More

    ಕಾಬೂಲ್​ ದಾಳಿಯಲ್ಲಿ ಅಮೆರಿಕ ಉಡೀಸ್​ ಮಾಡಿದ ಈ ಭಯಾನಕ ಉಗ್ರ ಕರ್ನಾಟಕದಲ್ಲೂ ಫೇಮಸ್​! ಯಾಕೆ ಅಂತೀರಾ?

    ವಾಷಿಂಗ್ಟನ್​​: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ನಡೆದ ವಾಯುದಾಳಿಯಲ್ಲಿ ಅಲ್​ಖೈದಾ ಉಗ್ರ, ಸಾವಿರಾರು ಅಮಾಯಕರನ್ನು ಬಲಿ ಪಡೆದ, ಐಮನ್ ಅಲ್-ಜವಾಹಿರಿನನ್ನು ಅಮೆರಿಕ ಹೊಡೆದುರುಳಿಸಿದೆ.

    ಕಳೆದ 21 ವರ್ಷಗಳಿಂದ, ಅಮೆರಿಕ ಈತನನ್ನು ಹುಡುಕುತ್ತಿತ್ತು. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಯ ಸಮಯದಲ್ಲಿ ಅವನನ್ನು ಹೊಡೆದು ಹಾಕಿರುವುದಾಗಿ ವರದಿಯಾಗಿದೆ.

    ಭಾನುವಾರ ಬೆಳಗ್ಗೆ (ಕಾಬೂಲ್​ ಸಮಯ) 6.18ರಲ್ಲಿ ಕಾಬೂಲ್​ನಲ್ಲಿ ನಡೆದ ಯುಎಸ್​ ಡ್ರೋನ್​ ದಾಳಿಗೆ ಜವಾಹಿರಿ ಹತನಾಗಿದ್ದಾನೆ. 2011ರಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟ ಅಲ್​ಖೈದಾ ಸಂಸ್ಥಾಪಕ ಒಸಮಾ ಬಿನ್​ಲಾಡೆನ್​ ಸಾವಿನ ಬಳಿಕ ಉಗ್ರ ಸಂಘಟನೆಗಾದ ಅತಿದೊಡ್ಡ ನಷ್ಟ ಇದಾಗಿದೆ. ಜವಾಹಿರಿ ಓರ್ವ ಈಜಿಪ್ತಿಯನ್​ ಸರ್ಜನ್​. 2001ರ ಸೆಪ್ಟೆಂಬರ್​ 11ರಂದು ಅಮೆರಿಕದ ಮೇಲೆ ದಾಳಿ ನಡೆದ ದಾಳಿಯಲ್ಲಿ 3000 ಮಂದಿ ಬಲಿಯಾಗಿದ್ದರು. ಈ ದಾಳಿಗೆ ಜವಾಹಿರಿ ನೆರವು ನೀಡಿದ್ದ.

    ಅಂದಹಾಗೆ, ಈ ಭಯಾನಕ ಉಗ್ರನಿಗೆ ಕರ್ನಾಟಕದ ನಂಟಿತ್ತು. ಕರ್ನಾಟಕದಲ್ಲಿ ಭುಗಿಲೆದ್ದಿದ್ದ ಹಿಜಾಬ್ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಇವನದ್ದು ಪ್ರಮುಖ ಪಾತ್ರವಿತ್ತು. ಹಿಜಾಬ್​ಗೆ ಸಂಬಂಧಿಸಿದಂತೆ ಕರ್ನಾಟಕ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಅಚ್ಚರಿ ಎನ್ನುವಂಥ ರೀತಿಯಲ್ಲಿ ಪ್ರತಿಭಟನೆ ನಡೆಸಲು ಶುರು ಮಾಡಿದ್ದರು. ಇದರ ಹೈಲೈಟ್​ ಆದಾಕೆ ಮಂಡ್ಯದ ಮುಸ್ಕಾನ್​. ಪ್ರತಿಭಟನೆಯ ಸಮಯದಲ್ಲಿಯೇ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುವ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದವಳು ಮುಸ್ಕಾನ್​. ಒಂದೆಡೆ ವಿದ್ಯಾರ್ಥಿಗಳು ಜೈಶ್ರೀರಾಮ್​ ಘೋಷಣೆ ಕೂಗುತ್ತಿದ್ದು, ಎರಡೂ ಕಡೆಗಳ ಪ್ರತಿಭಟನೆ ತೀವ್ರ ಸ್ವರೂಪ ನಡೆಯುತ್ತಿರುವ ನಡುವೆಯೇ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿ ನಾಯಕಿಯಾಗಿ ಗುರುತಿಸಿಕೊಂಡಳು.

    ಈಕೆಯ ಪರವಾಗಿ ಇತ್ತ ಒಂದು ವರ್ಗ ಬೆಂಬಲ ನೀಡಿದ್ದರೆ, ಈಕೆಯ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದೇ ಉಗ್ರ ಐಮನ್ ಅಲ್​-ಜವಾಹಿರಿ. ಮುಸ್ಕಾನ್​ನನ್ನು ಬೆಂಬಲಿಸಿ ಕವನವೊಂದನ್ನು ಬರೆದು ಆಕೆಯನ್ನು ಹಾಡಿ ಹೊಗಳುವ ಮೂಲಕ ಮುಸ್ಕಾನ್​ ಕೀರ್ತಿ ಇನ್ನಷ್ಟು ಬೆಳಗುವಂತೆ ಮಾಡಿದ್ದ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು, ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಕವನ ಭಾರಿ ಟ್ರೋಲ್​ ಆಗಿತ್ತು.

    ಇದೀಗ ಈತ ಹತನಾಗಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್​ ತಿಳಿಸಿದ್ದಾರೆ. ಈತ ಮನೆಯ ಬಾಲ್ಕನಿಯಲ್ಲಿ ಕುಳಿತಿದ್ದಾಗ ಗುರಿಯಾಗಿಸಿ ಕೊಲ್ಲಲಾಗಿದೆ. ನಂತರ ಡ್ರೋನ್ ಮೂಲಕ ಎರಡು ಕ್ಷಿಪಣಿಗಳನ್ನು ಅವರತ್ತ ಹಾರಿಸಲಾಯಿತು ಎಂದಿದ್ದಾರೆ. (ಏಜೆನ್ಸೀಸ್​)

    ರೇಪ್​ ಆರೋಪ ಮಾಡಿದ ನಾಲ್ಕು ಮಕ್ಕಳ ತಾಯಿಗೆ ಗ್ರಹಚಾರ ಬಿಡಿಸಿದ ಹೈಕೋರ್ಟ್​- ನೀಡಿತು ಇಂಥದ್ದೊಂದು ಶಿಕ್ಷೆ

    ಜ್ಞಾನವಾಪಿ ಕೇಸ್​ನಲ್ಲಿ ಮುಸ್ಲಿಂ ಪರ ವಾದಿಸುತ್ತಿದ್ದ ವಕೀಲ ಯಾದವ್​ಗೆ​ ಹೃದಯಾಘಾತ: ಕೋರ್ಟ್​ಗೆ ಉತ್ತರಿಸುವ ಮುನ್ನವೇ ನಿಧನ

    ‘ಕೊಲೆಯಾದ’ ಪತ್ನಿ ಪ್ರೇಮಿಯ ತೋಳಲ್ಲಿ: ಅಮಾಯಕ ಪತಿ 10 ವರ್ಷಗಳ ಶಿಕ್ಷೆ ಅನುಭವಿಸುತ್ತಾ ಜೈಲಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts