More

    ಕ್ರೀಡಾಪಟುಗಳಿಗೆ ಗುಡ್‌ ನ್ಯೂಸ್‌: ಗಡಿ ಭದ್ರತಾ ಪಡೆಯಲ್ಲಿದೆ 269 ಹುದ್ದೆಗಳು

    ದೇಶದ ಗಡಿ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಗಡಿ ಭದ್ರತಾ ಪಡೆಯಲ್ಲಿ (ಬಾರ್ಡರ್​ ಸೆಕ್ಯುರಿಟಿ ಫೋರ್ಸ್​- ಬಿಎಸ್​ಎಫ್​) ಗ್ರೂಪ್​ ಸಿ ಹಂತದ ನಾನ್​ ಗೆಜೆಟೆಡ್​ ಮತ್ತು ನಾನ್​ ಮಿನಿಸ್ಟ್ರಿಯಲ್​ನ ಕಾನ್​ಸ್ಟೆಬಲ್​ (ಜನರಲ್​ ಡ್ಯೂಟಿ) ಹುದ್ದೆಗೆ ಕ್ರೀಡಾಪಟುಗಳಾಗಿರುವ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ. ಆನ್​ಲೈನ್​ ಅಜಿರ್ಗಳಿಗೆ ಮಾತ್ರ ಅವಕಾಶ ಇದ್ದು, ಆಯ್ಕೆಯಾಗುವ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗ ಅಥವಾ ವಿದೇಶಗಳಲ್ಲಿ ನೇಮಕ ಮಾಡಲಾಗುವುದು. ದೈಹಿಕ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಅರ್ಜಿಶುಲ್ಕ ಪಾವತಿಸಬೇಕು.

    ಯಾವ ಕ್ರೀಡಾ ವಿಭಾಗಗಳಲ್ಲಿ ನೇಮಕ?
    * ಬಾಕ್ಸಿಂಗ್​ (ಪುರುಷ-10) (46 ರಿಂದ 91 ಕೆಜಿ ವಿಭಾಗ), (ಮಹಿಳಾ-10) (48-81 ಕೆಜಿ ವಿಭಾಗ) – 20
    * ಜೂಡೋ (ಪರುಷ 60-100 ಕೆಜಿ – 8, ಮಹಿಳಾ 48-78 ಕೆಜಿ – 8) – 16
    * ಸ್ವಿಮ್ಮಿಂಗ್​ (ಪುರುಷ-12, ಮಹಿಳಾ-4) – 16
    * ಕ್ರಾಸ್​ ಕಂಟ್ರಿ 10 ಕಿ.ಮೀ (ಪುರುಷ- 2, ಮಹಿಳಾ-2) – 4
    * ಕಬಡ್ಡಿ (ಪುರುಷ – 10, ಮಹಿಳಾ-10) – 20
    * ವಾಟರ್​ ಸ್ಪೋರ್ಟ್ಸ್​ (ಪುರುಷ- 10, ಮಹಿಳಾ-6) – 16
    * ವುಶೋ (ಪುರುಷ) – 11
    * ಜಿಮ್ನಾಸ್ಟಿಕ್​ (ಪುರುಷ) – 8
    * ಹಾಕಿ (ಪುರುಷ) – 8
    * ವೈಟ್​ ಲಿಫ್ಟಿಂಗ್​ (ಪುರುಷ-8, ಮಹಿಳಾ- 9) – 17
    * ವಾಲಿಬಾಲ್​ (ಪುರುಷ) – 10
    * ಕುಸ್ತಿ (ಪುರುಷ-12, ಮಹಿಳಾ-10) – 22
    * ಹ್ಯಾಂಡ್​ಬಾಲ್​ (ಪುರುಷ) – 8
    * ಬಾಡಿ ಬಿಲ್ಡಿಂಗ್​ (ಪುರುಷ) – 6
    * ಅರ್ಚರಿ (ಪುರುಷ-8, ಮಹಿಳಾ-12) – 20
    * ಟೆಕ್ವಾಂಡೊ (ಪುರುಷ) – 10
    * ಅಥ್ಲೆಟಿಕ್ಸ್​ (ಪುರುಷ-20, ಮಹಿಳಾ-25) – 45
    * ಕುದುರೆ ಸವಾರಿ (ಪುರುಷ) – 2
    * ಶೂಟಿಂಗ್​ (ಪುರುಷ-3, ಮಹಿಳಾ-3) – 6
    * ಬಾಸ್ಕೆಟ್​ ಬಾಲ್​ (ಪುರುಷ) – 6
    * ುಟ್​ಬಾಲ್​ (ಪುರುಷ) – 8

    ವೇತನ: 7ನೇ ವೇತನ ಶ್ರೇಣಿಯ 3ನೇ ಹಂತದ ಅನುಸಾರ ಮಾಸಿಕ 21,700-69,100 ರೂ. ವೇತನ ಜತೆ ಡಿಎ, ರೇಷನ್​ ಭತ್ಯೆ, ವಾಷಿಂಗ್​ ಭತ್ಯೆ, ವಿಶೇಷ ಭತ್ಯೆ, ಉಚಿತ ಯೂನಿಾಮ್​ರ್, ಉಚಿತ ವಸತಿ/ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ, ಪೆನ್ಷನ್​, ವೈದ್ಯಕಿಯ ಸೌಲಭ್ಯಗಳನ್ನು ನೀಡಲಾಗುವುದು.

    ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ ವಯೋಮಿತಿ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಒಲಿಂಪಿಕ್​, ವರ್ಲ್ಡ್​ ಕಪ್​ ಚಾಂಪಿಯನ್​ಶಿಪ್​/ ವರ್ಲ್ಡ್​ ಕಪ್​, ಏಷಿಯನ್​ ಗೇಮ್ಸ್​/ ಕಾಮನ್​ವೆಲ್ತ್​ ಗೇಮ್ಸ್​, ಯೂತ್​ ಒಲಿಂಪಿಕ್​ ಗೇಮ್​, ಯೂಥ್​ ಜೂನಿಯರ್​ ಏಷಿಯನ್​ ಚಾಂಪಿಯನ್​ಶಿಪ್​/ ಜೂನಿಯರ್​ ಕಾಮನ್​ವೆಲ್ತ್​ ಚಾಂಪಿಯನ್​ಶಿಪ್​, ಎಸ್​ಎಎ್​ ಗೇಮ್ಸ್​/ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆ, ಅಖಿಲ ಭಾರತ ಅಂತರ್​ ವಿಶ್ವವಿದ್ಯಾಲಯ ಟೂರ್ನಮೆಂಟ್​/ ಚಾಂಪಿಯನ್​ಶಿಪ್​/ ಖೇಲೋ ಇಂಡಿಯಾ/ ಯೂಥ್​ ಗೇಮ್ಸ್​, ನ್ಯಾಷನಲ್​ ಸ್ಕೂಲ್​ ಗೇಮ್ಸ್​ನಲ್ಲಿ 1.9.2019 ರಿಂದ 22.9.2021ರ ನಡುವೆ ಪಾಲ್ಗೊಂಡಿರುವ, ಪದಕ ಪಡೆದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 22.9.2021
    ಅಧಿಸೂಚನೆಗೆ: https://bit.ly/3C6AU9g
    ಮಾಹಿತಿಗೆ: http://rectt.bsf.gov.in

    ಪದವಿ ಯಾವುದೇ ಇರಲಿ- ಕೇಂದ್ರ ಸರ್ಕಾರದಲ್ಲಿದೆ 300 ಹುದ್ದೆ: 60 ಸಾವಿರ ರೂ.ವರೆಗೆ ಸಂಬಳ

    ವಿವಿಧ ಪದವೀಧರರಿಗೆ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯಲ್ಲಿ ಭರಪೂರ ಉದ್ಯೋಗ- ಕೆಲವೇ ದಿನಗಳು ಬಾಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts