More

    ಉಗ್ರರ ಉರುಳಿಸಲು ಒಂದೇ ಸೆಕೆಂಡ್​ ಸಾಕಿತ್ತು ಯೋಧರಿಗೆ… ಆದರೆ ಅಲ್ಲಿ ಆದದ್ದೇ ಪವಾಡ…

    ಶ್ರೀನಗರ: ಅವರು ಯುವಕರನ್ನು ಹುಡುಕಿ ಹುಡುಕಿ ಉಗ್ರರನ್ನಾಗಿಸುತ್ತಿದ್ದಾರೆ… ಇವರು ಆ ಉಗ್ರರನ್ನು ಪುನಃ ಮನುಷ್ಯರನ್ನಾಗಿ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ…
    ಹೌದು. ಇದೇ ಪಾಕಿಸ್ತಾನ ಮತ್ತು ಭಾರತಕ್ಕೆ ಇರುವ ವ್ಯತ್ಯಾಸ. ಉಗ್ರರ ಸಂಘಟನೆಯನ್ನು ಸೇರಿಸುವುದಕ್ಕಾಗಿ ಯುವಕರನ್ನು ಸದಾ ಹುಡುಕುತ್ತಿರುವ ಪಾಕಿಸ್ತಾನದ ಎದುರು ಇಂದು ಭಾರತೀಯ ಸೇನೆ ಮತ್ತೊಮ್ಮೆ ತನ್ನ ಪ್ರೀತಿಯ ಸಂದೇಶವನ್ನು ಸಾರಿದೆ.

    ಉಗ್ರ ಸಂಘಟನೆ ಸೇರಿರುವ ಇಬ್ಬರು ಯುವಕರ ಮನವೊಲಿಸಿ ಅವರನ್ನು ಹೆತ್ತವರ ಬಳಿ ಬಿಟ್ಟಿರುವ ಅಪರೂಪದ ಘಟನೆ ನಡೆದಿದೆ. ಈ ಮೂಲಕ ಭಾರತೀಯ ಸೇನೆ ಪುನಃಇಂಥ ಹೆಮ್ಮೆ ಪಡುವ ಕೆಲಸ ಮಾಡಿದೆ.

    ಆಗಿದ್ದೇನು? ಉತ್ತರ ಕಾಶ್ಮೀರದ ಸೊಪೋರ್‍ನ ಶಲ್ಪೋರಾ ತುಜಾರ್ ಶರೀಫ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಜಮ್ಮು ಕಾಶ್ಮೀರ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಭದ್ರತಾ ಸಿಬ್ಬಂದಿ ಪ್ರದೇಶವನ್ನು ಸುತ್ತುವರಿದಿದ್ದು, ಹುಡುಕಾಟದ ಕಾರ್ಯಾಚರಣೆ ನಡೆಸಿದ್ದರು.

    ಅಲ್ಲಿ ಉಗ್ರರು ಅಡಗಿಕುಳಿತಿರುವುದು ಸೇನೆಗೆ ತಿಳಿದಿದೆ. ಒಂದಿಷ್ಟು ಸುತ್ತಿನ ಗುಂಡು ಅಷ್ಟೇ… ಆ ಉಗ್ರರೆಲ್ಲರೂ ಹೆಣವಾಗಿಬಿಡುತ್ತಿದ್ದರು.

    ಆದರೆ ನಮ್ಮ ಯೋಧರು ಹಾಗೆ ಮಾಡಲಿಲ್ಲ. ಯುವಕರು ಉಗ್ರ ಸಂಘಟನೆ ಸೇರುತ್ತಿರುವ ಈ ಹೊತ್ತಿನಲ್ಲಿ, ಅಂಥವರನ್ನೆಲ್ಲಾ ಹೊಡೆದುರುಳಿಸುವುದು ಭಾರತೀಯ ಯೋಧರಿಗೆ ಬೇಕಿಲ್ಲ. ಬದಲಿಗೆ ಗೊತ್ತೋ ಗೊತ್ತಿಲ್ಲದೆಯೋ ಬ್ರೇನ್​ವಾಷ್​ ಆಗಿರುವ ಆ ಮನಸುಗಳಿಗೆ ಪ್ರೀತಿಯನ್ನು ಉಣಬಡಿಸಲು ಪ್ರಯತ್ನಿಸಿದ ಭಾರತೀಯ ಸೇನೆ. ಆ ಉಗ್ರರ ಖಚಿತ ಮಾಹಿತಿಗಳನ್ನು ಪಡೆದು ಅವರ ಪಾಲಕರನ್ನೂ ಕರೆದುಕೊಂಡು ಹೋಗಿತ್ತು.

    ನಂತರ ಉಗ್ರರು ಅಡಗಿರುವ ಸ್ಥಳವನ್ನು ಸುತ್ತುವರಿದು, ಅಲ್ಲಿ ಅವರ ಪಾಲಕರನ್ನು ಬಿಟ್ಟಿದೆ. ನಂತರ ಅಲ್ಲಿರುವ ಯುವಕರಿಗೆ ಅವರ ಪಾಲಕರು ಇಲ್ಲಿಗೆ ಬಂದಿದ್ದು, ಶರಣಾಗುವಂತೆ ಯೋಧರು ಹೇಳಿದ್ದಾರೆ. ಆದರೆ ಇದು ಅಷ್ಟು ಸುಲಭವಾಗಿರುವ ಕೆಲಸವಾಗಿರಲಿಲ್ಲ. ನಂತರ ಪಾಲಕರೇ ತಮ್ಮ ಮಕ್ಕಳಿಗೆ ಬುದ್ಧಿಮಾತು ಹೇಳಿದ್ದಾರೆ.
    ಅಪ್ಪ-ಅಮ್ಮನ ಮಾತು ಕೇಳಿದ ಹಾಗೂ ಯೋಧರು ನಡೆಸಿದ ಮಾತುಕತೆಯಿಂದಾಗಿ ಅಂತೂ ಇಬ್ಬರು ಯುವಕರ ಮನಸ್ಸು ಪರಿವರ್ತನೆಯಾಗಿದೆ. ನಂತರ ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ಆ ಯುವಕರು ಪಾಲಕರ ಮುಂದೆ ತಲೆಬಾಗಿದ್ದಾರೆ.

    ಇದನ್ನೂ ಓದಿ: ಮೋದಿಜೀ… ಸುಳ್​ ಹೇಳ್ಬೇಡಿ… ಬಿಹಾರಿಗಳಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರಿ?

    ಭದ್ರತಾ ಪಡೆಯ ಈ ಸತತ ಪ್ರಯತ್ನದಿಂದಾಗಿ ಅಂತೂ ಪಾಲಕರಿಗೆ ತಮ್ಮ ಮಕ್ಕಳು ಮನುಷ್ಯರೂಪದಲ್ಲಿ ಪುನಃ ಸಿಕ್ಕಿದ್ದಾರೆ. ಅಬಿದ್ ಮುಷ್ತಕ್ ದಾರ್ ಹಾಗೂ ಮಹ್ರಜ್-ಯು-ದಿನ್ ದಾರ್ ಶರಣಾಗಿದ್ದಾರೆ. ಇಬ್ಬರೂ ಸೊಪೋರ್‍ನ ಮೊಬಾಯಿ ಪ್ರದೇಶದ ವಡೂದರಾ ಪಾಯೀನ್​ನವರಾಗಿದ್ದಾರೆ.

    ಉಗ್ರರ ಉರುಳಿಸಲು ಒಂದೇ ಸೆಕೆಂಡ್​ ಸಾಕಿತ್ತು ಯೋಧರಿಗೆ... ಆದರೆ ಅಲ್ಲಿ ಆದದ್ದೇ ಪವಾಡ...ಶರಣಾದ ಉಗ್ರರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಪ್ರತಿ ಬಾರಿಯ ಎನ್‍ಕೌಂಟರ್ ವೇಳೆ ನಾವು ಶರಣಾಗಲು ಅವಕಾಶ ನೀಡುತ್ತೇವೆ. ಅವರು ನಮ್ಮ ಜನರೇ ಆಗಿದ್ದಾರೆ. ಆಗಿದ್ದರೆ ಅವರ ಮನಸ್ಸು ಎಷ್ಟು ಪರಿವರ್ತನೆ ಮಾಡಲಾಗಿರುತ್ತದೆ ಎಂದರೆ ಶರಣಾಗಲು ಹೇಳಿದಾಗಲೆಲ್ಲಾ ನಮ್ಮ ಮೇಲೆ ದಾಳಿ ನಡೆಸುತ್ತಾರೆ. ಆ ಸಂದರ್ಭದಲ್ಲಿ ಅನಿವಾರ್ಯವಾಗಿ ನಾವೂ ಎನ್​ಕೌಂಟರ್​ ಮಾಡಬೇಕಾಗುತ್ತದೆ ಎಂದು ಕಾಶ್ಮೀರದ ಇನ್‍ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ತಿಳಿಸಿದ್ದಾರೆ.

    ಈ ಹಿಂದೆ ಸಹ ಉಗ್ರನೊಬ್ಬ ಶರಣಾದ ವಿಡಿಯೋವನ್ನು ಸೇನೆ ಹಂಚಿಕೊಂಡಿತ್ತು. ಜಹಂಗೀರ್ ಭಟ್ ಸಹ ಹೊಸದಾಗಿ ಉಗ್ರ ಸಂಘಟನೆ ಸೇರಿದವನಾಗಿದ್ದ. ಆತನಿಂದ ಎಕೆ-47 ಬಂದೂಕು ವಶಪಡಿಸಿಕೊಳ್ಳಲಾಗಿತ್ತು.

    ಕ್ರಿಕೆಟ್​ ದಿಗ್ಗಜ ಕಪಿಲ್​ ದೇವ್​ಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

    ವಿಮಾನದೊಳಗೆ ಉಗ್ರ- ಕೂಗಿದ ‘ಪೊಲೀಸ್​ ಅಧಿಕಾರಿ’!ಬೆಚ್ಚಿಬಿದ್ದ ಪ್ರಯಾಣಿಕರು

    ಮ್ಯಾನೇಜ್​ಮೆಂಟ್​ ಕೋಟಾದವರು ಸ್ವರ್ಗದಿಂದ ಇಳಿದವರೆ? ವೈದ್ಯರ ವಿರುದ್ಧ ಹೈಕೋರ್ಟ್​ ಕಿಡಿ

    ಗ್ಯಾಂಗ್​ರೇಪಿಸ್ಟ್​ಗಳಿಗೆ ಗಲ್ಲುಶಿಕ್ಷೆಯಾಗುವ ಕಾನೂನಾಗಲಿ-ಮನುಸ್ಮೃತಿ ಉಲ್ಲೇಖಿಸಿದ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts