More

    ಜೈಲಲ್ಲೇ ವರಮಹಾಲಕ್ಷ್ಮಿ ಹಬ್ಬ- ಜಾಮೀನು ಸಿಕ್ಕರೂ ಬಿಡುಗಡೆಯಿಲ್ಲ… ಕೊಟ್ಟ ಭದ್ರತೆಯೂ ವಾಪಸ್‌!

    ಬೆಳಗಾವಿ: ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್​​​ ಮಾಜಿ ಸಚಿವ ವಿನಯ​ ಕುಲಕರ್ಣಿಗೆ ಸುಪ್ರೀಂಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿದ್ದರೂ ಬಿಡುಗಡೆಯ ಭಾಗ್ಯ ಇನ್ನೂ ಸಿಗಲಿಲ್ಲ.

    ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದಕ್ಕೆ ವಿನಯ ಕುಲಕರ್ಣಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಅವರಿಗೆ ಜಾಮೀನು ಮಂಜೂರಾಗಿತ್ತು. ಆದರೆ ಆದೇಶದ ಪ್ರತಿ ಇದುವರೆಗೆ ಅವರು ಇರುವ ಹಿಂಡಲಗಾ ಜೈಲು ಅಧಿಕಾರಿಗಳಿಗೆ ಸಿಗಲಿಲ್ಲ. ಇ-ಮೇಲ್ ಮೂಲಕ ಆದೇಶ ಪ್ರತಿ ಬಂದರೆ, ಇಂದು ಬಿಡುಗಡೆ ಮಾಡುವ ಸಾಧ್ಯತೆ ಇತ್ತು. ಆದರೆ ಪ್ರತಿ ಸಿಗಲಿಲ್ಲ.

    ಇಂದು ವಿನಯ್‌ ಅವರ ಬಿಡುಗಡೆಯ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆ ಸಿಪಿಐ ಜೈಲಿಗೆ ಭೇಟಿ ನೀಡಿದ್ದರು. ಆದರೆ ಜಾಮೀನು ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಲಿಲ್ಲ ಎನ್ನುವ ಕಾರಣಕ್ಕೆ ವಾಪಸಾಗಿದ್ದಾರೆ. ಜಾಮೀನು ನೀಡುವ ವೇಳೆಗೆ ಸ್ಥಳೀಯ ಕೋರ್ಟ್‌ನಲ್ಲಿ ಶ್ಯೂರಿಟಿ ನೀಡುವಂತೆ ಷರತ್ತು ಇದೆ. ಆದರೆ ಇಂದು ಕೋರ್ಟ್‌ಗೆ ರಜೆ. ಆದ್ದರಿಂದ ಶ್ಯೂರಿಟಿ ಸಿಗುವುದಿಲ್ಲ. ನಾಳೆ ಆದೇಶ ಪ್ರತಿ ಸಿಕ್ಕು ಎಲ್ಲವೂ ಅನುಕೂಲವಾದರೆ ವಿನಯ್‌ ಕುಲಕರ್ಣಿ ಬಿಡುಗಡೆಯಾಗಲಿದೆ.

    ಜೈಲು ಅಧಿಕಾರಿ ಹಾಗೂ ಸಿಪಿಐ ಸುನೀಲ್ ಕುಮಾರ್ ಚರ್ಚೆ ನಂತರ ಭದ್ರತೆ ವಾಪಸ್ ಪಡೆದುಕೊಳ್ಳಲಾಗಿದೆ. ಹಿಂಡಲಗಾ ಜೈಲಿನ‌ ಎದುರು ಭದ್ರತೆ ಒದಗಿಸಲಾಗಿತ್ತು. ಅದನ್ನು ವಾಪಸ್‌ ಪಡೆಯಲಾಗಿದೆ.

    ಏನಿದು ಪ್ರಕರಣ?
    2016ರ ಜೂನ್ 15ರಂದು ಧಾರವಾಡದ ಸಪ್ತಾಪುರದ ಉದಯ್ ಜಿಮ್ ಬಳಿ ಯೋಗೇಶ್ ಗೌಡರನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ‌ ಕೊಲೆ ಮಾಡಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ‌ 2019ರಲ್ಲಿ ಈ ಕೇಸನ್ನು ಸಿಬಿಐಗೆ ವರ್ಗಾಯಿಸಿತ್ತು.

    ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಸುಮಾರು ಒಂಬತ್ತು ತಿಂಗಳಿನಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಿಂದಲೂ ವಿನಯ ಕುಲಕರ್ಣಿಗೆ ಜಾಮೀನು ದೊರೆತಿದ್ದು, ಷರತ್ತುಬದ್ಧ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

    ‘ಸುಮಲತಾ ಸುತ್ತಲೂ ಗೂಂಡಾಗಳು, ಕ್ರಿಮಿನಲ್ಸ್‌- ಇಲ್ಲದ ಹುದ್ದೆ ಸೃಷ್ಟಿಸಿಕೊಂಡಿರೋ ಸಂಸದೆ’

    VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts