಪುರಂ (SC), ಅರಕ್ಕೋಣಂ, ವೆಲ್ಲೂರು, ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ಅರಣಿ, ವಿಲುಪ್ಪುರಂ (SC), ಕಲ್ಲಕುರಿಚಿ, ಸೇಲಂ, ನಾಮ , ಈರೋಡ್ GEN, ತಿರುಪ್ಪೂರ್, ನೀಲಗಿರಿ (SC), ಕೊಯಮತ್ತೂರು, ಪೊಲ್ಲಾಚಿ, ದಿಂಡುಗಲ್, ಕರೂರ್, ತಿರುಚಿರಾಪಳ್ಳಿ, ಪೆರಂಬಲೂರ್, ಕಡಲೂರು, ಚಿದಂಬರಂ (SC), ಮೈಲಾಡುತುರೈ, ನಾಗಪಟ್ಟಣಂ, ತಂಜಾವೂರು, ಮಧುರೈ, ಶಿವಗಂಗಾ , ವಿರುಧುನಗರ, ರಾಮನಾಥಪುರಂ, ತೂತುಕ್ಕುಡಿ , ತೆಂಕಶಿ (SC), ತಿರುನೆಲ್ವೇಲಿ, ಕನ್ಯಾಕುಮಾರಿ ಕ್ಷೇತ್ರಗಳಿಗೆ ಮತದಾ ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts