More

    ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಇಟ್ಟವ ಅಂತೂ ಸಿಕ್ಕಿಬಿದ್ದ!

    ಮುಂಬೈ: ಕಳೆದ ಫೆಬ್ರವರಿ 25 ರಂದು ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸ ಅಂಟಿಲಿಯಾ ಮುಂದೆ ಸ್ಕಾರ್ಪಿರೋ ಕಾರ್​​ನಲ್ಲಿ ಸ್ಪೋಟಕ ಹಾಗೂ ಬೆದರಿಕೆ ಪತ್ರ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್​​ಐಎ, ಕಾರ್​​ ತೆಗೆದುಕೊಂಡು ಹೋಗಿ ಸ್ಪೋಟಕ ಇಟ್ಟವರನ್ನು ಪತ್ತೆ ಮಾಡಿದೆ.

    ಹೌದು, ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಇಟ್ಟಿದ್ದು ಅಮಾನತಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಖಾಸಗಿ ಕಾರ್​ ಚಾಲಕ ಎಂಬುದು ಎನ್​ಐಎ ತನಿಖೆಯಲ್ಲಿ ತಿಳಿದು ಬಂದಿದೆ.

    ಅಂಬಾನಿ ಮನೆ ಬಳಿ ಸ್ಪೋಟಕ ಇಟ್ಟು ಅದರ ತನಿಖೆ ಹೊಣೆ ತಾನು ತೆಗೆದುಕೊಂಡು ಇಲಾಖೆಯಲ್ಲಿ ಮಿಂಚಬೇಕು ಎಂಬ ಉದ್ದೇಶದಿಂದ (ಪ್ರಾಥಮಿಕ ತನಿಖೆ ಮಾಹಿತಿ ಪ್ರಕಾರ) ಎಸಿಪಿಯಾಗಿದ್ದ ಸಚಿನ್ ವಾಜೆ ಮನ್ಸುಕ್ ಹಿರೇನ್​ನಿಂದ ಸ್ಕಾರ್ಪಿಯೋ ಕಾರ್​​ ಒಂದನ್ನು ಪಡೆದಿದ್ದರು. ಫೆ 17 ರಂದು ಹಿರೇನ್ ಕಾರ್​​ನ್ನು ಕಮೀಷನರ್ ಕಚೇರಿಗೆ ತೆಗೆದುಕೊಂಡು ಬಂದಿದ್ದ. ನಂತರ ಫೆ 19 ರಂದು ಸಾಕೇತ್ ಸೊಸೈಟಿ ಬಳಿ ಹಿರೇನ್, ವಾಜೆ ಅವರಿಗೆ ಕಾರ್​ ಹಸ್ತಾಂತರಿಸಿದ್ದ.

    ಇದನ್ನೂ ಓದಿ: ಸಿಡಿ ಲೇಡಿಗೆ ಸಹಾಯ ಮಾಡಿದ್ದೇವೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಮಹಮದ್ ನಳಪಾಡ್

    ನಂತರ ಫೆ 24 ರಂದು ರಾತ್ರಿ ಸ್ಕಾರ್ಪಿಯೋ ಕಾರ್​ನ್ನು ತೆಗೆದುಕೊಂಡ ವಾಜೆ ಖಾಸಗಿ ಕಾರ್ ಚಾಲಕ 20 ಜಿಲೆಟಿನ್ ಕಡ್ಡಿಗಳನ್ನು ತುಂಬಿಸಿ ಅಂಬಾನಿ ನಿವಾಸದ ಬಳಿ ನಿಲ್ಲಿಸಿ ಬಂದಿದ್ದ. ಈ ಚಾಲಕನಿಗೆ ಸಚಿನ್ ವಾಜೆಯೇ ಬೆಂಗಾವಲು ವಾಹನ ಇನ್ನೋವಾ ಕಾರ್ ತೆಗೆದುಕೊಂಡು ಹೋಗಿದ್ದರು. ಇದಕ್ಕಾಗಿ ಎರಡು ಸಾರಿ ಇನ್ನೋವಾದ ನಂಬರ್​ ಪ್ಲೇಟ್ ಬದಲಾವಣೆ ಮಾಡಿದ್ದರು ವಾಜೆ. ಅಂಬಾನಿ ಮನೆ ಬಳಿ ಅವರ ಕಾರ್ ಚಾಲಕನನ್ನು ಹತ್ತಿಸಿಕೊಂಡು ಹೋಗಿದ್ದರು. ಮತ್ತೆ ಕೆಲ ಹೊತ್ತಿನ ನಂತರ ವೇಷ ಮರಿಸಿಕೊಂಡು ನಡೆದುಕೊಂಡು ಹೋಗಿ ಕಾರ್​​ನಲ್ಲಿ ಬೆದರಿಕೆ ಪತ್ರ ಇಟ್ಟು ಬಂದಿದ್ದರು ವಾಜೆ.

    ಇಷ್ಟೇಲ್ಲಾ ಮಾಡಿದ ಮೇಲೆ ಕಮೀಷನರ್ ಕಚೇರಿ ಹಾಗೂ ಸಾಕೇತ್ ಸೊಸೈಟಿ ಬಿಲ್ಡಿಂಗ್ ಬಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಚಿನ್ ವಾಜೆ ಅಳಿಸಿ ಹಾಕಿದ್ದರು ಎಂದು ಎನ್​ಐಎ ಆರೋಪಿಸಿದೆ. ಮಾರ್ಚ್ 14 ರಂದು ಎನ್​​ಐಎ ಸಚಿನ್ ವಾಜೆಯನ್ನು ಬಂಧಿಸಿತ್ತು. ಏನೋ ಮಾಡಲು ಹೋಗಿ ಕಡೆಗೆ ತಾವೇ ಹೆಣೆದ ಬಲೆಯಲ್ಲಿ ಸಚಿನ್ ವಾಜೆ ಸಿಲುಕಿಕೊಂಡಿದ್ದಾರೆ.

    ಹೆಣ್ಣೇ ಸಿಕ್ತಿಲ್ಲ ಎಂದು ಸಿಕ್ಕಸಿಕ್ಕವರ ಬಳಿ ಕಣ್ಣೀರು ಹಾಕಿದ್ದ ಈ ಕುಳ್ಳನಿಗೆ ಈಗ ಹುಡುಗಿಯರ ಆಯ್ಕೆಯೇ ಕಷ್ಟವಾಗಿದೆ!

    ‘ದೇಶಮುಖ್ ವಿರುದ್ಧ ದೂರು ಏಕೆ ದಾಖಲಿಸಲಿಲ್ಲ ?’ – ಹೈಕೋರ್ಟ್ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts