More

    ರಸ್ತೆ ನಡುವೆಯೇ ಗಾಡಿ ಪಂಕ್ಚರ್‌ ಆದ್ರೆ ಶಾಪ್‌ ಎಲ್ಲಿ ಹುಡುಕೋದಪ್ಪಾ ಎನ್ನೋರಿಗೆ ಇಲ್ಲಿದೆ ಗುಡ್‌ನ್ಯೂಸ್‌…

    ಬೆಂಗಳೂರು: ಎಲ್ಲಿಯಾದರೂ ತುರ್ತು ಕೆಲಸಕ್ಕೋ, ಕಚೇರಿಗೋ ಹೋಗುತ್ತಿದ್ದ ವೇಳೆ ನಡುವೆಯೇ ಗಾಡಿ ಪಂಕ್ಚರ್‌ ಆಗಿಬಿಟ್ಟರೆ ವಾಹನ ಸವಾರರ ಸ್ಥಿತಿ ಅರಿತವರೇ ಬಲ್ಲರು. ದಿನನಿತ್ಯ ಹೋಗುವ ರಸ್ತೆಯೇ ಆಗಿದ್ದರೂ ಹತ್ತಿರದಲ್ಲಿ ಪಂಕ್ಚರ್‌ ಶಾಪ್‌ ಎಲ್ಲಿದೆ ಎಂದು ತಿಳಿದಿರುವುದಿಲ್ಲ, ಅತ್ತ ಗಮನವನ್ನೇ ಕೊಟ್ಟಿರುವುದಿಲ್ಲ. ಇನ್ನು ಹೊಸ ರಸ್ತೆಯಾದರಂತೂ ಮುಗಿದೇ ಹೋಯ್ತು.

    ಇಂಥ ಸಮಯದಲ್ಲಿ ಏನಪ್ಪಾ ಮಾಡುವುದು ಎಂದು ತಲೆಬಿಸಿಮಾಡಿಕೊಳ್ಳುವ ಸವಾರರೇ ಎಲ್ಲ. ಅಂಥವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸದೊಂದು ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಎಲ್ಲಿಯೇ ಗಾಡಿ ಪಂಕ್ಚರ್‌ ಆದರೂ ಸಮೀಪದಲ್ಲಿ ಇರುವ ಪಂಕ್ಚರ್‌ ಶಾಪ್‌ ಯಾವುದೆಂದು ಈ ಆ್ಯಪ್‌ ತೋರಿಸುತ್ತದೆ, ಅದರಲ್ಲಿ ನಮೂದಾಗಿರುವ ಫೋನ್‌ ನಂಬರ್‌ ಪಡೆದು ಫೋನ್‌ ಮಾಡಿದರೆ, ಅಂಗಡಿಯವರೇ ಸವಾರರು ಇರುವಲ್ಲಿಗೆ ಬಂದು ಪಂಕ್ಚರ್‌ ರಿಪೇರಿ ಮಾಡಿಕೊಡುತ್ತಾರೆ ಎನ್ನುವುದು ಈ ಆ್ಯಪ್‌ ಉದ್ದೇಶ ಎನ್ನುತ್ತಾರೆ ಬೆಂಗಳೂರಿನ ‘ಬ್ಲ್ಯಾಕ್‌ ಪೆನ್ ಕಮ್ಯೂನಿಕೇಶನ್ಸ್’ ಸಹ ಸಂಸ್ಥಾಪಕ ಸಮೀರ್ ದಳಸನೂರು.

    ಬೆಂಗಳೂರಿನ ‘ಬ್ಲ್ಯಾಕ್‌ ಪೆನ್ ಕಮ್ಯೂನಿಕೇಶನ್ಸ್’ ಕಂಪನಿಯ ಸಹಯೋಗದೊಂದಿಗೆ ‘ಲೈವ್ ಪಂಚರ್’ ಎಂಬ ಹೆಸರಿನ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಆಂಡ್ರಾಯ್ಡ್ ಮೊಬೈಲ್​​ಗಳಲ್ಲಿ ‌ಈ ಆ್ಯಪ್ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ತಿಳಿಸಿರುವಂತೆ ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಾಹನದ ಚಕ್ರಗಳೆಷ್ಟು (ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಇತ್ಯಾದಿ) ಎಂದು ನಮೂದಿಸಬೇಕಿದೆ.

    ಹೀಗೆ ಮಾಡಿದರೆ ಗಾಡಿ ಪಂಕ್ಚರ್‌ ಆದ ಸಮಯದಲ್ಲಿ ನೀವಿರುವ ಸ್ಥಳದ ಸಮೀಪ ಯಾವ ಪಂಚರ್ ಅಂಗಡಿ‌ ಇದೆ ಎಂದು ನೋಡಬಹುದು. ಬಳಿಕ ಅವರಿಗೆ ಮೊಬೈಲ್ ಕರೆ ಮಾಡಿ ನಿಮ್ಮ ವಾಹನದ ಬಳಿಯೇ ಕರೆಸಿಕೊಳ್ಳಬಹುದು. ಇಷ್ಟೇ ಅಲ್ಲದೇ ಆ ಅಂಗಡಿಯವರು ಎಷ್ಟು ಹೊತ್ತಿಗೆ, ಎಲ್ಲಿ ಬರುತ್ತಿದ್ದಾರೆ ಎಂಬುದನ್ನು ಕೂಡ ಲೈವ್ ಆಗಿ ನೋಡಬಹುದಾಗಿದೆ.


    ಪ್ಲೇ ಸ್ಟೋರ್​​ನಲ್ಲಿ LIVE PUNCHER ಎಂದು ಟೈಪ್‌ ಮಾಡಬಹುದು ಇಲ್ಲವೇ ಈ ಲಿಂಕ್‌ ಕ್ಲಿಕ್‌ ಮಾಡಿ.
    https://play.google.com/store/apps/details?id=com.livepuncherapp

    ವಾಹನ ಸವಾರರು ಮಾತ್ರವಲ್ಲದೇ, ಯಾವುದಾದರೂ ಪಂಕ್ಚರ್‌ ಶಾಪ್‌ನವರು ಇದರಲ್ಲಿ ತಮ್ಮ ನೋಂದಾಯಿಸಿಕೊಳ್ಳಲು ಬಯಸಿದರೆ ಅವರು ಕೂಡ ಇದರಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

    ಬೈಕ್‌ ಕೊಡ್ಸು, ಇಲ್ಲಾ ಗರ್ಭಪಾತ ಮಾಡ್ಸು: ಒಪ್ಪದ ತುಂಬು ಗರ್ಭಿಣಿಗೆ ತ್ರಿಬಲ್‌ ತಲಾಖ್‌ ಕೊಟ್ಟು ಹೊರಹಾಕಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts