More

    ‘ಉದ್ಧಟತನ ತೋರುವ ಅಧಿಕಾರಿ ಇಟ್ಟುಕೊಂಡು ಜನರ ಜೀವಗಳ ಜತೆ ಆಟ ಆಡ್ಬೇಡಿ’

    ಮೈಸೂರು: ದಯವಿಟ್ಟು ಉದ್ಧಟತನ ತೋರುವ ಅಧಿಕಾರಿಯನ್ನು ಇಟ್ಟುಕೊಂಡು ಜನರ ಜೀವಗಳ ಜತೆ ಆಟ ಆಡಬೇಡಿ. ನಿಮ್ಮ ಭೂ ವ್ಯವಹಾರ ಇದ್ದರೆ ಇಂತಹ ಜಿಲ್ಲಾಧಿಕಾರಿ ಇಟ್ಟುಕೊಳ್ಳಿ ಎಂದು ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾರಾ ಮಹೇಶ್​ ವಾಗ್ದಾಳಿ ನಡೆದಿದೆ.

    ಆಕ್ಸಿಜನ್​ ಕೊರತೆಯಿಂದ ಚಾಮರಾಜನಗರದಲ್ಲಿ ಕರೊನಾ ರೋಗಿಗಳು ಸಾವು ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಸಾರಾ ಮಹೇಶ್​ ಮಾತನಾಡಿದರು. ಆಕ್ಸಿಜನ್​ ಕೊರತೆಯಿಂದ ಮೂರು ಜನ ಮಾತ್ರ ಮೃತಪಟ್ಟಿದ್ದಾರೆಂದ ಆರೋಗ್ಯ ಸಚಿವ ಸುಧಾಕರ್​ ಹೇಳಿದ್ದಾರೆ. ಹಾಗಿದ್ರೆ ಅದು ಸಾವು ಅಲ್ಲವಾ ಸ್ವಾಮಿ? ಮೊದಲು ಡ್ರಗ್ ಕಂಟ್ರೋಲರ್​ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.

    ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಆಗ್ತಿದೆ. ಈ‌ ಬಗ್ಗೆ ನನಗೆ ಸಾಕಷ್ಟು ಅನುಮಾನ ಬಂದಿದೆ ಎಂದು ಕೆಲವೊಂದು ಮಾಹಿತಿ ತೋರಿಸಿ ಸಾರಾ ಮಹೇಶ್​, ಗಂಭೀರ ಆರೋಪ ಮಾಡಿದರು.

    ಬಿಲ್​ ಮಾಡಲು 40 ಜನ ಡಿಸಿ ಆಫೀಸ್​ನಲ್ಲಿದ್ದಾರೆ. ಹೋಮ್ ಕ್ವಾರೈಂಟನ್‌ನಲ್ಲಿರುವವರ ಹೆಸರಿನಲ್ಲಿ ಹಣ ಮಾಡಿದ್ದಾರೆ. ಬಕೆಟ್, ಮನೆ ಒರೆಸುವ ಬಟ್ಟೆ ಹೆಸರಿನಲ್ಲಿ ಬಿಲ್ ಹಾಕಲಾಗಿದೆ. ನನಗೆ ಅನುಮಾನ ಬಂದ ಬಳಿಕ ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದಿದ್ದೇನೆ. ಕಾನೂನು ಪ್ರಕಾರ ಹಣ ಕಟ್ಟಿ ನಾನು ಬಿಲ್ ಪಡೆದಿದ್ದೇನೆ ಎಂದರು.

    10ನೇ ತಿಂಗಳಿಂದ‌ ಇಲ್ಲಿಯವರೆಗೂ ಯಾವುದೇ ಬಿಲ್​ಗಳನ್ನು ಕೊಟ್ಟಿಲ್ಲ. ಉಸ್ತುವಾರಿ ಸಚಿವರೇ ಇದನ್ನು ಗಮನಿಸಬೇಕು. ಪ್ರತಿ ದಿನ ಖರ್ಚಾಗುವ ವೆಚ್ಚದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ನೀವೂ ಮಾಹಿತಿಯನ್ನು ಕೊಟ್ಟಿದ್ರೆ ನಾವ್ಯಾಕೆ ಆಯೋಗದ ಕದ ತಟ್ಟಬೇಕಿತ್ತು ಎಂದು ಟೀಕಿಸಿದರು.

    ನಾವು ಮೈಸೂರಿಗೆ ಬರುವ ಯಾವ ಅಧಿಕಾರಿಯ ಬಗ್ಗೆಯೂ ಮಾತಾಡಲ್ಲ. ಈ‌ ಮೂವರ ಸಾವಿಗೆ ಮೈಸೂರು ಜಿಲ್ಲಾಡಳಿತ ಆಕ್ಸಿಜನ್‌ ಕೊಡಲಿಲ್ಲ ಎಂಬುದಾದ್ರೆ ಇವರ ಮೇಲೆ ಸೆಕ್ಷನ್​ 302 ಅಥವಾ 306 ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಮೊನ್ನೆ ಒಂದು ಕೋಟಿ ರೂ. ಬಿಲ್ ಆಗಿರುವ ಬಗ್ಗೆ ದಾಖಲೆ ಇದೆ‌. ಈ‌ ಹಣ ಮೈಸೂರಿನ ನಾಗರಿಕರಿಗೆ ಸೇರಿದ್ದಾಗಿದ್ದು, ತೆರಿಗೆ ಹಣದ ಲೆಕ್ಕ ಕೊಡಿ ಎಂದು ಸಾರಾ ಮಹೇಶ್ ಒತ್ತಾಯಿಸಿದರು.

    ಸೋಂಕಿತನನ್ನು ಸಾಗಿಸಲು ಹಿಂದೇಟು- ಆಂಬುಲೆನ್ಸ್‌ ಚಲಾಯಿಸಿ ಆಸ್ಪತ್ರೆಗೆ ಸಾಗಿಸಿದ ಸಚಿವ!

    ಡಿಎಂಕೆ ಗೆಲುವಿನ ರಹಸ್ಯ ಬಯಲು: ತಮಿಳುನಾಡು ಚುನಾವಣೆಗೆ ಮಹತ್ವದ ತಿರುವು ನೀಡಿದ್ದೇ ಈ “ಇಟ್ಟಿಗೆ”!

    ನಾಯಿ ಬೇಡ ಎಂದ್ರೂ ಕೇಳದೇ ಕೊಡೆ ಹಿಡಿದು ಮಳೆಯಿಂದ ರಕ್ಷಿಸಿದ ಪುಟಾಣಿ- ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts