More

    ಜ್ಞಾನವಾಪಿ ಕೇಸ್​ನಲ್ಲಿ ಮುಸ್ಲಿಂ ಪರ ವಾದಿಸುತ್ತಿದ್ದ ವಕೀಲ ಯಾದವ್​ಗೆ​ ಹೃದಯಾಘಾತ: ಕೋರ್ಟ್​ಗೆ ಉತ್ತರಿಸುವ ಮುನ್ನವೇ ನಿಧನ

    ಲಖನೌ (ಉತ್ತರ ಪ್ರದೇಶ): ಬಹು ಚರ್ಚಿತ, ವಿಶ್ವದ ಗಮನವನ್ನು ಸೆಳೆದಿದ್ದ ಉತ್ತರ ಪ್ರದೇಶದ ವಾರಣಾಸಿಯಲ್ಲಿನ ಜ್ಞಾನವಾಪಿ ಪ್ರಕರಣದಲ್ಲಿ ವಾರಣಾಸಿಯ ಕೋರ್ಟ್​ನಲ್ಲಿ ಮುಸ್ಲಿಂ ಸಂಘಟನೆಗಳ ಪರವಾಗಿ ವಾದಿಸುತ್ತಿದ್ದ ಖ್ಯಾತ ವಕೀಲ ಅಭಯನಾಥ್ ಯಾದವ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಇವರಿಗೆ ಹೃದಯಾಘಾತವಾಗಿದ್ದು, ಮೃತಪಟ್ಟಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.

    ಜ್ಞಾನವಾಪಿ ಕೇಸ್​ ಇನ್ನೂ ಕೋರ್ಟ್​ನಲ್ಲಿ ನಡೆಯುತ್ತಿದ್ದು, ಅಂಜುಮನ್ ಇನಾಜ್ತಿಯಾ ಮಸೀದಿ ಪರ ಇವರು ವಕಾಲತ್ತು ವಹಿಸಿದ್ದರು. ವಿಚಾರಣೆಗೆ ಸಂಬಂಧಿಸಿದಂತೆ ಅವರು ಆಗಸ್ಟ್ 4ರಂದು ನ್ಯಾಯಾಲಯಕ್ಕೆ ಇದಕ್ಕೆ ಸಂಬಂಧಿಸಿದಂತೆ ಉತ್ತರ ನೀಡಬೇಕಾಗಿತ್ತು. ಆದರೆ ಇದಕ್ಕೆ ಮುನ್ನವೇ ಅವರು ಕೊನೆಯುಸಿರೆಳೆದರು.

    ಅಭಯನಾಥ್ ಯಾದವ್ ಪಾಂಡೆಪುರ ನಾಯ್ ಬಸ್ತಿ ನಿವಾಸಿಯಾಗಿದ್ದು, ಕಳೆದ 35 ವರ್ಷಗಳಿಂದ ವಕೀಲಿ ವೃತ್ತಿ ನಡೆಸುತ್ತಿದ್ದರು. ಮೂರು ವರ್ಷಗಳಿಂದ ಅಂಜುಮನ್ ಇನಾಜ್ತಿಯಾ ಮಸೀದಿ ಪರವಾಗಿ ವಾದ ಮಂಡಿಸುತ್ತಿದ್ದ ಅವರು, ಇತ್ತೀಚೆಗೆ ನಡೆದ ಜ್ಞಾನವಾಪಿ ಪ್ರಕರಣದಲ್ಲಿ ಖ್ಯಾತಿ ಗಳಿಸಿದವರು.

    ಭಾನುವಾರ (ಜುಲೈ 31) ಬೆಳಗ್ಗೆಯಿಂದಲೇ ಅವರು ಅಸ್ವಸ್ಥಗೊಂಡಿದ್ದರು. 10:30ರ ಸುಮಾರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಕುಟುಂಬದ ಮೂಲಗಳು ಹೇಳಿವೆ.

    ಅಭಯನಾಥ್ ಯಾದವ್ ಅವರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಮುಸ್ಲಿಂ ಸಂಘಟನೆಗಳು ಭಾರಿ ಸಂತಾಪ ಸೂಚಿಸಿವೆ. ಯಾದವ್​ ಅವರು ಸ್ನೇಹಮಯಿ ಹಾಗೂ ಖ್ಯಾತ ವಾಗ್ಮಿಯೂ ಆಗಿದ್ದರು ಎಂದು ಮುಸ್ಲಿಂ ಬೆಂಬಲಿಗರು ಹೇಳಿದರು. (ಏಜೆನ್ಸೀಸ್​)

    ಹಾಡು ಕೇಳಲು ಹಾಕಿದ್ದ ಡಿಜೆ ಸಿಸ್ಟಮ್​ 10 ಮಂದಿಯ ಬಲಿ ಪಡೆಯಿತು! ಪಿಕಪ್​ ವಾಹನದಲ್ಲಿ ದುರ್ಘಟನೆ

    ಪುರುಷನ ಆ ಅಂಗದ ಮೇಲೆ 99ರ ಅಜ್ಜಿಗೆ ಇದೆಂಥ ಪ್ರೀತಿ! ಕೊನೆಯ ಆಸೆ ಕೇಳಿ ಎಲ್ಲರೂ ಶಾಕ್​, ಈಡೇರಿಸಿದರು ಬಯಕೆ…

    ಅವನು ಇಲ್ಲಿ ಬರಲಾರ, ಇವಳು ಅಲ್ಲಿ ಹೋಗಲಾರಳು: ಪೇಚಿಗೆ ಸಿಲುಕಿದ ಪ್ರೇಮಿಗಳ ಆನ್​ಲೈನ್​ ಮದುವೆಗೆ ಹೈಕೋರ್ಟ್ ಅಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts