More

    ಒಳ್ಳೆಯ ಹೆಸರು ಸಂಪಾದಿಸುವುದಕ್ಕೆ ಹತ್ತು ವರ್ಷ, ವಾಟ್ಸ್​ಆ್ಯಪ್​ಗೆ ಹತ್ತೇ ನಿಮಿಷ: ಎಸ್​. ಸುರೇಶ್ ಕುಮಾರ್​​

    ಬೆಂಗಳೂರು: ಸುಳ್ಳು ಸುದ್ದಿಗಳಿಂದಾಗುವ ದುಷ್ಪರಿಣಾಮದ ಬಗ್ಗೆ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

    ಬಸವನಗುಡಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವವರೊಬ್ಬರು ಸಿಕ್ಕಿದ್ದರು.‌ ಸಾಕಷ್ಟು ಒಳ್ಳೆಯ ಹೆಸರುಳ್ಳ ಹೋಟೆಲ್ ಅವರದು.‌ ಹೇಗಿದೆ ವ್ಯಾಪಾರ? ಎಂದು ಕೇಳಿದೆ. ಕಳೆದ ವಾರ ಚೆನ್ನಾಗಿತ್ತು. ಆದರೆ ಈ ವಾರ ಪೂರ್ತಿ ಡಲ್ ಎಂದರು. ಏಕೆ ಹೀಗೆ? ಎಂಬ ನನ್ನ ಪ್ರಶ್ನೆಗೆ ಅವರು ತಮ್ಮ ಮೊಬೈಲ್​ನಲ್ಲಿ ಒಂದು ವಾಟ್ಸಪ್ ಸಂದೇಶ ತೋರಿಸಿದರು.‌

    ಇದನ್ನೂ ಓದಿ: ಉತ್ತರ ಕೊರಿಯಾ ಸರ್ವಾಧಿಕಾರಿ ಕೋಪಕ್ಕೆ ಕಾರಣವಾಯ್ತು ಪತ್ನಿಯ ಅಶ್ಲೀಲ ಚಿತ್ರಗಳು…!

    ಅವರ‌ ಮತ್ತು ಆ ಭಾಗದ ಇತರೆ ಪ್ರಸಿದ್ಧ 2-3 ಹೋಟೆಲ್​ಗಳಲ್ಲಿ ಕರೊನಾ ಸೋಂಕು ತಗುಲಿದವರು ಇದ್ದಾರೆ ಹಾಗೂ ಬಂದು ಹೋಗಿದ್ದಾರೆ ಎಂಬುದು ಆ ವಾಟ್ಸಪ್ ಸಂದೇಶದ ತಿರುಳು.

    ರಾಜಾಜಿನಗರದ ಪ್ರಸಿದ್ಧ ಬೇಕರಿ ಕುರಿತು ಇದೇ ರೀತಿಯ ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಪೋಲೀಸ್ ಕಂಪ್ಲೇಂಟ್ ದಾಖಲಿಸಿ, ಬೇಕರಿಯ ಮುಂದೆ ತಮ್ಮ ಬೇಕರಿಯ ಬಗ್ಗೆ ಹರಡುತ್ತಿರುವುದು ಸುಳ್ಳು ಸುದ್ದಿ ಎಂದು ತಿಳಿಸುವ ಬ್ಯಾನರ್ ಸಹ ಹಾಕಲಾಗಿದೆ.

    ಈ ರೀತಿಯ ಶುದ್ಧ ಸುಳ್ಳು ಸುದ್ದಿ ಹರಡಿ ವಿಕೃತಾನಂದ ಅನುಭವಿಸುವವರಿಗೆ ಏನನ್ನಬೇಕು? “ಒಳ್ಳೆಯ ಹೆಸರು ಸಂಪಾದಿಸುವುದಕ್ಕೆ ಹತ್ತು ವರುಷ, ವಾಟ್ಸ್​ಆ್ಯಪ್​ಗೆ ಹತ್ತು ನಿಮಿಷ” ಎಂಬ ಹೊಸ ಗಾದೆ ಸೃಷ್ಟಿಸಬಹುದೇನೋ? ಎಂದು ಸುರೇಶ್​ ಕುಮಾರ್​ ಅವರು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಪತ್ನಿಯನ್ನು ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ ಮಾಡಿದ ದುರುಳ ಪತಿ

    2 ಸಾವಿರಕ್ಕೂ ಅಧಿಕ ಯೋಧರಿಗೆ ಕರೊನಾ ಸೋಂಕು- ಅನೇಕರು ಚೇತರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts