More

    ವಿಶ್ವದ ಮೊದಲ ಪೈಲಟ್‌ ರಾವಣ: ಇತಿಹಾಸ ಕೆದಕಿ, ಅಪೂರ್ವ ಸಂಶೋಧನೆಗೆ ಮುಂದಾದ ಶ್ರೀಲಂಕಾ- ಭಾರತಕ್ಕೂ ಆಹ್ವಾನ

    ನವದೆಹಲಿ: ರಾಮಾಯಣ, ಮಹಾಭಾರತದಂಥ ಪುರಾಣ ಕಥೆಗಳು ಕೇವಲ ಕಥೆಗಳಲ್ಲ, ಬದಲಿಗೆ ಅವು ವಾಸ್ತವದ ಸಂಗತಿ ಎನ್ನುವವರು ಇದ್ದಾರೆ. ಈ ಬಗ್ಗೆ ಕೆಲವು ಸಂಶೋಧನೆಗಳೂ ನಡೆದಿದ್ದು, ಕೆಲವು ಸ್ಥಳ ಮಹಾತ್ಮೆಗಳನ್ನು ನೋಡಿದಾಗ ನಿಜವಾಗಿಯೂ ಇವೆಲ್ಲಾ ಸತ್ಯವೇ ಎಂದು ಅಚ್ಚರಿಯಾಗುವುದೂ ಉಂಟು.

    ಅದರ ನಡುವೆಯೇ ಇದೀಗ ಶ್ರೀಲಂಕಾ ಅಪೂರ್ವದ ಸಾಹಸವೊಂದಕ್ಕೆ ಕೈಹಾಕಿದೆ. ವಿಮಾನಗಳ ಹಿನ್ನೆಲೆಯನ್ನು ಕೆದುಕಲು ಅದು ಶುರು ಮಾಡಿದ್ದು, ಗತಕಾಲದ ವೈಭವದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸತೊಡಗಿದೆ. ಶ್ರೀಲಂಕದಲ್ಲಿನ ಕೆಲ ತಜ್ಞರು, ಇತಿಹಾಸಕಾರರು ನಂಬಿರುವಂತೆ ರಾವಣನೇ ವಿಶ್ವದ ಮೊದಲ ಪೈಲಟ್‌. ರಾವಣ ಎನ್ನುವುದು ಕೇವಲ ಕಾಲ್ಪನಿಕ ಪಾತ್ರವಲ್ಲ, ಬದಲಿಗೆ ರಾವಣನ ಕಾಲದಲ್ಲಿ ಶ್ರೀಲಂಕಾದಲ್ಲಿ ವಿಮಾನಗಳು ಮತ್ತು ವಿಮಾನ ನಿಲ್ದಾಣಗಳು ಇದ್ದವು ಎನ್ನಲಾಗುತ್ತಿತ್ತು. ಈ ಬಗ್ಗೆ ಆಳವಾದ ಅಧ್ಯಯನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಭಾರತವನ್ನೂ ಅದು ಆಹ್ವಾನಿಸಿದೆ.

    ಇಂಥದ್ದೊಂದು ಕಲ್ಪನೆ ಬರಲು ಕಾರಣ ಎರಡು ವರ್ಷಗಳ ಹಿಂದೆ ಕೊಲಂಬೊದಲ್ಲಿ ನಡೆದ ನಾಗರಿಕ ವಿಮಾನಯಾನದ ಸಮ್ಮೇಳನ. ಅಲ್ಲಿ ನೆರೆದಿದ್ದ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ರಾವಣ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ವಿಮಾನ ಹಾರಿಸಿದ್ದಾನೆ ಎಂದೇ ಒಪ್ಪಿಕೊಂಡಿದ್ದರು. ವಿಮಾನದ ಮೂಲಕ ರಾವಣನು ಶ್ರೀಲಂಕಾದಿಂದ ಭಾರತಕ್ಕೆ ಹೋಗಿ ನಂತರ ವಾಪಸ್‌ ಶ್ರೀಲಂಕಾಕ್ಕೆ ಮರಳಿದ ಎನ್ನುವ ಮಾತೂ ಕೇಳಿಬಂತು.

    ಅಂದಿನಿಂದ ಶ್ರೀಲಂಕಾ ಸರ್ಕಾರ ಈ ಬಗ್ಗೆ ತೀವ್ರ ಉತ್ಸುಕತೆ ತೋರಿದೆ. ಇದರ ಅಧ್ಯಯನಕ್ಕೆ ಸರ್ಕಾರ ಇದಾಗಲೇ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಯನ್ನೂ ಮಾಡಿದೆ. ಆದರೆ ಕರೊನಾದಿಂದಾಗಿ ಈ ಸಂಶೋಧನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇದೀಗ ಪುನಃ ಅದನ್ನು ಶುರು ಮಾಡುವುದಾಗಿ ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಶಿ ದಾನತುಂಗೆ ಹೇಳಿದ್ದಾರೆ.

    2022ರಲ್ಲಿ ಇದರ ಸಂಶೋಧನೆ ಆರಂಭಿಸಲಿದ್ದೇವೆ. ನಮ್ಮ ದೇಶದ ನಾಗರಿಕ ವಿಮಾನಯಾನದ ಇತಿಹಾಸವನ್ನು ತಿಳಿದುಕೊಳ್ಳಲು ಈಗ ಕಾಲ ಕೂಡಿಬಂದಿದೆ. ರಾವಣ ಪೌರಾಣಿಕ ಪಾತ್ರವಲ್ಲ, ಆತ ನಿಜವಾದ ರಾಜನಾಗಿದ್ದನು. ಅವನು ವಿಮಾನಗಳು ಮತ್ತು ವಿಮಾನ ನಿಲ್ದಾಣಗಳನ್ನು ಹೊಂದಿದ್ದನು. ಆಗ ಶ್ರೀಲಂಕಾ ಮತ್ತು ಭಾರತೀಯ ಜನರು ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದರು. ಇದಕ್ಕಾಗಿ ವಿಸ್ತೃತ ಸಂಶೋಧನೆ ನಡೆಸಬೇಕು ಎಂದು ಶಶಿ ಹೇಳಿದ್ದಾರೆ.

    ಶಸ್ತ್ರಧಾರಿಗಳು ವಿಮಾನದಿಂದ ಇಳಿಸಿದರು… ದಾದಿಯರು ಬಂದು ನಮ್ಮನ್ನು ಬೆತ್ತಲೆಗೊಳಿಸಿದರು… ಭಯಾನಕ ಘಟನೆ ಬಿಚ್ಚಿಟ್ಟ ಮಹಿಳೆಯರು!

    ‘ಈಜೋದನ್ನು, ಮೀನು ಹಿಡಿಯೋದನ್ನು ಚಡ್ಡಿದೋಸ್ತ್‌ಗೆ ಕಲಿಸಿದ್ದೆ… 30ಕ್ಕೆ ಬರ್ತೇನೆ, ನಾಟಿಕೋಳಿ ಸಾಂಬಾರ್‌ ಮಾಡು ಎಂದಿದ್ರು… ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts