More

    ನಬಾರ್ಡ್​ನಲ್ಲಿ ಅಸಿಸ್ಟೆಂಟ್​ ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನ- 78 ಸಾವಿರ ರೂವರೆಗೆ ಸಂಬಳ

    ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ನ (ನಬಾರ್ಡ್​-ಎನ್​ಎಬಿಎಆರ್​ಡಿ) ಅಧೀನದಲ್ಲಿ ಕಾರ್ಯನಿರ್ವಹಿಸುವ ರೂರಲ್​ ಡೆವಲಪ್​ಮೆಂಟ್​ ಬ್ಯಾಂಕಿಂಗ್​ ಸರ್ವೀಸ್​ (ಆರ್​ಡಿಬಿಎಸ್​)ನಲ್ಲಿ ಕಾರ್ಯನಿರ್ವಹಿಸಲು ಮ್ಯಾನೇಜರ್​ (ಗ್ರೇಡ್​ ಬಿ) ಹಾಗೂ ಪ್ರೋಟೋಕಾಲ್​ ಆ್ಯಂಡ್​ ಸೆಕ್ಯುರಿಟಿ ಸರ್ವೀಸ್​ನಲ್ಲಿ ಕಾರ್ಯನಿರ್ವಹಿಸಲು ಅಸಿಸ್ಟೆಂಟ್​ ಮ್ಯಾನೇಜರ್​ (ಗ್ರೇಡ್​ ಎ) ಹುದ್ದೆಗೆ ನೇಮಕ ಮಾಡಿಕೊಳ್ಳಲು ಆನ್​ಲೈನ್​ ಅರ್ಜಿ ಆಹ್ವಾನಿಸಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
    ಒಟ್ಟು ಹುದ್ದೆಗಳು: 162

    ಹುದ್ದೆ ವಿವರ
    * ಮ್ಯಾನೇಜರ್​ (ಆರ್​ಡಿಬಿಎಸ್​) – 7
    * ಅಸಿಸ್ಟೆಂಟ್​ ಮ್ಯಾನೇಜರ್​ (ಪಿ ಆ್ಯಂಡ್​ ಎಸ್​ಎಸ್​) – 2
    * ಅಸಿಸ್ಟೆಂಟ್​ ಮ್ಯಾನೇಜರ್​ (ರಾಜ್​ಭಾಷಾ) – 5
    * ಅಸಿಸ್ಟೆಂಟ್​ ಮ್ಯಾನೇಜರ್​ (ಆರ್​ಡಿಬಿಎಸ್​) – 148

    ಶೈಕ್ಷಣಿಕ ಅರ್ಹತೆ: ಅಗ್ರಿಕಲ್ಚರ್​/ ಅಗ್ರಿಕಲ್ಚರಲ್​ ಇಂಜಿನಿಯರಿಂಗ್​/ ಅನಿಮಲ್​ ಹಸ್ಬಂಡರಿ/ ಫಿಷರೀಸ್​/ ಾರೆಸ್ಟ್​/ ಪ್ಲಾಂಟೇಷನ್​/ ಹಾರ್ಟಿಕಲ್ಚರ್​/ ಲ್ಯಾಂಡ್​ ಡೆವಲಪ್​ಮೆಂಟ್​-ಸಾಯಿಲ್​ ಸೈನ್ಸ್​/ ವಾಟರ್​ ರಿಸೋರ್ಸ್​/ ೈನಾನ್ಸ್​ (ಬಿಬಿಎ)/ ಕಂಪ್ಯೂಟರ್​ ಆ್ಯಂಡ್​ ಇನ್​ಮೇರ್ಷನ್​ ಟೆಕ್ನಾಲಜಿಯಲ್ಲಿ ಪದವಿ/ ಸ್ನಾತಕೋತ್ತರ ಪದವಿ, ಇಂಗ್ಲಿಷ್​ ಅಥವಾ ಹಿಂದಿಯಲ್ಲಿ ಪದವಿ/ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ, ಮೀಸಲಾತಿ ಅಭ್ಯರ್ಥಿಗಳು ಕನಿಷ್ಠ ಶೇ.55 ಅಂಕ ಪಡೆದಿರಬೇಕು.

    ವಯೋಮಿತಿ: 1.7.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ 21 ರಿಂದ 30, 32, 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ವೇತನ: ಅಸಿಸ್ಟೆಂಟ್​ ಮ್ಯಾನೇಜರ್​ಗೆ ಮಾಸಿಕ 28,150- 55,600 ರೂ. ಹಾಗೂ ಮ್ಯಾನೇಜರ್​ ಹುದ್ದೆಗೆ 35,150- 78,000 ರೂ. ವೇತನ ಇದೆ.

    * ಪರೀಕ್ಷಾ ಪೂರ್ವ ತರಬೇತಿ
    ಎಸ್ಸಿ, ಎಸ್ಟಿ, ಅಂಗವಿಕಲ, ಇತರ ಹಿಂದುಳಿದ ಅಭ್ಯರ್ಥಿಗಳಿಗೆ ಉಚಿತವಾಗಿ ವಿವಿಧ ಸ್ಥಳಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಕರ್ನಾಟಕದ ಅಭ್ಯರ್ಥಿಗಳಿಗೆ Karnataka – NABARD Towers, 46, K.G. Road, Bangalore 560 009 ವಿಳಾಸದಲ್ಲಿ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು 9.8.2021ರ ಒಳಗಾಗಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಸಲ್ಲಿಸಬಹುದು.

    ಅರ್ಜಿ ಶುಲ್ಕ: ಅಸಿಸ್ಟೆಂಟ್​ ಮ್ಯಾನೇಜರ್​ ರಾಜ್​ಭಾಷಾ ಹಾಗೂ ಆರ್​ಡಿಬಿಎಸ್​ಗೆ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು 150 ರೂ. ಹಾಗೂ ಇತರ ಅಭ್ಯರ್ಥಿಗಳು 800 ರೂ., ಎಎಂ ಪಿ ಆ್ಯಂಡ್​ ಎಸ್​ಎಸ್​ ಹುದ್ದೆಗೆ ಮೀಸಲಾತಿ ಅಭ್ಯರ್ಥಿಗಳು 100 ರೂ., ಇತರ ಅಭ್ಯರ್ಥಿಗಳು 750 ರೂ., ಮ್ಯಾನೇಜರ್​ ಹುದ್ದೆಗೆ ಮೀಸಲಾತಿ ಅಭ್ಯರ್ಥಿಗಳು 150 ರೂ., ಇತರ ಅಭ್ಯರ್ಥಿಗಳು 900 ರೂ. ಅರ್ಜಿ ಶುಲ್ಕ ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 7.8.2021
    ಅಧಿಸೂಚನೆಗೆ: https://bit.ly/36HVGhG
    ಮಾಹಿತಿಗೆ:http://www.nabard.org

    ಪಿಯುಸಿ ಫಲಿತಾಂಶ ಪ್ರಕಟ- ರಿಸಲ್ಟ್​ ನೋಡುವುದು ಹೇಗೆ? ಎಷ್ಟು ಮಂದಿಗೆ ಎಷ್ಟು ಅಂಕ? ಇಲ್ಲಿದೆ ಮಾಹಿತಿ…

    ಎಸ್​ಎಸ್ಎಲ್​ಸಿ ಪರೀಕ್ಷೆ ಫಲಿತಾಂಶದ ಡೇಟ್​ ಫಿಕ್ಸ್​: ಸಚಿವ ಸುರೇಶ್​ ಕುಮಾರ್​ ಮಾಹಿತಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts