More

    ಪಿತ್ರಾರ್ಜಿತ ಆಸ್ತಿ ತಮ್ಮನ ಹೆಂಡತಿಯ ಪಾಲಾದರೆ, ಇದರ ಮೇಲೆ ಹಕ್ಕು ಯಾರಿಗಿದೆ? ಕಾನೂನು ಹೀಗೆ ಹೇಳಿದೆ

    ಪಿತ್ರಾರ್ಜಿತ ಆಸ್ತಿ ತಮ್ಮನ ಹೆಂಡತಿಯ ಪಾಲಾದರೆ, ಇದರ ಮೇಲೆ ಹಕ್ಕು ಯಾರಿಗಿದೆ? ಕಾನೂನು ಹೀಗೆ ಹೇಳಿದೆ

    ಪ್ರಶ್ನೆ: ನನ್ನ ವಯಸ್ಸು 58. ವಿವಾಹಿತನಾಗಿದ್ದು, ನನ್ನ ತಂದೆ ತಾಯಿಗೆ 4 ಜನ ಮಕ್ಕಳು (2 ಹೆಣ್ಣು, 2 ಗಂಡು). ತಂದೆ-ತಾಯಿ  ಹಾಗೂ  3 ಜನ ಮಕ್ಕಳು  ತೀರಿಕೊಂಡಿದ್ದಾರೆ.

    ನನ್ನ ತಂದೆಯ ಹೆಸರಿನಲ್ಲಿರುವ ಮನೆಯನ್ನು ನನ್ನ ಸಹೋದರನ ಹೆಂಡತಿ ತನ್ನ ಹೆಸರಿಗೆ ಬದಲಾಯಿಸಿಕೊಂಡು ವಾಸಿಸುತ್ತಿದ್ದಾಳೆ. ನನ್ನ ತಂಗಿ ತೀರಿಕೊಂಡ ಕಾರಣ ತಂಗಿಯ ಮಗನನ್ನು ನಾನು ಸಾಕುತ್ತಿದ್ದೇನೆ. ನನಗೆ ಮತ್ತು ನನ್ನ ತಂಗಿಯ ಮಗನಿಗೆ ಆ ಮನೆಯ ಮೇಲೆ ಹಕ್ಕು ಇದೆಯೇ? ಕಾನೂನಿನ ಪ್ರಕಾರ ನಮಗೆ ಅದರಲ್ಲಿ ಪಾಲು ಸಿಗುತ್ತದೆಯೇ?

    ಉತ್ತರ: ನಿಮ್ಮ ತಂದೆ ತನ್ನ ಜೀವಿತ ಕಾಲದಲ್ಲಿ ಅವರ ಆಸ್ತಿಯನ್ನು ನಿಮ್ಮ ತಮ್ಮನ ಹೆಂಡತಿಯ ಹೆಸರಿಗೆ ನೋಂದಾಯಿತ ಪತ್ರದ ಮೂಲಕ ವರ್ಗಾವಣೆ ( ದಾನ, ಕ್ರಯ ) ಮಾಡಿದ್ದರೆ, ಅಥವಾ ಸಕ್ರಮವಾಗಿ ವಿಲ್‌ ಮಾಡಿದ್ದರೆ ಆಗ ಮಾತ್ರ ನಿಮಗೆ ಹಕ್ಕು ಬರುವುದಿಲ್ಲ.

    ಹಾಗೆ ಮಾಡಿರದೇ ಸುಮ್ಮನೇ ಖಾತೆ ಮಾತ್ರ ನಿಮ್ಮ ತಮ್ಮನ ಹೆಂಡತಿ ಅವರ ಹೆಸರಿಗೆ ಬದಲಾಯಿಸಿಕೊಂಡಿದ್ದರೆ, ಆಗ ನಿಮಗೂ ನಿಮ್ಮ ತಂಗಿಯ ಮಗನಿಗೂ ನಿಮ್ಮ ತಮ್ಮನ ಹೆಂಡತಿಗೂ ಸಮಭಾಗ ಬರುತ್ತದೆ. ನಿಮ್ಮ ಮತ್ತೊಬ್ಬ ಸೋದರಿಯ ವಾರಸುದಾರರಿಗೂ, ನಿಮಗೆ ಬರುವಷ್ಟೇ ಭಾಗ ಬರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts