More

    ಬಿಬಿಎಂಪಿಯಲ್ಲಿ ವೈದ್ಯರಿಗೆ ಉದ್ಯೋಗ- ನಾಳೆಯೇ ಸಂದರ್ಶನ, 50 ಸಾವಿರ ರೂ. ಸಂಬಳ

    ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) 5 ಎಪಿಡೆಮಿಯೋಲಜಿಸ್ಟ್​ಗಳನ್ನು 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಮೆರಿಟ್​ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

    ಪ್ರಿವೆಂಟೀವ್​ ಆ್ಯಂಡ್​ ಸೋಷಿಯಲ್​ ಮೆಡಿಸನ್​/ ಪಬ್ಲಿಕ್​ ಹೆಲ್ತ್​/ ಎಪಿಡೆಮಿಯಾಲಜಿಯಲ್ಲಿ ಪದವಿ/ ಸ್ನಾತಕೋತ್ತರ ಪದವಿ/ ಎಂಎಇ/ ಎಂಪಿಎಚ್​/ ಡಿಪಿಎಚ್​/ ಎಂಎಇ ಪದವಿ ಪಡೆದಿರುವ ಅಥವಾ ಯಾವುದೇ ವೈದ್ಯಕಿಯ ಪದವಿ ಪಡೆದಿದ್ದು, 6 ತಿಂಗಳ ವೃತ್ತಿ ಅನುಭವ ಇರುವ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷದೊಳಗಿನ (ಮೀಸಲಾತಿ ಅಭ್ಯಥಿರ್ಗಳಿಗೆ ವಯೋಸಡಿಲಿಕೆ ಇದೆ).

    ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಮಾಸಿಕ 50,000 ರೂ. ವೇತನ ನಿಗದಿ ಮಾಡಲಾಗಿದೆ. ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಸಂಬಂಧಿತ ಎಲ್ಲ ದಾಖಲೆ ಹಾಗೂ ಪ್ರಮಾಣಪತ್ರಗಳ ಮೂಲ ಪ್ರತಿ ತರಲು ಸೂಚಿಸಲಾಗಿದೆ.

    ಸಂದರ್ಶನ ನಡೆಯುವ ದಿನ: 30.8.2021 (ಬೆಳಗ್ಗೆ 10 ರಿಂದ 4 ಗಂಟೆ ವರೆಗೆ)
    ಸಂದರ್ಶನ ನಡೆಯುವ ಸ್ಥಳ: ನೌಕರರ ಭವನ, ಬಿಬಿಎಂಪಿ ಕೇಂದ್ರ ಕಚೇರಿ, ಬೆಂಗಳೂರು.

    ಅಧಿಸೂಚನೆಗೆ: https://bit.ly/2Wj6PUN

    ಮಾಹಿತಿಗೆ: http://bbmp.gov.in

    ಪದವೀಧರರಿಗೆ ನ್ಯೂ ಇಂಡಿಯಾದಿಂದ ಉದ್ಯೋಗಾವಕಾಶ: 300 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts