More

    ಅಯ್ಯಪ್ಪ ಭಕ್ತರಿಗೆ ಸದ್ಯಕ್ಕಿಲ್ಲ ಶಬರಿಮಲೆಗೆ ಪ್ರವೇಶ; ಉತ್ಸವ ಮುಂದೂಡಿಕೆ

    ತಿರುವನಂತಪುರ: ತಿರುವಾಂಕೂರು ದೇವಸ್ವ ಮಂಡಳಿ ಹಾಗೂ ಶಬರಿಮಲೆ ದೇಗುಲದ ಮುಖ್ಯ ತಂತ್ರಿ ಕಾಂತರಾರು ಮಹೇಶ್​ ಮೋಹನಾರು ಅವರೊಂದಿಗೆ ಸಭೆ ನಡೆಸಿದ ಕೇರಳ ಸರ್ಕಾರ, ಶಬರಿಮಲೆ ದೇಗುಲದ ಪ್ರವೇಶವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದೆ. ಇದಲ್ಲದೇ, ಇದೇ ತಿಂಗಳ 19ರಂದು ನಡೆಯಬೇಕಿದ್ದ ಉತ್ಸವವನ್ನು ರದ್ದುಗೊಳಿಸಿದೆ.

    ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್​ ನೇತೃತ್ವದಲ್ಲಿ, ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ 14ರಂದು ಆರಂಭಗೊಳ್ಳಬೇಕಿದ್ದ ದೇಗುಲ ಪ್ರವೇಶ ಮುಂದೂಡಿದಂತಾಗಿದೆ.

    ಇದನ್ನೂ ಓದಿ; ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್​; ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಗಂಗೂಲಿ ಪತ್ರ 

    ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದನ್ನು ಮುಖ್ಯ ತಂತ್ರಿ ವಿರೋಧಿಸಿದ್ದರು. ಜತೆಗೆ, ಬಿಜೆಪಿ ಕೂಡ ಇದಕ್ಕೆ ಬೆಂಬಲ ನೀಡಿತ್ತು. ಮುಖ್ಯ ತಂತ್ರಿಗಳ ಅಭಿಪ್ರಾಯಕ್ಕೆ ಸರ್ಕಾರ ಮನ್ನಣೆ ನೀಡಬೇಕೆಂದು ಒತ್ತಾಯಿಸಿತ್ತು.

    ಈ ನಡುವೆ, ಮುಜರಾಯಿ ಆಯುಕ್ತರು ದೇಗುಲವನ್ನು ತೆರೆಯುವ ಬಗ್ಗೆ ಸಿಎಂ ಸಭೆಗೂ ಮುನ್ನ ಹಾಗೂ ನಂತರ ತನ್ನೊಂದಿಗೆ ಚರ್ಚಿಸಿದ್ದರು. ಅಲ್ಲದೇ, ದೇವಸ್ವಂ ಮಂಡಳಿ ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಂಡಿಲ್ಲ ಎಂದು ದೇಗುಲದ ಮುಖ್ಯ ಅರ್ಚಕ ಮಹೇಶ್​ ಮೋಹನಾರು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ; ಮಹಿಳೆಯರಿಗಿನ್ನು ಹದಿನೆಂಟಲ್ಲ, ಮದುವೆ ವಯಸ್ಸು 21…! 

    ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಆರೋಗ್ಯದ ದೃಷ್ಟಿಯನ್ನು ಮುಖ್ಯವಾಗಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

    ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts