More

    ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಲ್ಲಿವೆ ಗ್ರೂಪ್​ ಎ ಹುದ್ದೆಗಳು

    ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಮುಂಬೈನಲ್ಲಿರುವ ಖಾದಿ ಆ್ಯಂಡ್ ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ( ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ )- ಕೆವಿಐಸಿನಲ್ಲಿ ಖಾಲಿ ಇರುವ ನಿರ್ದೇಶಕ ಮತ್ತು ಉಪ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಕೆವಿಐಸಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಕೆವಿಐಸಿ ಶಾಖೆ ಇರುವ ದೇಶದ ಯಾವ ಭಾಗದಲ್ಲಿ ಬೇಕಾದರೂ ನೇಮಕ ಮಾಡಬಹುದು. ಡೈರೆಕ್ಟರ್ ಹುದ್ದೆಗೆ ಪೇ ಮೆಟ್ರಿಕ್ಸ್ ಲೆವೆಲ್ 12 ಹಾಗೂ ಡೆಪ್ಯುಟಿ ಡೈರೆಕ್ಟರ್‍ಗೆ ಪೇ ಲೆವೆಲ್ 11ರ ಅನುಸಾರ ವೇತನ ನೀಡುವುದರ ಜತೆಗೆ ಸರ್ಕಾರದ ನಿಯಮದನ್ವಯ ಭತ್ಯೆಗಳನ್ನು ನೀಡಲಾಗುವುದು.

    34 ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 18 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 8, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 2, ಎಸ್‍ಸಿ-4, ಎಸ್‍ಟಿಗೆ 2 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಹುದ್ದೆ, ಸಂಖ್ಯೆ ವಿವರ
    * ಡೈರೆಕ್ಟರ್ (ಗ್ರೂಪ್ ಎ) – 18
    * ಡೆಪ್ಯುಟಿ ಡೈರೆಕ್ಟರ್ (ಗ್ರೂಪ್ ಎ) – 16

    ಶೈಕ್ಷಣಿಕ ಅರ್ಹತೆ:
    ಟೆಕ್ನಾಲಜಿ, ಇಂಜಿನಿಯರಿಂಗ್, ಕಾನೂನು ಪದವಿ, ಸಿಎ, ಸ್ನಾತಕೋತ್ತರ ಪದವಿ ಜತೆ ಸಂಬಂಧಿತ ಕ್ಷೇತ್ರದಲ್ಲಿ ವೃತ್ತಿ ಅನುಭವ ಅವಶ್ಯ.

    ವಯೋಮಿತಿ:
    ಹುದ್ದೆಗೆ ಅನುಗುಣವಾಗಿ ಗರಿಷ್ಠ 40 ರಿಂದ 50 ವರ್ಷ.ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಿಬ್ಬಂದಿಗೆ ವಯೋಮಿತಿ ಇಲ್ಲ. ಸರ್ಕಾರಿ ನೌಕರರಿಗೆ ಗರಿಷ್ಠ 45 ರಿಂದ 55 ವರ್ಷ, ಎಸ್‍ಸಿ, ಎಸ್‍ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋ ಸಡಿಲಿಕೆ ಇದೆ.

    ಆಯ್ಕೆ ಪ್ರಕ್ರಿಯೆ:
    ಅಭ್ಯರ್ಥಿಗಳ ಉನ್ನತ ಶೈಕ್ಷಣಿಕ ಸ್ಥಾನ ಮತ್ತು ವೃತ್ತಿ ಅನುಭವ ಆಧರಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುವುದು.ಆಯ್ಕೆಯಾದ ಅಭ್ಯರ್ಥಿಗಳಿಗೆ ಮೇಲ್ ಮುಖಾಂತರ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಲಾಗುವುದು. ಸಂದರ್ಶನಕ್ಕೆ ಹಾಜರಾಗುವಾಗ ಕಾಲ್ ಲೆಟರ್ ಅನ್ನು ಹಿಡಿದುಕೊಂಡು ಹೋಗಿರಬೇಕು.

    ಅರ್ಜಿ ಶುಲ್ಕ:
    ಕೆವಿಐಸಿ ಸಿಬ್ಬಂದಿಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಅಭ್ಯರ್ಥಿಗಳು ಆನ್‍ಲೈನ್ ಮೂಲಕ 1,500 ರೂ. ಶುಲ್ಕ ಪಾವತಿಸಬೇಕು. ಇದರಲ್ಲಿ ಬ್ಯಾಂಕ್ ಚಾರ್ಜ್ ಸೇರಿರುವುದಿಲ್ಲ.
    ಅರ್ಜಿ ಸಲ್ಲಿಸಲು ಕೊನೇ ದಿನ: 15.12.2020
    ಅಧಿಸೂಚನೆಗೆ ಕ್ಲಿಕ್ಕಿಸಿ: https://bit.ly/3m2tcV0

    ಮಾಹಿತಿಗೆ ಕ್ಲಿಕ್ಕಿಸಿ: http://www.kvic.org.in

    ಇನ್ನೂ ಹೆಚ್ಚಿನ ಉದ್ಯೋಗದ ಮಾಹಿತಿಗಾಗಿ https://www.vijayavani.net/ ನೋಡಿ. ಅಂಕಣ ವಿಭಾಗದಲ್ಲಿ ಉದ್ಯೋಗ ಮಿತ್ರ ಎಂಬಲ್ಲಿ ಕ್ಲಿಕ್​ ಮಾಡಿ

    ನೀವು ಕ್ರೀಡಾಪಟುಗಳೆ? ಹಾಗಿದ್ದರೆ ರೈಲ್ವೆಯಲ್ಲಿ ನಿಮಗಿದೆ ಉದ್ಯೋಗಾವಕಾಶ

    ಅಂಗನವಾಡಿಯಲ್ಲಿ ಮಹಿಳೆಯರಿಗಾಗಿ 160 ಹುದ್ದೆಗಳಿಗೆ ಆಹ್ವಾನ- ಇಲ್ಲಿದೆ ಡಿಟೇಲ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts