More

    ಭಾರತದ ಕಾನೂನು ಪಾಲಿಸಲು ಮೀನಮೇಷ- ನಿಷೇಧವಾಗುತ್ತಾ ವಾಟ್ಸ್‌ಆ್ಯಪ್‌? ಕೋರ್ಟ್‌ ಬಾಗಿಲಿಗೆ ಟೆಕಿ

    ನವದೆಹಲಿ: ವಾಟ್ಸ್‌ಆ್ಯಪ್‌ ನಿಷೇಧದ ಕುರಿತು ಕೆಲ ತಿಂಗಳುಗಳಿಂದ ಭಾರಿ ಚರ್ಚೆಯಾಗುತ್ತಲೇ ಇದೆ. ದೇಶದ ಹಿತದೃಷ್ಟಿಯಿಂದ, ದೇಶದ ಭದ್ರತೆಗೆ ಮಾರಕವಾಗುತ್ತಿರುವ ಕೆಲವು ದುಷ್ಟಶಕ್ತಿಗಳನ್ನು ತಡೆಯುವುದಕ್ಕಾಗಿ ಕೆಲವೊಂದು ಕಾನೂನು ಪಾಲಿಸುವಂತೆ ಕೇಂದ್ರ ಸರ್ಕಾರ ನೀಡುತ್ತಿರುವ ಸೂಚನೆಯನ್ನು ಪಾಲಿಸಲು ವಾಟ್ಸ್‌ಆ್ಯಪ್‌ ಹಿಂದೇಟು ಹಾಕುತ್ತಲೇ ಬಂದಿದೆ.

    ಇದರಿಂದಾಗಿ ದೇಶಕ್ಕೆ ಮಾರಕವಾಗಿರುವ ವಾಟ್ಸ್‌ಆ್ಯಪ್‌ ಅನ್ನು ಭಾರತದಲ್ಲಿ ನಿಷೇಧಿಸುವಂತೆ ಕೋರಿ ಕೇರಳ ಹೈಕೋರ್ಟ್‌ಗೆ ಸಾಫ್ಟ್‌ವೇರ್‌ ಇಂಜಿನಿಯರ್ ಕೆ.ಜಿ ಒಮನಕುಟ್ಟನ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ. ನಮ್ಮ ದೇಶದ ಕಾನೂನನ್ನು ಪಾಲಿಸಲು ಅಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲ. ಆದ್ದರಿಂದ ಇದನ್ನು ನಿಷೇಧಿಸಬೇಕು ಎಂದು ಅವರು ಕೋರಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳು, ದ್ವೇಷ ಹರಡುವ ಸುದ್ದಿಗಳು ಹರಿದಾಡುತ್ತಿವೆ. ಇವುಗಳ ಪೈಕಿ ಕೆಲವು ದೇಶಕ್ಕೆ ಭಾರಿ ಮಾರಕವಾಗಿವೆ. ತೇಜೋವಧೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಇಂಥ ಸಂದೇಶಗಳು ಹರಿದಾಡಿದ ಸಂದರ್ಭದಲ್ಲಿ ಅದನ್ನು ಹರಿಡಿದ ಮೊದಲಿಗೆ ಯಾರು ಎಂಬ ಬಗ್ಗೆ ತಿಳಿದುಕೊಳ್ಳುವ ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಹೇಳಿದೆ. ಈಗಿರುವ ಪದ್ಧತಿಯ ಪ್ರಕಾರ, ವಾಟ್ಸ್‌ಆ್ಯಪ್‌ಗೆ ಮಾತ್ರ ಮೂಲ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯ. ಆದ್ದರಿಂದ ಆ ವ್ಯಕ್ತಿಯ ಗುರುತು ಹೇಳುವಂತೆ ಕೇಂದ್ರ ಹೇಳಿದೆ. ಆದರೆ ವಾಟ್ಸ್‌ಆ್ಯಪ್‌ ಇದಕ್ಕೆ ಒಪ್ಪುತ್ತಿಲ್ಲ.

    ಬೇರೆ ದೇಶಗಳ ಕಾನೂನನ್ನು ಸುಲಭದಲ್ಲಿ ಒಪ್ಪಿಕೊಂಡಿರುವ ವಾಟ್ಸ್‌ಆ್ಯಪ್‌ ನಮ್ಮ ದೇಶದ ಕಾನೂನಿಗೆ ಒಪ್ಪಿಕೊಳ್ಳಲು ತಯಾರು ಇಲ್ಲದ ಮೇಲೆ ಅದಕ್ಕೆ ನಿಷೇಧ ಹೇರಬೇಕಿದೆ. ಆದ್ದರಿಂದ ಅದನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಆದೇಶಿಸಬೇಕು ಎಂದು ಅವರು ಕೋರಿದ್ದಾರೆ.

    ಉಗ್ರ ಹಫೀಜ್‌ ಸಯೀದ್‌ ಮನೆ ಮುಂದೆ ಭಾರಿ ಸ್ಫೋಟ: ಇಬ್ಬರ ಸಾವು- 16 ಮಂದಿ ಸ್ಥಿತಿ ಗಂಭೀರ

    ಪತಿ ಗುಟ್ಟಾಗಿ ಪರಸ್ತ್ರೀ ಜತೆ ಲೈಂಗಿಕ ಸಂಬಂಧ ಹೊಂದಿದಾಗ ಪತ್ನಿ ಕೇಸ್‌ ಹಾಕಿದ್ರೆ ಏನಾಗುತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts