More

    ವಿಶ್ವ ಪರಂಪರೆ ಪಟ್ಟಿಗೆ ಹೊಯ್ಸಳ ದೇವಾಲಯ ಸಮೂಹ ನಾಮಾಂಕಿತ; ಭಾರತದಿಂದ ಯುನೆಸ್ಕೊಗೆ ಪ್ರಸ್ತಾವನೆ

    ಬೆಂಗಳೂರು: ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು 2022-23ನೇ ಸಾಲಿಗೆ ಭಾರತದಿಂದ ಬೇಲೂರು-ಹಳೆಬೀಡು-ಸೋಮನಾಥಪುರದ ಹೊಯ್ಸಳ ಪವಿತ್ರ ಸಮೂಹವನ್ನು ಕೇಂದ್ರ ಸರ್ಕಾರ ಪ್ರಸ್ತಾವಿಸಿದೆ.

    ಈಗಾಗಲೆ ‘ಪವಿತ್ರ ಹೊಯ್ಸಳ ಸಮೂಹಗಳು’ ಎಂಬ ಹೆಸರಿನಲ್ಲಿ ಯುನೆಸ್ಕೊ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಗಾಗಿ ಸಂಭಾವ್ಯ ಪಟ್ಟಿಯಲ್ಲಿ ಬೇಲೂರು ಹಾಗೂ ಹಳೆಬೀಡಿನ ಹೆಸರುಗಳು ಯುನೆಸ್ಕೊ ಪರಿಗಣನೆಯಲ್ಲಿವೆ. ಇದೀಗ ಕೇಂದ್ರ ಸರ್ಕಾರ ಮೈಸೂರಿನ ಸೋಮನಾಥಪುರವನ್ನೂ ಸೇರಿಸಿ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ ಮಾಡಿದೆ.

    ಯುನೆಸ್ಕೊದ ವಿಶ್ವಪರಂಪರೆ ವಿಭಾಗದ ಲಜೇರ್ ಎಲಂದೋ ಅವರಿಗೆ ಯುನೆಸ್ಕೊದಲ್ಲಿ ಭಾರತದ ಶಾಶ್ವತ ರಾಯಭಾರಿ ವಿಶಾಲ್ ವಿ. ವರ್ಮ ಅವರು ಸೋಮವಾರ ಭಾರತದ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದ್ದಾರೆ.

    ಮೊದಲಿಗೆ ವಿಶ್ವ ಪರಂಪರೆ ಕೇಂದ್ರವು ಪ್ರಸ್ತಾವನೆಯ ತಾಂತ್ರಿಕ ಅಂಶಗಳನ್ನು ಪರಿಶೀಲನೆ ಮಾಡಲಿದೆ. ಪ್ರಸ್ತಾವನೆ ಅಂಗೀಕಾರವಾದರೆ ಮಾರ್ಚ್ ವೇಳೆಗೆ ತಿಳಿಸಲಾಗುತ್ತದೆ. 2022ರ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. 2023ರ ಜುಲೈ ಅಥವಾ ಆಗಸ್ಟ್ ವೇಳೆಗೆ ಅಂತಿಮ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

    ವಿಶ್ವ ಪರಂಪರೆ ಪಟ್ಟಿಗೆ ಹೊಯ್ಸಳ ದೇವಾಲಯ ಸಮೂಹ ನಾಮಾಂಕಿತ; ಭಾರತದಿಂದ ಯುನೆಸ್ಕೊಗೆ ಪ್ರಸ್ತಾವನೆ

    ಈಗಾಗಲೆ ಬೇಲೂರು, ಹಳೆಬೀಡು ಹಾಗೂ ಸೋಮನಾಥಪುರದ ಅತ್ಯಂತ ಸೂಕ್ಷ್ಮ, ಸಂಕೀರ್ಣ ಹಾಗೂ ಸುಂದರ ಶಿಲ್ಪಕಲೆಗಳು ಪ್ರಸಿದ್ಧಿ ಪಡೆದಿವೆ. ಯುನೆಸ್ಕೊ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾದರೆ ಜಾಗತಿಕ ಮಟ್ಟದಲ್ಲಿ ಸ್ಥಳವನ್ನು ಗುರುತಿಸಲಾಗುತ್ತದೆ ಹಾಗೂ ಪ್ರವಾಸೋದ್ಯಮಕ್ಕೂ ಇಂಬು ಸಿಗುತ್ತದೆ.
    ಪ್ರಸ್ತಾವನೆ ಕುರಿತು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಪ್ರತಿಕ್ರಿಯಿಸಿದ್ದು, ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಲು ಹೊಯ್ಸಳ ದೇವಾಲಯ ಸಮೂಹವನ್ನು ಪ್ರಸ್ತಾವನೆ ಸಲ್ಲಿಸಿರುವುದು ಐತಿಹಾಸಿಕ ದಿನ. ಕೇಂದ್ರ ಸರ್ಕಾರವು ಅಭಿವೃದ್ಧಿಯ ಜತೆಗೆ ಪರಂಪರೆ ರಕ್ಷಣೆಗೂ ಮಹತ್ವ ನೀಡುತ್ತದೆ ಎಂದಿದ್ದಾರೆ.

    ವಿಶ್ವ ಪರಂಪರೆ ಪಟ್ಟಿಗೆ ಹೊಯ್ಸಳ ದೇವಾಲಯ ಸಮೂಹ ನಾಮಾಂಕಿತ; ಭಾರತದಿಂದ ಯುನೆಸ್ಕೊಗೆ ಪ್ರಸ್ತಾವನೆ

    ಈಗಾಗಲೆ ಸಂರಕ್ಷಿತ ಪ್ರದೇಶ: ಮೂರು ಸ್ಥಳಗಳೂ ಈಗಾಗಲೆ ಸಂರಕ್ಷಿತ ಪ್ರದೇಶಗಳೆಂದು ಘೋಷಣೆಯಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿಗಾ ಹಾಗೂ ನಿಯಂತ್ರಣದಲ್ಲಿವೆ. ರಾಜ್ಯ ಸರ್ಕಾರವು ಸ್ಥಳರ ಸಂರಕ್ಷಣೆ ಹೊಣೆ ಹೊತ್ತಿದೆ. ಯುನೆಸ್ಕೊ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾದರೆ ಸ್ಥಳ ಹಾಗೂ ಪ್ರದೇಶದ ಸಮಗ್ರ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ಲಭಿಸುತ್ತದೆ.

    ವಿಶ್ವ ಪರಂಪರೆ ಪಟ್ಟಿಗೆ ಹೊಯ್ಸಳ ದೇವಾಲಯ ಸಮೂಹ ನಾಮಾಂಕಿತ; ಭಾರತದಿಂದ ಯುನೆಸ್ಕೊಗೆ ಪ್ರಸ್ತಾವನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts