More

    VIDEO: ಗಂಡನ ಖುಷಿ ಮುಖ್ಯ… ಅದಕ್ಕೇ ನನಗೆ ಮೂಡ್‌ ಇಲ್ಲದಾಗ ಅಮ್ಮನನ್ನು ಅವನ ಬಳಿ ಕಳಿಸ್ತೇನೆ ಎಂದ ಸ್ಟಾರ್‌

    ನ್ಯೂಯಾರ್ಕ್‌: ಜಗತ್ತಿನಲ್ಲಿ ಎಂತೆಂಥ ವಿಚಿತ್ರ ಜನರು ಇರುತ್ತಾರೆ ಎಂದು ತಿಳಿಯುವುದೇ ಕಷ್ಟ. ಕೆಲವೊಮ್ಮೆ ನಂಬಲು ಅಸಾಧ್ಯ ಎನಿಸುವಂಥ ಘಟನೆಗಳು ನಡೆದರೆ, ಇಂಥವರೂ ಇರಲು ಸಾಧ್ಯನಾ ಎನ್ನುವಂಥ ಜನರೂ ಇರುವುದು ಕೆಲವು ಘಟನೆಗಳಿಂದ ತಿಳಿಯುತ್ತದೆ. ಅಂಥದ್ದೇ ಒಂದು ವಿಚಿತ್ರ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಒಬ್ಬರಿಗೆ ಇಬ್ಬರು ಪತ್ನಿಯರು ಇರುವುದು, ಮದುವೆಯಾದರೂ ಅಕ್ರಮ ಸಂಬಂಧ ಹೊಂದಿರುವುದು ಇವೆಲ್ಲವೂ ನಡೆದೇ ಇದೆ. ಅದೇ ರೀತಿ ಕೆಲವು ಸಂದರ್ಭಗಳಲ್ಲಿ ಮೊದಲ ಪತ್ನಿಯೇ ಖುದ್ದು ನಿಂತು ಪತಿಗೆ ಇನ್ನೊಂದು ಮದುವೆ ಮಾಡಿರುವುದೂ ಇದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಪತಿ ಪರಸ್ತ್ರೀ ಸಂಗ ಮಾಡಬಾರದು ಎಂದು ಖುದ್ದು ಮಗಳು ತನ್ನ ತಾಯಿಯನ್ನು ಪತಿಗೆ ಒಪ್ಪಿಸಿದ್ದಾಳೆ. ಪತಿಗೆ ತಾನು ಬೋರ್‌ ಎನಿಸಿದಾಗ ತನ್ನ ತಾಯಿ ಅವನ ಜತೆಗೆ ಇರಲಿ ಎಂದು ಈಕೆ ಬಯಸಿದ್ದು, ತಾಯಿಯೂ ಅದಕ್ಕೆ ಸಪೋರ್ಟ್‌ ಮಾಡಿದ್ದಾಳೆ!
    ಕೇಳಲು ಅಸಹ್ಯ ಎನಿಸುವ ಈ ಘಟನೆಯನ್ನು ಖುದ್ದು ಆ ಯುವತಿಯೇ ಹೇಳಿಕೊಂಡಿದ್ದು, ಅದೀಗ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಅಷ್ಟೇ ಅಲ್ಲ, ಇವರಿಬ್ಬರೂ ಬೋರ್‌ ಆದ್ರೆ ಈ ಪತಿ ಮಹಾಶಯ ಪತ್ನಿಯ ತಂಗಿ ಜತೆ ಕೂಡ ಮಜ ಮಾಡುತ್ತಾನಂತೆ!

    ಅಂದಹಾಗೆ ಇದು ನಡೆಯುತ್ತಿರುವುದು ಅಮೆರಿಕದಲ್ಲಿ. ಮಾಡಿ ಬ್ರುಕ್ಸ್‌ ಎಂಬ ಟಿಕ್‌ಟಾಕ್‌ ಸ್ಟಾರ್‌ ಈ ವಿಷಯವನ್ನು ಖುಷಿಯಿಂದ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಟಿಕ್​​ಟಾಕ್​ನಲ್ಲಿ ಈ ವಿಷಯವನ್ನು ಆಕೆ ಬಹಿರಂಗಪಡಿಸಿದ್ದಾಳೆ. ಪತಿಗೆ ಬೋರ್‌ ಆಗಬಾರದು ಎಂದು ನನ್ನ ತಾಯಿ ಮತ್ತು ತಂಗಿಯ ಜತೆ ಅವನಿಗೆ ಮಲಗಲು ಅನುವು ಮಾಡಿಕೊಟ್ಟಿರುವುದಾಗಿ ಹೇಳಿದ್ದಾಳೆ.

    ನನಗೆ ಕೆಲವೊಮ್ಮೆ ಮೂಡ್‌ ಇರುವುದಿಲ್ಲ. ಆದ್ದರಿಂದ ಆಗೆಲ್ಲಾ ತಾಯಿ ಮತ್ತು ತಂಗಿಯ ಜತೆ ಗಂಡ ಮಲಗಬಹುದು. ವಾರದಲ್ಲಿ ಎರಡು ದಿನ ಈ ಅವಕಾಶವಿದೆ. ಇಷ್ಟೇ ಇಲ್ಲದೇ ವೈಫ್‌ ಸ್ವಾಪಿಂಗ್‌ (ಪತ್ನಿಯರನ್ನು ಅದಲು ಬದಲು ಮಾಡಿಕೊಳ್ಳುವುದು) ಪಾರ್ಟಿಗಳಲ್ಲಿ ಕೂಡ ನಾನು ಮತ್ತು ಅಮ್ಮ ಭಾಗವಹಿಸುತ್ತೇವೆ. ಆದ್ದರಿಂದ ನನಗೂ ಇದರಿಂದ ಖುಷಿಯಾಗಿದೆ, ಅಮ್ಮನೂ ನನ್ನ ಗಂಡನ ಜತೆ ಖುಷಿಯಾಗಿದ್ದಾಳೆ ಎಂದು ಖುಷಿ ಹಂಚಿಕೊಂಡಿದ್ದಾಳೆ ಈಕೆ!

    ನನ್ನ ಗಂಡನ ಖುಷಿಯೇ ಮುಖ್ಯ. ಆದ್ದರಿಂದ ಹೀಗೆ ಮಾಡುತ್ತಿದ್ದೇನೆ ಎಂದೂ ಹೇಳಿದ್ದಾಳೆ! ಈಕೆ ಹೇಳಿರುವ ವಿಡಿಯೋ ವೈರಲ್‌ ಆಗಿದ್ದು, ಇದಾಗಲೇ 70 ಲಕ್ಷಕ್ಕೂ ಅಧಿಕ ಜನರು ಇದನ್ನು ವೀಕ್ಷಿಸಿದ್ದಾರೆ.

    ಇಲ್ಲಿದೆ ನೋಡಿ ಈಕೆ ಹೇಳಿರುವ ವಿಡಿಯೋ: ಕೃಪೆ ವೇಸಾ ಚಾನೆಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts