More

    ಗಡಿ ಭದ್ರತಾ ಪಡೆಯಲ್ಲಿವೆ 72 ಹುದ್ದೆಗಳು- 81 ಸಾವಿರ ರೂ.ವರೆಗೆ ಸಂಬಳ

    ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆಯ (ಬಿಎಸ್​ಎಫ್) ಇಂಜಿನಿಯರಿಂಗ್ ವಿಭಾಗದಲ್ಲಿ 2020-21ನೇ ಸಾಲಿನ ಗ್ರೂಪ್ ಸಿ (ನಾನ್ ಗೆಜೆಟೆಡ್- ನಾನ್ ಮಿನಿಸ್ಟ್ರಿಯಲ್) ಹುದ್ದೆಗಳಿಗೆ ಅರ್ಹ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ.
    ಒಟ್ಟು ಹುದ್ದೆಗಳು: 72

    ಹುದ್ದೆ ವಿವರ

    * ಅಸಿಸ್ಟೆಂಟ್ ಸಬ್ ಇನ್​ಸ್ಪೆಕ್ಟರ್ ದರ್ಜೆ (ಡಿಎಂ ಗ್ರೇಡ್-ಐಐಐ) – 1

    * ಹೆಡ್ ಕಾನ್​ಸ್ಟೆಬಲ್ (ಕಾರ್ಪೆಂಟರ್) – 4

    * ಹೆಡ್ ಕಾನ್​ಸ್ಟೆಬಲ್ (ಪ್ಲಂಬರ್) – 2

    * ಕಾನ್​ಸ್ಟೆಬಲ್

    – ಸೀವರ್​ವåನ್- 2

    – ಜನರೇಟರ್ ಆಪರೇಟರ್ – 24

    – ಜನರೇಟರ್ ಮೆಕಾನಿಕ್ – 28

    – ಲೈನ್​ವೆುನ್ – 11

    ಶೈಕ್ಷಣಿಕ ಅರ್ಹತೆ: ಎಲ್ಲ ಹುದ್ದೆಗೂ ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗಿರಬೇಕು. ಎಎಸ್​ಐಗೆ ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್​ಸ್ಟಿಟ್ಯೂಟ್​ನಿಂದ ಡ್ರಾಫ್ಟ್​ಮನ್​ಶಿಪ್​ನಲ್ಲಿ (ಸಿವಿಲ್) ಡಿಪ್ಲೊಮಾ ಮಾಡಿರಬೇಕು. ಕಾರ್ಪೆಂಟರ್, ಪ್ಲಂಬಿಂಗ್​ನಲ್ಲಿ ಐಟಿಐ ಪ್ರಮಾಣಪತ್ರ, ಕಾನ್​ಸ್ಟೆಬಲ್ ಹುದ್ದೆಗೆ ಸಂಬಂಧಿತ ವಿಭಾಗದಲ್ಲಿ ವೃತ್ತಿ ಅನುಭವ ಕೇಳಲಾಗಿದೆ.

    ವಯೋಮಿತಿ: ಎಲ್ಲ ಹುದ್ದೆಗಳಿಗೂ ಕನಿಷ್ಠ 18 ವರ್ಷ ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 32 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 5, ಇತರ ಹಿಂದುಳಿದ ವರ್ಗಕ್ಕೆ 19, ಎಸ್​ಸಿ- 12, ಎಸ್​ಟಿ ಪ್ರವರ್ಗಕ್ಕೆ 4 ಸ್ಥಾನ ಮೀಸಲಿರಿಸಲಾಗಿದೆ. ಇದರಲ್ಲಿ ಮಾಜಿ ಸೈನಿಕರಿಗೆ 5 ಸ್ಥಾನ, ಮಹಿಳಾ ಅಭ್ಯರ್ಥಿಗೆ 8 ಸ್ಥಾನ ಕಾಯ್ದಿರಿಸಲಾಗಿದೆ.

    ವೇತನ: 7ನೇ ವೇತನ ಆಯೋಗದ ಅನ್ವಯ ಎಎಸ್​ಐಗೆ ಮಾಸಿಕ 5ನೇ ಶ್ರೇಣಿ ಅನ್ವಯ 29,200-92,300 ರೂ., ಹೆಡ್​ಕಾನ್​ಸ್ಟೆಬಲ್​ಗೆ 4ನೇ ಶ್ರೇಣಿ ಅನ್ವಯ ಮಾಸಿಕ 25,500-81,100 ರೂ., ಕಾನ್​ಸ್ಟೆಬಲ್​ಗೆ 3ನೇ ಶ್ರೇಣಿ ಅನ್ವಯ ಮಾಸಿಕ 21,700-69,100 ರೂ. ವೇತನ ಇದೆ.

    ದೈಹಿಕ ಅರ್ಹತೆ: ಮಹಿಳೆಯರಿಗೆ ಎತ್ತರ 157 ಸೆಂ. ಮೀಟರ್, ಪುರುಷರಿಗೆ 165-167.5 ಸೆಂ.ಮೀ ಇರಬೇಕು. ಎದೆಯ ಸುತ್ತಳತೆ (ಮಹಿಳೆಯರಿಗೆ ಅನ್ವಯವಾಗುವುದಿಲ್ಲ) ಪುರುಷರಿಗೆ 76-85 ಸೆಂ.ಮೀ., ಎತ್ತರಕ್ಕೆ ಅನುಗುಣವಾಗಿ ತೂಕದ ಮಾನದಂಡ ನಿರ್ಧರಿಸಲಾಗುವುದು. ದೃಷ್ಟಿದೋಷ ಇರಬಾರದು, ಹೊರಗೆ ಕಾಣಿಸುವ ದೇಹದ ಯಾವುದೇ ಭಾಗದಲ್ಲಿ ಟ್ಯಾಟೂ ಇರಬಾರದು.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆ ಪರಿಶೀಲನೆ ನಡೆಸಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಮಹಿಳಾ, ಮಾಜಿ ಸೈನಿಕ, ಬಿಎಸ್​ಎಫ್​ನ ಸಿಬ್ಬಂದಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 29.12.2021

    ಅಧಿಸೂಚನೆಗೆ: https://bit.ly/3wWrdsD

    ಮಾಹಿತಿಗೆ: http://rectt.bsf.gov.in

    VIDEO: ಅಪ್ಪು ಎಲ್ಲಿದ್ದಾರೆ? ಆಸೆ ಏನಿತ್ತು? ಮತ್ತೆ ಹುಟ್ತಾರಾ…? ಜೀವಂತ ವ್ಯಕ್ತಿಯ ದೇಹದಲ್ಲಿ ಆತ್ಮ ಕರೆಸಿ ಮಾತನಾಡುವೆ ಎಂದ ಗುರೂಜಿ

    ಚಿತ್ರರಂಗದಲ್ಲಿ ನನಗೆ ತುಂಬಾ ಟಾರ್ಚರ್‌ ಆಗ್ತಿದೆ: ವೇದಿಕೆ ಮೇಲೆ ಗಳಗಳನೆ ಅತ್ತ ನಟ

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts