More

    ಡಿಪ್ಲೊಮಾ ಸೇರಿದಂತೆ ವಿವಿಧ ಪದವೀಧರರಿಗೆ ಭರ್ಜರಿ ಅವಕಾಶ: 513 ಹುದ್ದೆಗಳಿಗೆ ಆಹ್ವಾನ

    ಇಂಡಿಯನ್​ ಆಯಿಲ್​ ಕಾರ್ಪೋರೇಷನ್‌ ಲಿಮಿಟೆಡ್​, ಎನ್​ಟಿಪಿಸಿ, ಕೋಲ್​ ಇಂಡಿಯಾ ಲಿಮಿಟೆಡ್​, ಎಫ್‌ಸಿಐಎಲ್​, ಎಚ್​ಎ್​ಸಿಎಲ್​ ಜತೆ ಒಂದು ಜಂಟಿ ಉದ್ಯಮವಾಗಿ ಬೆಳೆದಿರುವ ಹಿಂದುಸ್ಥಾನ್​ ಊರ್ವಾರಕ್​ ಆ್ಯಂಡ್​ ರಾಸಾಯನ್​ ಲಿಮಿಟೆಡ್​ (ಎಚ್​ಯುಆರ್​ಎಲ್​ ) ಪರಿಸರ ಸ್ನೇಹಿ, ದಕ್ಷ ನೈಸರ್ಗಿಕ ಅನಿಲ ಆಧಾರಿತ ರಸಗೊಬ್ಬರ ಸಂಕೀರ್ಣಗಳ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದೆ. ಪ್ರಸ್ತುತ ಎಚ್​ಯುಆರ್​ಎಲ್​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಹುದ್ದೆ ವಿವರ
    *ಜೂನಿಯರ್​ ಇಂಜಿನಿಯರಿಂಗ್​ ಅಸಿಸ್ಟೆಂಟ್​ (ಕೆಮಿಕಲ್​-39, ಮೆಕಾನಿಕಲ್​-21, ಎಲೆಕ್ಟ್ರಿಕಲ್​ -15, ಇನ್​ಸ್ಟ್ರುಮೆಂಟೇಷನ್​- 39, ಅಮೋನಿಯಾ-30, ಯೂರಿಯಾ- 15, ಆ್​ಸೈಟ್​ ಆ್ಯಂಡ್​ ಯುಟಿಲಿಟೀಸ್​- 15, ಮೆಕಾನಿಕಲ್​- 33, ಎಲೆಕ್ಟ್ರಿಕಲ್​- 21, ಯೂರಿಯಾ ಪ್ರಾಡಕ್ಟ್​ ಹ್ಯಾಂಡಲಿಂಗ್​ – 15) – 243.

    * ಇಂಜಿನಿಯರ್​ ಅಸಿಸ್ಟೆಂಟ್​ (ಅಮೋನಿಯಾ-45, ಯೂರಿಯಾ-30, ಆ್​ಸೈಟ್​ ಆ್ಯಂಡ್​ ಯುಟಿಲಿಟೀಸ್​-30, ಮೆಕಾನಿಕಲ್​-36, ಎಲೆಕ್ಟ್ರಿಕಲ್​-18, ಇನ್​ಸ್ಟ್ರುಮೆಂಟೇಷನ್​- 24, ಯೂರಿಯಾ ಪ್ರಾಡಕ್ಟ್​ ಹ್ಯಾಂಡಲಿಂಗ್​ – 15) – 198

    * ಜೂ. ಸ್ಟೋರ್​ ಅಸಿಸ್ಟೆಂಟ್​ ಮತ್ತು ಸ್ಟೋರ್​ ಅಸಿಸ್ಟೆಂಟ್​ – 12

    * ಜೂನಿಯರ್​ ಅಕೌಂಟಂಟ್​ ಅಸಿಸ್ಟೆಂಟ್​ – 6

    * ಅಕೌಂಟ್​ ಅಸಿಸ್ಟೆಂಟ್​ – 6

    * ಎನ್ವಿರಾನ್​ಮೆಂಟ್​ ಆ್ಯಂಡ್​ ಕ್ವಾಲಿಟಿ ಕಂಟ್ರೋಲರ್​ (ಜೂ. ಲ್ಯಾಬ್​ ಅಸಿಸ್ಟೆಂಟ್​ – 18, ಲ್ಯಾಬ್​ ಅಸಿಸ್ಟೆಂಟ್​-18) – 36

    * ಕ್ವಾಲಿಟಿ ಅಶ್ಯುರೆನ್ಸ್​ ಆ್ಯಂಡ್​ ಇನ್​ಸ್ಪೆಕ್ಷನ್​ – 12

    ಶೈಕ್ಷಣಿಕ ಅರ್ಹತೆ: ಫಿಜಿಕ್ಸ್​/ ಕೆಮಿಸ್ಟ್ರಿ/ ಗಣಿಶಾಸ್ತ್ರದಲ್ಲಿ ಬಿಎಸ್ಸಿ, ಇಂಜಿನಿಯರಿಂಗ್​ ಡಿಪ್ಲೊಮಾ, ಬಿಕಾಂ, ಬಿಎ ಪದವಿ ಪಡೆದಿದ್ದು, ಕನಿಷ್ಠ ಶೇ.50 ಅಂಕ ಪಡೆದಿರಬೇಕು. ಜೂ.ಇಂಜಿನಿಯರ್​ ಅಸಿಸ್ಟೆಂಟ್​ ಹಾಗೂ ಇಂಜಿನಿಯರ್​ ಅಸಿಸ್ಟೆಂಟ್​ ಹುದ್ದೆಗಳನ್ನು ಹೊರತು ಪಡಿಸಿ ಉಳಿದ ಹುದ್ದೆಗಳಿಗೆ ವೃತ್ತಿ ಅನುಭವ ಕೇಳಲಾಗಿದೆ.

    ವಯೋಮಿತಿ: 31.3.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 25 ರಿಂದ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ವೇತನ: ಫ್ರೆಷರ್‌ಗೆ ವಾರ್ಷಿಕ 3 ಲಕ್ಷ ರೂ., ಕನಿಷ್ಠ 5 ರಿಂದ 15 ವರ್ಷ ವೃತ್ತಿ ಅನುಭವ ಇರುವವರಿಗೆ ವಾಷಿರ್ಕ 4.1 ಲಕ್ಷ ರೂ.ನಿಂದ 5.8 ಲಕ್ಷ ರೂ. ವರೆಗೆ ವೇತನ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಬಹು ಆಯ್ಕೆ ಮಾದರಿಯ ಕಂಪ್ಯೂಟರ್​ ಆಧಾರಿತ ಪರೀಕ್ಷೆ ಹಾಗೂ ಟ್ರೇಡ್​ ಪರೀಕ್ಷೆ ನಡೆಸಲಾಗುವುದು. ಬಿಹಾರ, ಜಾರ್ಖಂಡ್​, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಸ್ಸಾ, ದೆಹಲಿ, ಮಧ್ಯಪ್ರದೇಶ, ಚತ್ತೀಸ್​ಗಢ, ಹರಿಯಾಣ, ರಾಜಸ್ಥಾನ್​, ಉತ್ತರಾಖಂಡ್​ನಲ್ಲಿ ಪರೀಕ್ಷಾ ಕೇಂದ್ರ ಇರಲಿದ್ದು, ಅಭ್ಯರ್ಥಿಗಳು ತಮ್ಮ ಆಯ್ಕೆಯ 3 ಕೇಂದ್ರಗಳನ್ನು ಸೂಚಿಸಬಹುದು. ನಂತರ ವೈದ್ಯಕಿಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ: ಎಲ್ಲ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 16.8.2021
    ಅಧಿಸೂಚನೆಗೆ: https://bit.ly/2VDiA7A
    ಮಾಹಿತಿಗೆ: https://hurl.net.in/

    ಆರೋಗ್ಯ ಅಭಿಯಾನದಡಿ ಶುಶ್ರೂಷಕರ ನೇಮಕಾತಿ- ಎಸ್​ಎಸ್​ಎಲ್​ಸಿ ಆದವರಿಗೂ ಅವಕಾಶ

    ಇಂಜಿನಿಯರಿಂಗ್ ಪದವೀಧರರಿಗೆ ಗುಡ್​ನ್ಯೂಸ್: ಬಿಇಎಲ್​ನಲ್ಲಿ 511 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts