More

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ‘ಆಕಾಶ ತಿಮಿಂಗಲ’; ಇದೊಂದು ಅದ್ಭುತ ಎನ್ನುತ್ತಿದ್ದಾರೆ ನೆಟ್ಟಿಗರು

    ಕ್ಯಾಲಿಫೋರ್ನಿಯಾ: ವಿಮಾನದಲ್ಲಿ ಹೋಗುವಾಗ ಹೊರಗಿನ ಪ್ರಪಂಚ ಅದ್ಭುತವಾಗಿ ಕಾಣಿಸುತ್ತದೆ. ಕಿಟಕಿಯ ಹೊರಗಡೆ ನೋಡಿದಾಗ ಮೋಡಗಳು, ಬಿಲ್ಡಿಂಗ್‌ ಸೇರಿದಂತೆ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಸಿಕೊಂಡಷ್ಟೂ ಸಾಲದು.

    ವಿಮಾನ ಮೇಲೆ ಏರಿದಂತೆ ಮೋಡ ಬಿಟ್ಟು ಏನೂ ಕಾಣಿಸುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ವಿಮಾನದಲ್ಲಿಯೇ ಕುಳಿತು ಸಮುದ್ರದಲ್ಲಿ ಓಡಾಡುತ್ತಿದ್ದ ತಿಮಿಂಲಗವೊಂದರ ಫೋಟೋ ಕ್ಲಿಕ್ಕಿಸಿದ್ದು, ಇದು ಭಾರಿ ವೈರಲ್‌ ಆಗಿದೆ.

    ಆಕಾಶದಲ್ಲಿ ಕೆಲವೊಮ್ಮೆ ಮೋಡಗಳು ವಿಧವಿಧ ಚಿತ್ತಾರಗಳನ್ನು ಮೂಡಿಸುತ್ತವೆ. ಅದೇ ರೀತಿ ಈ ತಿಮಿಂಗಲದ ಫೋಟೋ ನೋಡಿದಾಗ ಮೋಡಗಳೇ ಈ ರೀತಿ ಬಂದಿರುವಂತೆ ಭಾಸವಾಗುತ್ತದೆ. ಆದರೆ ಅಸಲಿಗೆ ಮೇಲಿನಿಂದ ತೆಗೆದಿರುವ ತಿಮಿಂಗಲದ ಫೋಟೋ ಇದು.

    ತಿಮಿಂಗಲದ ಫೋಟೋ ತೆಗೆದಿರುವುದು ಹೊಸ ವಿಷಯವೇನಲ್ಲ. ಆದರೆ ವಿಮಾನದಲ್ಲಿ ಕುಳಿತು ಅಷ್ಟು ಎತ್ತರದಿಂದ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಇದರ ಫೋಟೋ ತೆಗೆಯುವುದು ಸಾಹಸವೇ ಸರಿ. ಅಂದಹಾಗೆ ಇದನ್ನು ತೆಗೆದಿರುವವರು ಕ್ಯಾಲಿಫೋರ್ನಿಯಾದ ಜಾಸ್ಮಿನ್ ಚಿಲ್ಡ್ರೆಸ್. ಅದನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

    ಸಾಂಟಾ ಬಾರ್ಬರಾ ಕಡಲ್ಗಾಲುವೆ ಮೇಲೆ ಜಿಗಿಜಿಗಿದು ಬಂದಿರುವ ತಿಮಿಂಗಲವೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜಾಸ್ಮಿನ್ ಚಿಲ್ಡ್ರೆಸ್ ಅವರ ಈ ಫೋಟೋಗ್ರಫಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಾಗರಿಕ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿರುವ ಜಾಸ್ಮಿನ್ ಈ ದೃಶ್ಯ ಕಂಡಾಗ ಆದ ಆನಂದಕ್ಕೆ ಪಾರವೇ ಇರಲಿಲ್ಲ. ಅದಕ್ಕಾಗಿ ಕ್ಲಿಕ್ಕಿಸಿದೆ. ಫೋಟೋ ಅಷ್ಟು ಕ್ಲಿಯರ್‌ ಬಂದಿಲ್ಲ. ಆದರೂ ನನಗೆ ಬೇಸರವಿಲ್ಲ ಎಂದಿದ್ದಾರೆ. ಈ ಫೋಟೋ ಇದಾಗಲೇ ಹಲವಾರು ಶೇರ್‌ಗಳನ್ನು ಕಂಡಿವೆ.

    ಪ್ಲೀಸ್‌ ನಕ್ಸಲ್‌ ಅಂಕಲ್‌… ಅಪ್ಪನನ್ನು ಮನೆಗೆ ಕಳುಹಿಸಿ… ಅವರಿಗೆ ಏನೂ ಮಾಡಬೇಡಿ….

    ಹುಡುಗಿ ಸಿಕ್ತಿಲ್ಲ ಎಂದು ₹3 ಲಕ್ಷ ಕೊಟ್ಟು ಮದ್ವೆಯಾದ- ಮದುಮಗಳ ಸೇರುವ ಕನಸು ಕಾಣ್ತಿರುವಾಗಲೇ…

    ಒಂಟಿ ಕಾಲಿನಲ್ಲಿ ಬಂಗಾಳ ಗೆಲ್ಲುವೆ- ಮುಂದೆ ಎರಡೂ ಕಾಲಲ್ಲಿ ದೆಹಲಿ ಗೆದ್ದು ಬರುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts