More

    ದಿನಕ್ಕೆ ಸಾವಿರ ಮಂದಿಗಷ್ಟೇ ಶಬರಿಮಲೆ ಪ್ರವೇಶ: ಸರ್ಕಾರಕ್ಕೆ ತಜ್ಞ ಸಮಿತಿ ವರದಿ ಸಲ್ಲಿಕೆ

    ಕಾಸರಗೋಡು: ಕೋವಿಡ್ ನಿಯಮಗಳಿಂದ ಮುಚ್ಚಿದ್ದ ಶಬರಿಮಲೆ ದೇವಸ್ಥಾನ ಮತ್ತೆ ತೆರೆದುಕೊಳ್ಳಲಿದ್ದು, ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ 1,000 ಜನರಿಗೆ ಮತ್ತು ಶನಿವಾರ ಮತ್ತು ಭಾನುವಾರ 2,000 ಜನರಿಗೆ ದರ್ಶನಕ್ಕೆ ಅವಕಾಶ ನೀಡಬಹುದು ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.

    60 ವರ್ಷ ಮೇಲ್ಪಟ್ಟ ಭಕ್ತರು ಗಂಭೀರ ಕಾಯಿಲೆ ಇಲ್ಲ ಎಂಬುದನ್ನು ಸಾಬೀತುಪಡಿಸುವ ವೈದ್ಯರ ವರದಿ ತರಬೇಕು ಎಂಬ ಸಲಹೆಯನ್ನು ನೀಡಿದೆ. ಕೋವಿಡ್ ಜಾಗ್ರತಾ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿದವರಿಗೆ ಮಾತ್ರ ದರ್ಶನ ಅವಕಾಶ. 48 ತಾಸುಗಳ ಮೊದಲು ಕೋವಿಡ್ ನೆಗೆಟಿವ್ ಎಂಬ ತಪಾಸಣಾ ವರದಿಯನ್ನು ಪೋರ್ಟಲ್​ಗೆ ಅಪ್​ಲೋಡ್ ಮಾಡಿ, ದಾಖಲೆಗಳೊಂದಿಗೆ ನೀಲಕಲ್​ನ ಎಂಟ್ರಿ ಪಾಯಿಂಟ್​ಗೆ ಆಗಮಿಸುವವರನ್ನು ಆಂಟಿಜೆನ್ ಟೆಸ್ಟ್​ಗೆ ಒಳಪಡಿಸಬೇಕು.

    ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ. ಈ ತಪಾಸಣಾ ವೆಚ್ಚವನ್ನು ಭಕ್ತರೇ ವಹಿಸಬೇಕು ಎಂದು ವರದಿ ತಿಳಿಸಿದೆ. ಸರ್ಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.

    ಬಿಹಾರ ಚುನಾವಣೆ: ಯುಪಿಎ ಮೈತ್ರಿಕೂಟದ ಸೀಟುಹಂಚಿಕೆ ಫೈನಲ್​, ಯಾರಿಗೆಷ್ಟು, ಸಿಎಂ ಅಭ್ಯರ್ಥಿ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts