More

    ಮಹಿಳೆಯಾಗಿ ಸೇವೆ ಸಲ್ಲಿಸುತ್ತಿದ್ದ ಕಾನ್ಸ್‌ಟೆಬಲ್‌ ಇನ್ನು ಮುಂದೆ ಪುರುಷ: ಗೃಹ ಇಲಾಖೆಯಿಂದ ಅಪರೂಪದ ಆದೇಶ

    ಭೋಪಾಲ್​​: ಮಹಿಳೆಯಾಗಿ ಕಾನ್ಸ್‌ಟೆಬಲ್‌ ಹುದ್ದೆಯನ್ನು ಸೇರಿದ್ದಾಕೆ ಕೊನೆಗೆ ತನ್ನ ದೇಹದಲ್ಲಾಗುತ್ತಿರುವ ಪರಿವರ್ತನೆಯನ್ನು ನೋಡಿ ತಾನು ಮಹಿಳೆಯಲ್ಲ, ಪುರುಷ ಎಂಬುದು ಅರಿವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಲಿಂಗಪರಿವರ್ತನೆಗೆ ಅವಕಾಶ ಕೊಡಬೇಕು ಎಂದು ಗೃಹ ಇಲಾಖೆಗೆ ಪತ್ರ ಬರೆದಿದ್ದು, ಗೃಹ ಇಲಾಖೆ ಇದಕ್ಕೆ ಸಮ್ಮತಿ ಸೂಚಿಸಿದೆ.

    ಇಂಥದ್ದೊಂದು ಅಪರೂಪದ ಆದೇಶ ಹೊರಟಿಸುವುದು ಮಧ್ಯಪ್ರದೇಶದಲ್ಲಿ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಕಾನ್​​ಸ್ಟೇಬಲ್​​ ಒಬ್ಬರು ಪುರುಷನಾಗಿ ಬದಲಾವಣೆ ಆಗುತ್ತಿರುವುದು ಎನ್ನಲಾಗಿದೆ. ಈ ಕುರಿತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್​ ರಾಜೋರಾ ಮಾಹಿತಿ ನೀಡಿದ್ದಾರೆ.

    ಇವರಿಗೆ ಚಿಕ್ಕವರಿರುವಾಗಿನಿಂದ ತಮ್ಮ ದೇಹದ ಬಗ್ಗೆ ಸಂದೇಹ ಶುರುವಾಗಿತ್ತು. ತಾವು ಹೆಣ್ಣಲ್ಲ, ಗಂಡು ಎನಿಸಲು ಶುರುವಾಗಿತ್ತು. ಆದರೆ ಹೆಣ್ಣಾಗಿಯೇ ಕಾನ್ಸ್‌ಟೆಬಲ್‌ ಹುದ್ದೆ ಅಲಂಕರಿಸಿದ್ದರು. ನಂತರ 2019ರಲ್ಲಿ ಇವರು ತಾವು ಪುರುಷರಾಗ ಬಯಸಿದ್ದರಿಂದ ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

    ಪೊಲೀಸ್ ಇಲಾಖೆ ಈ ಅರ್ಜಿಯನ್ನ ರಾಜ್ಯ ಗೃಹ ಇಲಾಖೆಗೆ ರವಾನೆ ಮಾಡಿತ್ತು. ಅದರ ಪರಿಶೀಲನೆ ನಡೆಸಿರುವ ಕೇಂದ್ರ ಇದೀಗ ಅನುಮತಿ ನೀಡಿದೆ. ಪರುಷನಾಗಿ ಬದಲಾದ ನಂತರ ಪುರುಷ ಕಾನ್ಸ್​ಟೇಬಲ್​​​​ಗಳಂತೆ ಕೆಲಸ ಮಾಡಬಹುದಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

    ಮಗನ ಲಗ್ನಪತ್ರಿಕೆ ಹಂಚಲು ಹೋದ ಭಾಲ್ಕಿಯ ಕಾಂಗ್ರೆಸ್‌ ಮುಖಂಡ, ಪತ್ನಿ ಅಪಘಾತದಲ್ಲಿ ಸಾವು! ಸ್ಮಶಾನವಾದ ಮದುವೆ ಮನೆ…

    ‘ವರ್ಷದ ಆರು ತಿಂಗಳು ವಿದೇಶದಲ್ಲಿದ್ರೆ ಇಲ್ಲಿ ರಾಜಕಾರಣ ಹೇಗೆ ಮಾಡ್ತೀರಾ? ಇಂಥವರಿಗೆ ನಾವು ಸಹಾಯ ಮಾಡೋದಿಲ್ಲ’

    VIDEO: ಲಸಿಕೆ ಹಾಕಲು ಹೋದಾಗ ಮೈಮೇಲೆ ಬಂದ ದೇವರು! ದೇವ್ರಿಗೆ ಚುಚ್ಚಬೇಡಿ ಎಂದು ಮಹಿಳೆ ರಂಪಾಟ- ಮುಂದೇನಾಯ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts