More

    ಸಿಮೆಂಟ್ ಕಾರ್ಪೋರೇಷನ್​ನಲ್ಲಿ ಅಪ್ರೆಂಟೀಸ್‍ಗಳ ನೇಮಕ – 100 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿಮೆಂಟ್ ಕಾರ್ಪೋರೇಷನ್ ಆಫ್​ ಇಂಡಿಯಾ ಲಿಮಿಟೆಡ್ (ಸಿಸಿಐ) ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ದಿಮೆಯಾಗಿದೆ. ಸಿಮೆಂಟ್ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿಕೊಂಡಿದೆ. ಪ್ರಸ್ತುತ ತೆಲಂಗಾಣದ ಶಾಖೆಯಲ್ಲಿ ಅಪ್ರೆಂಟೀಸ್‍ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು ಸ್ಥಾನಗಳು: 100

    ತೆಲಂಗಾಣದ ವಿಕರದಾಬಾದ್ ಜಿಲ್ಲೆಯಲ್ಲಿರುವ ಸಿಸಿಐ ಲಿಮಿಟೆಡ್ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳನ್ನು ತರಬೇತಿಗೆ ನಿಯೋಜಿಸಿಕೊಳ್ಳುತ್ತಿದೆ. ಒಟ್ಟು ಸ್ಥಾನಗಳಲ್ಲಿ ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮದಂತೆ ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಶೇ.3 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಅಪ್ರೆಂಟೀಸ್ ಆ್ಯಕ್ಟ್ 1992 ಅನ್ವಯ ಆಯ್ಕೆಯಾದ ಅಭ್ಯರ್ಥಿಗಳಿಗೆ ಗೌರವಧನ (ಸ್ಟೈಪೆಂಡ್) ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ತಮ್ಮ ವಸತಿ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು.

    ಸ್ಥಾನ, ಸಂಖ್ಯೆ
    * ಫಿಟ್ಟರ್ – 25
    * ಎಲೆಟ್ರಿಷಿಯನ್ – 20
    * ವೆಲ್ಡರ್ (ಗ್ಯಾಸ್ ಆ್ಯಂಡ್ ಎಲೆಕ್ಟ್ರಿಕ್) – 10
    * ಟರ್ನರ್/ ಮೆಷಿನಿಸ್ಟ್ – 15
    * ಇನ್‍ಸ್ಟ್ರುಮೆಂಟ್ ಮೆಕ್ಯಾನಿಕ್ – 10
    * ಮೆಕ್ಯಾನಿಕ್ ಡೀಸೆಲ್/ ಮೆಕ್ಯಾನಿಕ್ ಎಂವಿ – 10
    * ಕಾರ್‍ಪೆಂಟರ್ – 2
    * ಪ್ಲಂಬರ್ – 2
    * ಡೇಟಾ ಎಂಟ್ರಿ ಆಪರೇಟರ್ (ಡಿಇಒ) – 6

    ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿಯಲ್ಲಿ ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕ, ಉಳಿದ ಅಭ್ಯರ್ಥಿಗಳು ಶೇ.45 ಅಂಕ ಪಡೆದಿರಬೇಕು. ಟ್ರೇಡ್‍ಗೆ ಅನುಗುಣವಾಗಿ ಐಟಿಐ ಉತ್ತೀರ್ಣರಾಗಿರಬೇಕು. ಕನಿಷ್ಠ ಶೇ.60 ಅಂಕ ಪಡೆದಿರಬೇಕು.

    ವಯೋಮಿತಿ: 20.1.2021ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಮತ್ತು ಐಟಿಐನಲ್ಲಿ ಪಡೆದ ಅಂಕ ಆಧರಿಸಿ ಮೆರಿಟ್ ಲಿಸ್ಟ್ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಸೂಚನೆ: ಅಪ್ರೆಂಟೀಸ್ ಆ್ಯಕ್ಟ್ 1961ರ ಅಡಿಯಲ್ಲಿ ಸರ್ಕಾರಿ/ ಸಾರ್ವಜನಿಕ ವಲಯ/ ಖಾಸಗಿ ಉದ್ಯಮ/ ಸಂಸ್ಥೆಗಳಲ್ಲಿ ಈಗಾಗಲೇ ಅಪ್ರೆಂಟೀಸ್ ತರಬೇತಿ ಪಡೆದಿರುವ ಅಥವಾ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ.

    ಅರ್ಜಿ ಸಲ್ಲಿಸಲು ಕೊನೇ ದಿನ: 20.1.2021
    ಅರ್ಜಿ ಸಲ್ಲಿಸುವ ವಿಳಾಸ:  The General Manager, Tandur Cement Factory, Karankote Village, Tandur Mandal, Vikarabad District, Telangana – 501158

    ಅಧಿಸೂಚನೆಗೆ: https://bit.ly/3s7JbFs
    ಮಾಹಿತಿಗೆ: http://www.cciltd.in

    ಇನ್ನೂ ಅನೇಕ ಉದ್ಯೋಗಾವಕಾಶಗಳ ಕುರಿತು  ಇಲ್ಲಿ ಕ್ಲಿಕ್‌ ಮಾಡಿ..

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿಜ್ಞಾನ ಪದವೀಧರಿಗೆ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್‍ನಲ್ಲಿವೆ ಅವಕಾಶ

    ಬಿಇಎಲ್‍ನಲ್ಲಿ ಡಿಪ್ಲೋಮಾ ಉತ್ತೀರ್ಣರಿಗೆ ಭರಪೂರ ಅವಕಾಶ- ಕರ್ನಾಟಕದವರಿಗೆ ಆದ್ಯತೆ

    ಡಿಪ್ಲೋಮಾ, ಬಿಇ ಮಾಡಿದ ಫ್ರೆಷರ್ಸ್‌ಗೆ ಕೆಪಿಟಿಸಿಎಲ್‌ನಲ್ಲಿ ಖಾಲಿ ಇವೆ 200 ಹುದ್ದೆಗಳು

    ಉತ್ಪಾದನಾ ತಂತ್ರಜ್ಞಾನ ಸಂಸ್ಥೆಗೆ ಪ್ರಾಜೆಕ್ಟ್ ಫೆಲೋಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts