More

    ವಿವಿಧ ಪದವೀಧರರಿಗೆ ಬೋಧಕ ಹುದ್ದೆಗೆ ಆಹ್ವಾನ: 1.43 ಲಕ್ಷ ರೂ.ವರೆಗೆ ಸಂಬಳ

    ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕೋಲ್ಕತಾದಲ್ಲಿರುವ ನ್ಯಾಷನಲ್​ ಇನ್ಸಿಸ್ಟಿಟ್ಯೂಟ್​ ಆಫ್‌​ ಟೆಕ್ನಿಕಲ್​ ಟೀಚರ್ಸ್​ ಟ್ರೇನಿಂಗ್​ ಆ್ಯಂಡ್​ ರಿಸರ್ಚ್​ನಲ್ಲಿ (ಎನ್​ಐಟಿಟಿಟಿಆರ್​) ವಿವಿಧ ಬೋಧಕ ಹಾಗೂ ಬೋಧಕೇತರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಒಟ್ಟು ಹುದ್ದೆಗಳು: 12

    ಎನ್​ಐಟಿಟಿಟಿಆರ್​ನಲ್ಲಿ ನೇಮಕ ಮಾಡಿಕೊಳ್ಳುವ ಹುದ್ದೆಗಳು 3 ವರ್ಷದ ಗುತ್ತಿಗೆ ಆಧಾರದ ಒಪ್ಪಂದಕ್ಕೆ ಒಳಪಟ್ಟಿವೆ. ಬೋಧಕ ಹಾಗೂ ಬೋಧಕೇತರ ಹುದ್ದೆಗೆ ಪ್ರತ್ಯೇಕ ಅರ್ಜಿ ಸಲ್ಲಿಕೆ ಲಿಂಕ್​ ನೀಡಲಾಗಿದ್ದು, ಅದರ ಮೂಲಕವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

    ಹುದ್ದೆ ವಿವರ
    * ಅಸಿಸ್ಟೆಂಟ್​ ಪ್ರೊಫೆಸರ್​ – 8
    * ಟೆಕ್ನಿಕಲ್​ ಅಸಿಸ್ಟೆಂಟ್​ ಸಿವಿಲ್​ ಗ್ರೇಡ್​ ಐಐ – 1
    * ಟೆಕ್ನಿಕಲ್​ ಅಸಿಸ್ಟೆಂಟ್​ ಎಲೆಕ್ಟ್ರಿಕಲ್​ ಗ್ರೇಡ್​ ಐಐ – 1
    * ಸೆಕ್ಷನ್​ ಆಫೀಸರ್​ (ಸೆಕ್ರೆಟರಿಯಲ್​) ಗ್ರೇಡ್​ ಐಐ – 1
    * ಸೆಕ್ಷನ್​ ಆಫೀಸರ್​ (ಅಕೌಂಟ್ಸ್​) ಗ್ರೇಡ್​ ಐ – 1

    ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್​/ ಎಸ್ಸೆಸ್ಸೆಲ್ಸಿ, 3 ವರ್ಷದ ಸಿವಿಲ್​, ಎಲೆಕ್ಟ್ರಿಕಲ್​ ಡಿಪ್ಲೊಮಾ, ಯಾವುದೇ ಪದವಿ, ಇಂಜಿನಿಯರಿಂಗ್​/ ಟೆಕ್ನಾಲಜಿ ಬಿಇ/ ಬಿಟೆಕ್​/ ಬಿಎಸ್​, ಎಂಇ/ ಎಂಟೆಕ್​/ ಎಂಎಸ್​/ ಇಂಟಿಗ್ರೇಟೆಡ್​ ಎಂ.ಟೆಕ್​ ಅನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್​ ಜ್ಞಾನದ ಜತೆ ವೃತ್ತಿ ಅನುಭವ ಅವಶ್ಯ.

    ವಯೋಮಿತಿ: ಅಸಿಸ್ಟೆಂಟ್​ ಪ್ರೊಫೆಸರ್​ ಹುದ್ದೆಗೆ ವಯೋಮಿತಿ ಇಲ್ಲ. ಟೆಕ್ನಿಕಲ್​ ಅಸಿಸ್ಟೆಂಟ್​ಗೆ ಗರಿಷ್ಠ 35 ವರ್ಷ, ಸೆಕ್ಷನ್​ ಅಧಿಕಾರಿಗೆ ಗರಿಷ್ಠ 40 ವರ್ಷ ವಯೋಮತಿ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ವೇತನ: ಅಸಿಸ್ಟೆಂಟ್​ ಪ್ರೊೆಸರ್​ಗೆ ಮಾಸಿಕ 57,700 ರೂ. ವೇತನ ಹಾಗೂ ಡಿಎ ಭತ್ಯೆ, ಟೆಕ್ನಿಕಲ್​ ಅಸಿಸ್ಟೆಂಟ್​ಗೆ ಮಾಸಿಕ 29,200 ರೂ. ವೇತನ ಹಾಗೂ ಡಿಎ ಭತ್ಯೆ, ಸೆಕ್ಷನ್​ ಅಧಿಕಾರಿ ಗ್ರೇಡ್​ 2ಗೆ 35,400 ರೂ. ಹಾಗೂ ಡಿಎ ಭತ್ಯೆ, ಸೆಕ್ಷನ್​ ಅಧಿಕಾರಿ ಗ್ರೇಡ್​1ಗೆ ಮಾಸಿಕ 44,900-1,42,400 ರೂ. ವೇತನ ಇದೆ.

    ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 500 ರೂ., ಉಳಿದ ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಹುದ್ದೆಗಳಿಗೆ ಅನುಗುಣವಾಗಿ ದಾಖಲೆ ಪರೀಕ್ಷೆ , ಲಿಖಿತ ಪರೀಕ್ಷೆ , ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ಕುರಿತು ತಿಳಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 19.7.2021
    ಅಧಿಸೂಚನೆಗೆ: https://bit.ly/3gQqMIM

    ಮಾಹಿತಿಗೆ: http://www.nitttrkol.ac.in/

    ಬೆಂಗಳೂರು ವಿವಿಯಲ್ಲಿ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ: 1.82 ಲಕ್ಷ ರೂ ಸಂಬಳ

    ಎಸ್‌ಬಿಐನಲ್ಲಿ ಇಂಜಿನಿಯರ್‌ ಹುದ್ದೆಗೆ ಆಹ್ವಾನ: ಪರೀಕ್ಷೆ ಇಲ್ಲದೇ ನೇರ ಸಂದರ್ಶನ- ಇಲ್ಲಿದೆ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts