ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ನ (ಇಸಿಐಎಲ್) ಮೈಸೂರು ಘಟಕಕ್ಕೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಅರ್ಹ, ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 45
ಪರಮಾಣು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಇಸಿಐಎಲ್ನಲ್ಲಿ 4 ವರ್ಷದ ಒಪ್ಪಂದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ದೂರ ಶಿಕ್ಷಣ ಮೂಲಕ ಪಡೆದ ಪದವಿಗೆ ಮಾನ್ಯತೆ ಇಲ್ಲ.
ಹುದ್ದೆ ವಿವರ
* ಸೈಂಟಿಫಿಕ್ ಅಸಿಸ್ಟೆಂಟ್-ಎ – 6
* ಜೂನಿಯರ್ ಆಟಿರ್ಸನ್ – 39
ಯಾವ ವಿಭಾಗದಲ್ಲಿ ನೇಮಕ?
ಕೆಮಿಕಲ್, ಎಲೆಕ್ಟ್ರಾನಿಕ್ಸ್ ಆಫ್ ಯಂಡ್ ಕಮ್ಯುನಿಕೇಷನ್/ ಇನ್ಸ್ಟ್ರುಮೆಂಟೇಷನ್, ಎಲೆಕ್ಟ್ರಿಕಲ್, ಫಿಟ್ಟರ್ ಕೆಮಿಕಲ್ ಪ್ಲಾಂಟ್ ಆಪರೇಟರ್ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್ ಆಫ್ ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಿಷಿಯನ್/ ಫಿಟ್ಟರ್/ ಪವರ್ ಎಲೆಕ್ಟ್ರಾನಿಕ್ಸ್/ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್/ ಇನ್ಸ್ಟ್ರುಮೆಂಟೇಷನ್/ ಪ್ರೋಸೆಸ್ ಇನ್ಸ್ಟ್ರುಮೆಂಟೇಷನ್/ ಮೆಕ್ಯಾನಿಕಲ್(ಫಿಟ್ಟರ್/ ಡೀಸೆಲ್ ಮೆಕ್ಯಾನಿಕ್)ನಲ್ಲಿ 2 ವರ್ಷದ ಐಟಿಐ ಮಾಡಿರಬೇಕು. ಕೆಮಿಷ್ಟ್ರಿಯಲ್ಲಿ ಬಿಎಸ್ಸಿ/ 3 ವರ್ಷದ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು.
ವಯೋಮಿತಿ: ಎಲ್ಲ ಹುದ್ದೆಗಳಿಗೂ ಗರಿಷ್ಠ 25 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.
ವೇತನ: ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಮಾಸಿಕ 20,984 ರೂ. ವೇತನ ಇದೆ. ಜೂನಿಯರ್ ಆಟಿರ್ಸನ್ಗೆ 19,064 ರೂ. ವೇತನ ನಿಗದಿಪಡಿಸಲಾಗಿದೆ. ಯೂನಿಾಮ್ರ್ ಹೊಲಿಗೆ ಹಾಗೂ ವಾಷಿಂಗ್ ವೆಚ್ಚ, ಪಿಪಿಎ್, ಪ್ರಯಾಣ ಭತ್ಯೆ, ಇಎಸ್ಐ ಜತೆ ವಿಮಾ ಪರಿಹಾರ ನೀಡಲಾಗುವುದು.
ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 21 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವವರಿಗೆ 2, ಇತರ ಹಿಂದುಳಿದ ವರ್ಗದವರಿಗೆ 12, ಎಸ್ಸಿಗೆ 7, ಎಸ್ಟಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ 4 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಹಾಗೂ ಟ್ರೇಡ್ ಪರೀಕ್ಷೆಗೆ ಆಹ್ವಾನಿಸಲಾಗುವುದು. ನಂತರ ದಾಖಲೆ ಪರಿಶೀಲನೆ ನಡೆಸಿ ಸಂದರ್ಶನ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
ಸಂದರ್ಶನ ನಡೆಯುವ ದಿನಾಂಕ: ಜೂನ್ 15 ರಂದು ಬೆಳಗ್ಗೆ 10 ಗಂಟೆಗೆ.
ಸಂದರ್ಶನ ನಡೆಯುವ ಸ್ಥಳ: Atomic Energy Central School, RMP Yelwal Colony, Hunsur Road, Yelwal Post, Mysore – 571130
ಅಧಿಸೂಚನೆಗೆ: https://bit.ly/34AELwp
ಮಾಹಿತಿಗೆ: www.ecil.co.in
ಅರೆ ವೈದ್ಯಕಿಯ ಕೋರ್ಸ್ ಮಾಡಿರುವಿರಾ? 28 ಹುದ್ದೆಗಳಿಗೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಂದ ಆಹ್ವಾನ
ವಿಜ್ಞಾನ ಪದವೀಧರರಿಗೆ ಜಿಯೋಫಿಜಿಕಲ್ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ- ಒಂದು ಲಕ್ಷದವರೆಗೆ ಸಂಬಳ
ವಿವಿಧ ಪದವೀಧರಿಗೆ ಜೈವಿಕ ತಂತ್ರಜ್ಞಾನ ಸಂಸ್ಥೆಯಲ್ಲಿ ನೇಮಕಾತಿ- 49 ಹುದ್ದೆಗಳಿಗೆ ಆಹ್ವಾನ