More

    ಇಸ್ರೋದಲ್ಲಿ ಕೆಲಸ ಮಾಡುವ ಇಚ್ಛೆಯೆ? 160 ಅಪ್ರೆಂಟೀಸ್​ಗಳ ನೇಮಕಾತಿಗೆ ಅರ್ಜಿ ಆಹ್ವಾನ

    ಇಸ್ರೋ ಅಧೀನದ ಸಂಸ್ಥೆಯಾಗಿರುವ ತಿರುವನಂತಪುರದ ಲಿಕ್ವಿಡ್​ ಪ್ರೊಪಲ್​ಷನ್​ ಸಿಸ್ಟಂ ಸೆಂಟರ್​ (ಎಲ್​ಪಿಎಸ್​ಸಿ) ಇಂಜಿನಿಯರಿಂಗ್​ ಡಿಪ್ಲೊಮಾ ಹಾಗೂ ಪದವೀಧರರಿಂದ ಉದ್ಯೋಗ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಅಪ್ರೆಂಟೀಸ್​ ತರಬೇತಿಯು ಕೇರಳದ ಎಲ್​ಪಿಎಸ್​ಸಿಯಲ್ಲಿ 1 ವರ್ಷ ಇರಲಿದೆ. ಈ ಮೊದಲು ಅಪ್ರೆಂಟೀಸ್​ ತರಬೇತಿ ಪಡೆದವರಿಗೆ ಮತ್ತೆ ಅವಕಾಶ ಇರುವುದಿಲ್ಲ. ಅಪ್ರೆಂಟೀಸ್​ ನಿಯಮದ ಪ್ರಕಾರ ವಯೋಮಿತಿ ಇರಲಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಹಾಗೂ ಮೀಸಲಾತಿ ನಿಯಮಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು.

    ಸ್ಥಾನಗಳ ವಿವರ
    – ಗ್ರಾಜುಯೇಟ್​ ಅಪ್ರೆಂಟೀಸ್​ – 73
    * ಮೆಕಾನಿಕಲ್​ ಇಂಜಿನಿಯರಿಂಗ್​ – 40
    * ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​ – 7
    * ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ – 8
    * ಇನ್​ಸ್ಟ್ರುಮೆಂಟೇಷನ್​ ಇಂಜಿನಿಯರಿಂಗ್​ – 2
    * ಕೆಮಿಕಲ್​ – 1
    * ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​ – 5
    * ಸಿವಿಲ್​ – 4
    * ಲೈಬ್ರರಿ ಸೈನ್ಸ್​ – 6

    – ಡಿಪ್ಲೊಮಾ ಅಪ್ರೆಂಟೀಸ್​ – 87
    * ಮೆಕ್ಯಾನಿಕಲ್​ – 53
    * ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​ – 7
    * ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ – 13
    * ಸಿವಿಲ್​ – 6
    * ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​ – 5
    * ಆಟೋ ಮೊಬೈಲ್​ – 2
    * ಕೆಮಿಕಲ್​ – 1

    ಶೈಕ್ಷಣಿಕ ಅರ್ಹತೆ: ಗ್ರಾಜುಯೇಟ್​ ಅಪ್ರೆಂಟೀಸ್​ಗೆ ಇಂಜಿನಿಯರಿಂಗ್​ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿದ್ದು, ಶೇ.65ಕ್ಕಿಂತ ಕಡಿಮೆ ಇರಬಾರದು. ಡಿಪ್ಲೊಮಾ ಅಪ್ರೆಂಟೀಸ್​ಗೆ 3 ವರ್ಷದ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು.

    ಸ್ಟೆ$ಪೆಂಡ್​ : ಗ್ರಾಜುಯೇಟ್​ ಅಪ್ರೆಂಟೀಸ್​ಗೆ ಮಾಸಿಕ 9,000 ರೂ., ಹಾಗೂ ಡಿಪ್ಲೊಮಾ ಅಪ್ರೆಂಟೀಸ್​ಗೆ ಮಾಸಿಕ 8,000 ರೂ. ಸ್ಟೆ$ಪೆಂಡ್​ ನೀಡಲಾಗುವುದು.

    ಸೂಚನೆ: ನ್ಯಾಷನಲ್​ ಅಪ್ರೆಂಟೀಸ್​ ಟೆನಿಂಗ್​ ವೆಬ್​ಸೈಟ್​ನಲ್ಲಿ ದಿನಾಂಕ 20.7.2021ರ ಒಳಗಾಗಿ ಅಭ್ಯರ್ಥಿಗಳು ನೋಂದಾಯಿತರಾಗಬೇಕು. ಜು.26 ಅರ್ಜಿ ಸಲ್ಲಿಕೆಗೆ ಕೊನೇ ದಿನವಾಗಿದ್ದು, ಆ.2ರಂದು ಶಾರ್ಟ್​ಲಿಸ್ಟ್​ ಪ್ರಕಟಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 26.7.2021
    ಅಧಿಸೂಚನೆಗೆ: https://bit.ly/3jzRAzQ
    ನೋಂದಣಿಗೆ:http://portal.mhrdnats.gov.in/
    ಮಾಹಿತಿಗೆ: https://www.lpsc.gov.in/

    ವಿವಿಧ ಪದವೀಧರರಿಗೆ ಭಾರತ್​ ಡೈನಾಮಿಕ‌ನಿಂದ ಅರ್ಜಿ ಆಹ್ವಾನ: 1.40 ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts