More

    ಸದಾಶಿವ ಆಯೋಗದ ವರದಿ ತಿರಸ್ಕರಿಸಿ

    ಘಟಪ್ರಭಾ: ಜಾತಿ-ಜಾತಿಗಳ ನಡುವೆ ದ್ವೇಷ ಹುಟ್ಟುಹಾಕುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಬೇಕೆಂದು ಆಗ್ರಹಿಸಿ ಗೋಕಾಕ ತಾಲೂಕು ಬೋವಿ-ವಡ್ಡರ ಸಮುದಾಯದ ಮುಖಂಡರು ಭಾನುವಾರ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.

    ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಚರ್ಚೆ ಮಾಡದೆ ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡಬಾರದು. ವರದಿಯಲ್ಲಿ ಪರಿಶಿಷ್ಟರನ್ನು ಒಡೆದು ಆಳುವ ಯತ್ನ ಮಾಡಲಾಗಿದೆ. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಮತ್ತು ಆಸಕ್ತರಿಗೆ, ಸಂಘ ಸಂಸ್ಥೆಗಳಿಗೆ ಈ ವರದಿಯ ಧೃಡೀಕೃತ ಪ್ರತಿ ನೀಡಬೇಕು. ಆಕ್ಷೇಪಣೆ, ತಕರಾರು ಮತ್ತು ನ್ಯಾಯಸಮ್ಮತ ತಿದ್ದುಪಡಿಗಳನ್ನು ಸೂಚಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಸಮುದಾಯದ ಜಿಲ್ಲಾಧ್ಯಕ್ಷ ಕೆ.ಎಸ್.ಮಮದಾಪುರ, ತಾಲೂಕಾಧ್ಯಕ್ಷ ಲಕ್ಷ್ಮಣ ಗಾಡಿವಡ್ಡರ, ಪರಶುರಾಮ ಕಲಕುಟಗಿ, ಹನುಮಂತ ಗಾಡಿವಡ್ಡರ, ಅರ್ಜುನ ಗಾಡಿವಡ್ಡರ, ಶೆಟ್ಯಪ್ಪ ಗಾಡಿವಡ್ಡರ, ಯಲ್ಲಪ್ಪ ಗಾಡಿವಡ್ಡರ, ರಾಜು ಗಾಡಿವಡ್ಡರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts