More

    ಕೇರಳದಲ್ಲೂ ಸದ್ದು ಮಾಡುತ್ತಿದೆ ಕೋಳಿಮೊಟ್ಟೆ: ಆದ್ರೆ ಇಲ್ಲಿ ವಿಷ್ಯನೇ ಬೇರೆ… ಜಾಲತಾಣದ ತುಂಬೆಲ್ಲಾ ಇದರದ್ದೇ ಚರ್ಚೆ

    ಮಲಪ್ಪುರಂ (ಕೇರಳ): ಕರ್ನಾಟಕದ ಶಾಲೆಗಳಲ್ಲಿ ಮಕ್ಕಳಿಗೆ ಕೋಳಿಮೊಟ್ಟೆ ಕೊಡಬೇಕೋ ಬೇಡವೋ ಎಂಬ ಚರ್ಚೆ ಬಹಳ ಗಂಭೀರವಾಗಿರುವ ಬೆನ್ನಲ್ಲೇ ಕೇರಳದಲ್ಲಿ ಕೋಳಿಯೊಂದರ ಮೊಟ್ಟೆಗಳು ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ. ಇದಕ್ಕೆ ಕಾರಣ, ಈ ಮೊಟ್ಟೆಗಳ ಗಾತ್ರ!

    ಕೇರಳದ ಮಲಪ್ಪುರಂನ ಸಮದ್‌ ಎಂಬುವವರ ಮನೆಯಲ್ಲಿ ಇರುವ ಕೋಳಿಯೊಂದು ಅನೇಕ ಮೊಟ್ಟೆಗಳನ್ನು ಇಟ್ಟಿದ್ದು, ಅವೆಲ್ಲವೂ ದ್ರಾಕ್ಷಿಹಣ್ಣಿಗಿಂತ ತುಸು ದೊಡ್ಡ ಸೈಜ್‌ನಲ್ಲಿ ಇರುವುದು ಅಚ್ಚರಿ ಉಂಟುಮಾಡುತ್ತಿದೆ. ಈ ಮೊಟ್ಟೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ನೋಡುಗರನ್ನು ಕುತೂಹಲಗೊಳಿಸುತ್ತಿವೆ.

    ಈ ಕೋಳಿ ಕಳೆದ 5 ವರ್ಷಗಳಿಂದ ಇದೇ ರೀತಿಯ ಮೊಟ್ಟೆ ಇಡುತ್ತಿದೆ. ಇಲ್ಲಿ ಬಿಟ್ಟರೆ ಇಂಥ ವಿಚಿತ್ರ ಮೊಟ್ಟೆಗಳು ಎಲ್ಲಿಯೂ ಇಟ್ಟ ಬಗ್ಗೆ ವರದಿಯಾಗಿಲ್ಲ, ಅಷ್ಟಕ್ಕೂ ಈ ಕೋಳಿಯೇನು ವಿಶೇಷ ತಳಿಯದ್ದು ಅಥವಾ ವಿಭಿನ್ನ ಜಾತಿಯದ್ದು ಅಲ್ಲ. ಆದರೂ ಅದ್ಯಾಕೆ ಈ ರೀತಿಯ ಮೊಟ್ಟೆ ಇಡುತ್ತಿದೆ ಎಂಬ ಬಗ್ಗೆ ಯಾರಲ್ಲಿಯೂ ಉತ್ತರವಿಲ್ಲ.

    ಅಷ್ಟಕ್ಕೂ ಈ ಕೋಳಿಮೊಟ್ಟೆಯಲ್ಲಿ ಹಳದಿ ಬಣ್ಣದ ಲೋಳೆ ಇರುವುದಿಲ್ಲ. ಬದಲಿಗೆ ಬಿಳಿ ಬಣ್ಣದ ಲೋಳೆ ಮಾತ್ರ ಇದೆ. ಆರಂಭದಲ್ಲಿ ಕೆಲವು ದಿನ ಸಾಮಾನ್ಯ ರೀತಿಯ ಮೊಟ್ಟೆ ಇಡುತ್ತಿದ್ದ ತಮ್ಮ ಈ ಕೋಳಿ ಬರಬರುತ್ತಾ ಚಿಕ್ಕಚಿಕ್ಕ ಗಾತ್ರದ ಮೊಟ್ಟೆ ಇಡುತ್ತಿದೆ ಎನ್ನುತ್ತಾರೆ ಸಮದ್‌.

    ಇದಕ್ಕೆ ಕಾರಣ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಹಲವಾರು ಕೋಳಿಗಳು ಇದ್ದು, ಅವುಗಳಿಗೆ ನೀಡುವ ಆಹಾರವನ್ನೇ ಇದಕ್ಕೂ ನೀಡುತ್ತಿದ್ದೇವೆ ಎಂದಿದ್ದಾರೆ. ಸದ್ಯ ಈ ಕೋಳಿಯ ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಅನೇಕ ಮಂದಿ ಸಮದ್‌ ಅವರನ್ನು ಹುಡುಕಿಕೊಂಡು ಅವರ ಮನೆಯತ್ತ ಧಾವಿಸುತ್ತಿದ್ದಾರಂತೆ. ಈ ಕೋಳಿ ಸದ್ಯ ಹೀರೋ ಆಗಿದ್ದು, ಅದನ್ನು ನೋಡಲು ಜನರು ಬಹುಸಂಖ್ಯೆಯಲ್ಲಿ ತಮ್ಮ ಮನೆಗೆ ಬರುತ್ತಿರುವುದಾಗಿ ಸಮದ್‌ ಹೇಳುತ್ತಾರೆ.

    VIDEO: ಹೆಣ್ಣು ಗೊಂಬೆಗಳನ್ನೂ ಬಿಡದ ತಾಲಿಬಾನಿಗಳು! ಛೇ… ಛೇ… ಎನ್ನುವಂಥ ವಿಡಿಯೋ ವೈರಲ್

    VIDEO: ತಾನು ಬಿಡೋ ‘ವಾಯು’ ಮಾರಿ ಕೋಟಿ ಕೋಟಿ ಸಂಪಾದಿಸ್ತಿರೋ ನಟಿಗೆ ಹೃದಯಾಘಾತ- ಐಸಿಯುಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts