More

    ಒಂದೇ ಒಂದು ಕುರಿ ಇದ್ರೂ ಕೋಟ್ಯಧಿಪತಿಗಳಾಗ್ಬೋದು! ಮಿರ ಮಿರ ಮಿಂಚುತ್ತಿರೋ ಇದರ ಬೆಲೆ ಎಷ್ಟು ಗೊತ್ತಾ?

    ಕ್ಯಾನ್​ಬೆರ್ರಾ (ಆಸ್ಟ್ರೇಲಿಯಾ): ಒಂದು ಕುರಿಯ ಬೆಲೆ ಅತೀ ಹೆಚ್ಚು ಎಂದರೆ ಎಷ್ಟಿರಲಿಕ್ಕೆ ಸಾಧ್ಯ ಎಂದು ಕೇಳಿದರೆ ಒಂದಿಷ್ಟು ಲಕ್ಷ ರೂಪಾಯಿಗಳನ್ನು ಹೇಳಬಹುದು. ಏಕೆಂದರೆ 50-60 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿರುವ ಕುರಿಗಳ ಕುರಿತು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಆದರೆ ಈ ಚಿತ್ರದಲ್ಲಿ ಕಾಣುವ ಕುರಿಯ ರೇಟ್​ ಅಂದಾಜು ಎಷ್ಟಿರಬಹುದು ಎಂದು ಊಹಿಸಬಲ್ಲಿರಾ?

    ಇದರ ಬೆಲೆ ಬರೋಬ್ಬರಿ ಎರಡು ಕೋಟಿ ರೂಪಾಯಿ! ಅತ್ಯಂತ ದುಬಾರಿ ಕುರಿ ಎಂಬ ಜಾಗತಿಕ ದಾಖಲೆ ನಿರ್ಮಿಸಿರೋ ಈ ಕುರಿಯ ಹೆಸರು ಆಸ್ಟ್ರೇಲಿಯನ್ ವೈಟ್ ಸ್ಟಡ್. ಎಲೈಟ್ ಆಸ್ಟ್ರೇಲಿಯನ್ ವೈಟ್ ಸಿಂಡಿಕೇಟ್ ಎರಡು ಕೋಟಿ ರೂಪಾಯಿಗಳನ್ನು ಕೊಟ್ಟು ಈ ಕುರಿಯನ್ನು ಖರೀದಿ ಮಾಡಿದೆ. ನ್ಯೂ ಸೌತ್​ವೇಲ್ಸ್​ನಿಂದ ಬಂದಿರುವ ನಾಲ್ವರು ವ್ಯಕ್ತಿಗಳು ಇಷ್ಟು ಬೃಹತ್​ ಮೊತ್ತವನ್ನು ಕೊಟ್ಟು ಇದನ್ನು ಖರೀದಿ ಮಾಡಿದ್ದಾರೆ. ಇದಕ್ಕೆ ಸಿಂಡಿಕೇಟ್​ ಸದಸ್ಯರಾಗಿರುವ ಸ್ಟೀವ್ ಪೆಡ್ರಿಕ್ ಅವರು ಎಲೈಟ್​ ಷೀಪ್​ (ಗಣ್ಯ ಕುರಿ) ಎಂದು ನಾಮಕರಣ ಮಾಡಿದ್ದಾರೆ.

    ಸೆಂಟ್ರಲ್ ನ್ಯೂ ಸೌತ್ ವೇಲ್ಸ್ ಮಾರಾಟದಲ್ಲಿ ಕುರಿಗಳನ್ನು ಮಾರಾಟ ಮಾಡಲಾಗುತ್ತದೆ. ಆಸ್ಟ್ರೇಲಿಯನ್ ವೈಟ್ ಸ್ಟಡ್ ಅನಿಮಲ್ ಈ ಹಿಂದೆ ವಿಶ್ವದ ಅತ್ಯಂತ ದುಬಾರಿ ಕುರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ವರ್ಷ ಒಂದು ಕುರಿ 1.35 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಈಗ ಈ ಕುರಿ ಆ ದಾಖಲೆ ಮುರಿಯುವ ಜತೆಗೆ ವಿಶ್ವ ದಾಖಲೆ ಬರೆದಿದೆ.

    ಆಸ್ಟ್ರೇಲಿಯನ್ ವೈಟ್ ಶೀಪ್ ಕುರಿಯ ತಳಿ ತುಂಬಾ ವಿಶೇಷ ತಳಿಯಾಗಿದೆ , ಇದಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಇದಕ್ಕೆ ಕಾರಣವೇನೆಂದರೆ, ಈ ತಳಿಯ ಕುರಿಗಳಲ್ಲಿ ತುಪ್ಪಳವು (ಉಣ್ಣೆ) ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಕಳೆದ ಕೆಲ ವರ್ಷಗಳಿಂದ, ಕುರಿಗಳಿಂದ ಉಣ್ಣೆ ತೆಗೆಯುವ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಉಣ್ಣೆ ತೆಗೆಯುವ ಪ್ರಕ್ರಿಯೆಯು ತುಂಬಾ ದುಬಾರಿಯಾಗಿರುವ ಕಾರಣ ಅದಕ್ಕೆ ಬೆಲೆ ಇಲ್ಲ. ಆದರೆ ಈ ತಳಿಯ ಕುರಿಗಳಲ್ಲಿ ಉಣ್ಣೆ ಕಡಿಮೆ ಇರುವ ಕಾರಣ, ಮಾಂಸಕ್ಕಾಗಿ ಬಳಸಲಾಗುತ್ತದೆ. ಮಾಂಸವು ಕೂಡ ಅಷ್ಟೇ ರುಚಿಕರವಾಗುತ್ತದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟೀವ್ ಹೇಳಿದರು. ಅಷ್ಟೇ ಅಲ್ಲದೇ ಕುರಿಗಳು ಕೂಡ ಸಾಮಾನ್ಯ ಕುರಿಗಳಿಗಿಂತ ವೇಗವಾಗಿ ಬೆಳವಣಿಗೆ ಹೊಂದುವ ಕಾರಣ ಇದರ ಸಂತತಿ ಕೂಡ ಶೀಘ್ರ ಬೆಳೆಯುತ್ತದೆ.

    ಇನ್ನು ಇದರ ಮಾಲೀಕ ಗ್ರಹಾಂ ಗಿಲ್ಮೋರ್ ಅವರ ಖುಷಿಗೆ ಮಾತ್ರ ಪಾರವೇ ಇಲ್ಲವಾಗಿದೆ. ಇಷ್ಟು ಹಣಕ್ಕೆ ಕುರಿಯನ್ನು ಮಾರುವುದು ಆಶ್ಚರ್ಯಕರವಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

    VIDEO: ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ಕಾರ್ಣಿಕೋತ್ಸವದಲ್ಲಿ ‘ಯುವ ಸಿಎಂ’ ಕುರಿತು ಭವಿಷ್ಯವಾಣಿ…

    ಕೆಪಿಸಿಸಿ ಮುಖ್ಯ ವಕ್ತಾರರ ಸ್ಥಾನಕ್ಕೆ ವಿ.ಆರ್ ಸುದರ್ಶನ್ ರಾಜೀನಾಮೆ: ಅಧ್ಯಕ್ಷ ಡಿಕೆಶಿಗೆ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts