More

    ಪದವೀಧರರಿಗೆ BPCLನಲ್ಲಿದೆ ಅವಕಾಶ; 138 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಬೆಂಗಳೂರು: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಪದವಿ, ಡಿಪ್ಲೊಮಾ ಮತ್ತು ನಾನ್ ಇಂಜಿನಿಯರಿಂಗ್ ಪದವೀಧರರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅಥವಾ NATS ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಮೋಡ್​ನಲ್ಲಿ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್ 4 ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

    ಒಟ್ಟು ಹುದ್ದೆಗಳು: 138

    ನೇಮಕಾತಿ ವಿವರಗಳು
    ಡಿಪ್ಲೊಮಾ ಅಪ್ರೆಂಟಿಸ್: 61 ಹುದ್ದೆಗಳು
    ಕೆಮಿಮಿಕಲ್ : 12 ಹುದ್ದೆಗಳು
    ಸಿವಿಲ್: 8 ಹುದ್ದೆಗಳು
    ಎಲೆಕ್ಟ್ರಿಕಲ್: 9 ಹುದ್ದೆಗಳು
    ಮೆಕ್ಯಾನಿಕಲ್: 12 ಹುದ್ದೆಗಳು
    ಇನ್‌ಸ್ಟ್ರುಮೆಂಟೇಶನ್: 10 ಹುದ್ದೆಗಳು
    ಬಿ.ಕಾಂ: 6 ಹುದ್ದೆಗಳು ಬಿಎಸ್​​ಸಿ: 4 ಹುದ್ದೆಗಳು

    ಗ್ರಾಜುಯೇಟ್ ಅಪ್ರೆಂಟಿಸ್: 77 ಹುದ್ದೆಗಳು
    ಕೆಮಿಕಲ್: 17 ಹುದ್ದೆಗಳು
    ಸಿವಿಲ್: 6 ಹುದ್ದೆಗಳು
    ಎಲೆಕ್ಟ್ರಿಕಲ್: 10 ಹುದ್ದೆಗಳು
    ಐಟಿ/ಸಿಎಸ್ಇ: 2 ಹುದ್ದೆಗಳು
    ಇನ್‌ಸ್ಟ್ರುಮೆಂಟ್: 8 ಹುದ್ದೆಗಳು
    ಮೆಕ್ಯಾನಿಕಲ್: 6 ಹುದ್ದೆಗಳು
    ಫೈಯರ್ ಸೇಫ್ಟಿ: 8 ಹುದ್ದೆಗಳು

    ಶೈಕ್ಷಣಿಕ ಅರ್ಹತೆ
    ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಅಭ್ಯರ್ಥಿಗಳು ಕೆಮಿಕಲ್/ಸಿವಿಲ್/ಎಲೆಕ್ಟ್ರಿಕಲ್/ಐಟಿ/ಸಿಎಸ್‌ಇ/ಇನ್‌ಸ್ಟ್ರುಮೆಂಟ್/ಮೆಕ್ಯಾನಿಕಲ್/ಫೈರ್ ಸೇಫ್ಟಿ ಮತ್ತು ವಾಣಿಜ್ಯ/ಕೆಮಿಸ್ಟ್ರಿಯಲ್ಲಿ ಪದವಿ ಪಡೆದಿರಬೇಕು.ಜೊತೆಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
    ಡಿಪ್ಲೊಮಾ ಅಪ್ರೆಂಟಿಸ್‌ ಹುದ್ದೆಗೆ ಅಭ್ಯರ್ಥಿಗಳು ಕೆಮಿಕಲ್/ಸಿವಿಲ್/ಎಲೆಕ್ಟ್ರಿಕಲ್/ಇನ್‌ಸ್ಟ್ರುಮೆಂಟೇಶನ್/ಮೆಕ್ಯಾನಿಕಲ್ ಸ್ಟ್ರೀಮ್‌ಗಳಲ್ಲಿ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿರಬೇಕು. ಜೊತೆಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

    ವಯೋಮಿತಿ
    ಅಭ್ಯರ್ಥಿಗಳ ವಯಸ್ಸು ಸೆಪ್ಟೆಂಬರ್ 1, 2023 ಕ್ಕೆ 18 ರಿಂದ 27 ವರ್ಷಗಳ ನಡುವೆ ಇರಬೇಕು.

    ವೇತನ
    ಡಿಪ್ಲೊಮಾ ಅಪ್ರೆಂಟಿಸ್: 18,000 ರೂ
    ಗ್ರಾಜುಯೇಟ್ ಅಪ್ರೆಂಟಿಸ್: 25,000 ರೂ

    ಆಯ್ಕೆ ಪ್ರಕ್ರಿಯೆ
    1.ಆಯ್ಕೆಯು ಆಯಾ ವಿಭಾಗದ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಆಧರಿಸಿರುತ್ತದೆ.
    2.ಅಭ್ಯರ್ಥಿಗಳು ಸಂದರ್ಶನ ಪ್ರಕ್ರಿಯೆಯ ಮೂಲಕ ಪಡೆದ ಅಂಕಗಳ ಆಧಾರದ ಮೇಲೆ ಸಾಮಾನ್ಯ/ಎಸ್‌ಸಿ/ಎಸ್‌ಟಿ/ಒಬಿಸಿ/ಪಿಡಬ್ಲ್ಯೂಬಿಡಿ ವಿಭಾಗಗಳ ಪ್ರಕಾರ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ BPCL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts