More

    ಲವ್​ ಜಿಹಾದಿಗಳ ನಂತರ ಕಲ್ಲು ತೂರಾಟಗಾರರಿಗೆ ನಡುಕ- ಜೀವಾವಧಿ ಶಿಕ್ಷೆಗೆ ನಿರ್ಧಾರ

    ಇಂದೋರ್: ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆ ಎಂದರೆ ಕಲ್ಲು ತೂರಾಟ ಮಾಮೂಲಾಗಿಬಿಟ್ಟಿದೆ. ಕಾಶ್ಮೀರದಲ್ಲಷ್ಟೇ ಕಂಡುಬರುತ್ತಿದ್ದ ಮಾದರಿಯಲ್ಲಿಯೇ ಕಲ್ಲುತೂರಿ ಉದ್ದೇಶಪೂರ್ವಕವಾಗಿ ಹಿಂಸಾಚಾರಕ್ಕೆ ಇಳಿಯುವವರ ದೊಡ್ಡ ಗುಂಪೇ ಸೃಷ್ಟಿಯಾಗಿದೆ.

    ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಸರ್ಕಾರ, ಕಲ್ಲು ತೂರಾಟ ನಡೆಸುವ ಗಲಭೆಕೋರರಿಗೆ ಜೀವಾವಧಿ ಶಿಕ್ಷೆ ನೀಡಲು ಮುಂದಾಗಿದೆ. ಈ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಇಂದು ಮಾಹಿತಿ ನೀಡಿದ್ದಾರೆ.

    ಇದಾಗಲೇ ಲವ್​ ಜಿಹಾದ್​ಗೆ ಸಂಬಂಧಿಸಿದಂತೆ ಕಠಿಣ ಕಾನೂನು ರೂಪಿಸಿರುವ ಮಧ್ಯಪ್ರದೇಶ ಸರ್ಕಾರ ಇದೀಗ ಕಲ್ಲುತೂರಾಟ ನಡೆಸುವವರ ವಿರುದ್ಧ ಕಠಿಣ ಕಾನೂನಿಗೆ ಮುಂದಾಗಿದೆ.

    ರಾಜ್ಯದಲ್ಲಿ ಕಲ್ಲು ತೂರಾಟಗಾರರನ್ನು ಸುಮ್ಮನೇ ಬಿಡುವುದಿಲ್ಲ. ಅವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಲು ಎಲ್ಲಾ ರೀತಿಯ ಸೂಕ್ತ ಕ್ರಮ ತೆಗೆದುಕೊಂಡು, ಕಠಿಣ ಕಾನೂನು ಜಾರಿಗೊಳಿಸಲಾಗುವುದು ಎಂದಿದ್ದಾರೆ.

    ಲವ್​ ಜಿಹಾದಿಗಳ ನಂತರ ಕಲ್ಲು ತೂರಾಟಗಾರರಿಗೆ ನಡುಕ- ಜೀವಾವಧಿ ಶಿಕ್ಷೆಗೆ ನಿರ್ಧಾರ
    ಇಂದೋರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಕಲ್ಲು ತೂರಾಟ ಘಟನೆಗಳ ಬಗ್ಗೆ ಬಿಗಿಯಾದ ನಿಯಂತ್ರಣ ಹೇರಲು ಜೀವಾವಧಿ ಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿಗೆ ತರುವ ಅಗತ್ಯ ಕಂಡುಬರುತ್ತಿದೆ, ಅಷ್ಟೇ ಅಲ್ಲದೇ ಶಿಕ್ಷೆಗೆ ಒಳಗಾದರೆ ಅಂಥವರನ್ನು ಯಾವುದೇ ಕಾರಣಕ್ಕೂ ಜೈಲಿನಿಂದ ಮೊದಲು ಬಿಡುಗಡೆ ಮಾಡುವುದಿಲ್ಲ ಎಂಬ ಅಂಶವನ್ನೂ ಈ ಕಾನೂನಿನಲ್ಲಿ ಸೇರಿಸಲಾಗುವುದು ಎಂದರು.

    ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸೇರಿದಂತೆ ಕೆಲವು ಗುಂಪುಗಳು ನಡೆಸಿದ್ದ ರ್ಯಾಲಿಯ ವೇಳೆ ಉಜ್ಜಯಿನಿ, ಇಂದೋರ್ ಮತ್ತು ಮಾಂಡ್‌ಸೌರ್‌ನಲ್ಲಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಈ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 25 ಮತ್ತು ಡಿಸೆಂಬರ್ 30 ರ ನಡುವೆ ಈ ಘಟನೆ ಸಂಭವಿಸಿದೆ.

    ಘರ್ಷಣೆಯಲ್ಲಿ ಸುಮಾರು ಎರಡು ಡಜನ್ ಜನರು ಗಾಯಗೊಂಡಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಂಪಿ ಪೊಲೀಸರು 46 ಜನರನ್ನು ಬಂಧಿಸಿದ್ದಾರೆ.

    33ಕ್ಕೇ ಲೈಂಗಿಕಾಸಕ್ತಿ ಕುಂದುಹೋಗಿದೆ- ಪತಿ ಹತ್ತಿರ ಬಂದರೆ ಸಿಟ್ಟುಬರುತ್ತದೆ: ಏನು ಮಾಡಲಿ?

    ಸೌದಿಯಲ್ಲಿ ನಡೆಯುತ್ತಿರುವ ಡಕಾರ್ ರ‍್ಯಾಲಿಯಲ್ಲಿ ಅವಘಡ: ಕೋಮಾಕ್ಕೆ ಜಾರಿದ ಕನ್ನಡದ ಕುವರ

    ಪತ್ನಿಗೊಂದು, ಆಕೆಗೊಂದು ಮನೆ: ಹೆಂಡ್ತಿ ಕೈಲೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕೊಪ್ಪಳದ ಇಂಜಿನಿಯರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts