More

    ಉತ್ತರಾಖಂಡ: ಹಿಮಸ್ಫೋಟಕ್ಕೆ ಸಿಲುಕಿದವರ ರಕ್ಷಣೆ ಮಾಡುವ ಮೈನವಿರೇಳಿಸುವ ವಿಡಿಯೋ ನೋಡಿ…

    ಚಮೋಲಿ (ಉತ್ತರಾಖಂಡ): ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದಲ್ಲಿ ನಡೆದ ಪ್ರವಾಹದಲ್ಲಿ ಇದಾಗಲೇ ನೂರಾರು ಮಂದಿ ನಾಪತ್ತೆಯಾಗಿದ್ದು, ಹಲವಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ತಪೋವನ್-ರೆನಿ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ಹೇಳಿದ್ದಾರೆ.
    ಧೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ಈ ಘಟನೆ ಸಂಭವಿಸಿದೆ. ಪ್ರವಾಹದ ಸಂದರ್ಭದಲ್ಲಿ ಸುರಂಗದಲ್ಲಿ ಹೂತುಹೋಗಿದ್ದ ಕೆಲಸಗಾರರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಸಿಬ್ಬಂದಿ ರಕ್ಷಣಾ ಕಾರ್ಯಚರಣೆಯ ಮೂಲಕ ರಕ್ಷಿಸಿದ್ದಾರೆ.

    ಇದರ ವಿಡಿಯೋ ಇದೀಗ ವೈರಲ್‌ ಆಗಿದೆ. ಜೋರ್‌ ಲಗಾಕೆ ಐಸಾ ಎಂದು ಹೇಳುತ್ತಾ ತಪೋವನ್ ಅಣೆಕಟ್ಟು ಬಳಿಯ ಕಿರಿದಾದ ಸುರಂಗದಿಂದ ಮನುಷ್ಯನನ್ನು ಹೊರಗೆ ಎಳೆಯುವುದನ್ನು ಕಾಣಬಹುದು.

    ಇನ್ನೇನು ಜೀವದ ಆಸೆ ಬಿಟ್ಟಿದ್ದ ಕೆಲಸಗಾರರು ಸಂಭ್ರಮದಿಂದ ಕುಣಿದಾಡುವುದನ್ನು ಕಾಣಬಹುದು. ಪ್ರವಾಹಕ್ಕೆ ಸಿಲುಕಿದ ಸುರಂಗದಲ್ಲಿ ಹೂತುಹೋಗಿದ್ದ ಸುಮಾರು 16 ಕಾರ್ಮಿಕರನ್ನು ಈವರೆಗೆ ರಕ್ಷಿಸಲಾಗಿದೆ. ಏಳು ಮಂದಿ ಮೃತಪಟ್ಟಿದ್ದಾರೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

    ಷಿಗಂಗಾ ನದಿಯಲ್ಲಿರುವ 13.2 ಮೆಗಾವ್ಯಾಟ್ ಸಣ್ಣ ಜಲವಿದ್ಯುತ್ ಯೋಜನೆ ಸಂಪೂರ್ಣವಾಗಿ ಸರ್ವನಾಶವಾಗಿದೆ. ಉತ್ತರಾಖಂಡ್ ದೌಲಿಗಂಗಾ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಹೆಚ್ಚಾಗಿದ್ದು, ರಿಷಿಗಂಗಾ ಪವರ್ ಪ್ರಾಜೆಕ್ಟ್ ಗೆ ಅಪಾಯ ಎದುರಾಗಿದೆ. ಚಮೋಲಿ ಜಿಲ್ಲೆ ತಪೋವನ ಪ್ರದೇಶದ ರೈನಿ ನದಿಯ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಹಿಮಪಾತ ಮತ್ತು ಉಕ್ಕಿ ಹರಿಯುತ್ತಿರುವ ನದಿ ನೀರಿದಿಂದಾಗಿ 100 ರಿಂದ 150 ಮಂದಿ ಕಾರ್ಮಿಕರಿಗೆ ಪ್ರಾಣಭೀತಿ ಎದುರಾಗಿದೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಉತ್ತರ ಪ್ರದೇಶದ ಭದ್ರತಾ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಅಪಾಯದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಸೆಂಟ್ರಲ್ ವಾಟರ್ ಕಮಿಷನ್ ಹೇಳಿದೆ.

    ಉತ್ತರಾಖಂಡದಲ್ಲಿ ಹಿಮಸ್ಫೋಟ- ಅಪಾಯದಂಚಿನಲ್ಲಿ ಶ್ರೀನಗರ, ಹರಿದ್ವಾರ, ರಿಷಿಕೇಶ ಪ್ರವಾಸಿತಾಣ

    ರೈಲು ತಪ್ಪೋಗತ್ತೆ ಎಂದು ಲಗುಬಗೆಯಿಂದ ಹತ್ತಲು ಹೋಗ್ತೀರಾ- ಈ ವಿಡಿಯೋ ನೋಡಿ…

    ಫೇಸ್​ಬುಕ್​ ಸುಂದರಿಯಗಾಗಿ ಪತ್ನಿಯ ಚಿನ್ನವನ್ನೂ ಮಾರಿ ₹11 ಲಕ್ಷ ಪಂಗನಾಮ ಹಾಕಿಸಿಕೊಂಡ ಪತಿಮಹಾಶಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts