More

    VIDEO | ಮುಂಬೈನಲ್ಲೇ ದಾರಿ ತಪ್ಪಿದ ತೆಂಡುಲ್ಕರ್‌! ಮನೆಗೆ ಮರಳಲು ನೆರವಾದ ರಿಕ್ಷಾ ಡ್ರೈವರ್

    ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ವಿಶ್ವದೆಲ್ಲೆಡೆ ಆಡಿದ್ದಾರೆ. ಇದಕ್ಕಾಗಿ ವಿಶ್ವದ ಸಾಕಷ್ಟು ದೇಶಗಳನ್ನು ಸುತ್ತಾಡಿದ್ದಾರೆ. ಆದರೆ ಅವರು ತವರೂರು ಮುಂಬೈನಲ್ಲೇ ಮನೆಗೆ ಮರಳುವ ದಾರಿ ಸಿಗದೆ ಪರದಾಡಿದ್ದಾರೆ. ಆಗ ಅವರ ಕಾರಿಗೆ ದಾರಿ ತೋರಿಸಿದವರೇ ಆಟೋ ಡ್ರೈವರ್!

    ಹೌದು, ಈ ವರ್ಷ ಜನವರಿಯಲ್ಲಿ ಮುಂಬೈ ಹೊರವಲಯದಲ್ಲಿ ತಮ್ಮ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಮನೆಗೆ ಮರಳುವ ದಾರಿ ಗೊತ್ತಾಗದೆ ಸಚಿನ್ ತೆಂಡುಲ್ಕರ್ ಕಂಗಾಲಾಗಿದ್ದರು. ಒನ್‌ವೇಯಿಂದಾಗಿ ಅವರಿಗೆ ಯಾವ ದಾರಿಯಲ್ಲಿ ಹೋಗಬೇಕೆಂದು ತಿಳಿಯದಾಗಿತ್ತು. ಆಗ ರಿಕ್ಷಾ ಚಾಲಕನೊಬ್ಬನ ಬಳಿಕ ದಾರಿ ಕೇಳಿದ್ದರು. ಆತ ಮರಾಠಿಯಲ್ಲೇ ಸಚಿನ್‌ಗೆ ಮನೆಗೆ ಮರಳುವ ದಾರಿಯನ್ನು ವಿವರಿಸಿದ್ದರು. ಆಗ ಸಚಿನ್, ಮಂಗೇಶ್ ಎಂಬ ಹೆಸರಿನ ಆ ಆಟೋ ಚಾಲಕನಿಗೆ ಮರಾಠಿಯಲ್ಲೇ ಧನ್ಯವಾದ ತಿಳಿಸಿದ್ದರು.

    ಈ ಘಟನೆಯ ಒಂದೂವರೆ ನಿಮಿಷದ ವಿಡಿಯೋವನ್ನು ಸಚಿನ್ ತೆಂಡುಲ್ಕರ್ ಫೇಸ್‌ಬುಕ್‌ನಲ್ಲಿ ಕಳೆದ ಬುಧವಾರ ಹಂಚಿಕೊಂಡಿದ್ದಾರೆ. ಮನೆಗೆ ಮರಳುವ ದಾರಿ ಸ್ಪಷ್ಟವಾದ ಬಳಿಕ ಸಚಿನ್ ತೆಂಡುಲ್ಕರ್ ಜತೆಗೆ ಆ ಆಟೋ ಚಾಲಕ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

    ‘ಕಳೆದ ಕೆಲ ಸಮಯದಿಂದ ನಮಗೆ ತಂತ್ರಜ್ಞಾನಗಳು ನೆರವಾಗುತ್ತಿರಬಹುದು. ಆದರೆ ಮಾನವತ್ವಕ್ಕೆ ಯಾವುದೂ ಪರ್ಯಾಯವಿಲ್ಲ. ಕಳೆದ ಜನವರಿಯಲ್ಲಿ ನಾನು ಮನೆಗೆ ಮರಳುವ ದಾರಿ ತಿಳಿದಾಗಿದ್ದೆ. ಆಗ ಮಂಗೇಶ್ ಅವರು ನನಗೆ ನೆರವಿನ ಹಸ್ತ ಚಾಚಿದ್ದರು’ ಎಂದು ಸಚಿನ್ ತೆಂಡುಲ್ಕರ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts