More

    ‘ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳೇ, ಪರೀಕ್ಷಾ ಕೇಂದ್ರಗಳು ಸುರಕ್ಷಿತ ತಾಣ- ನಿಶ್ಚಿಂತೆಯಿಂದ ಬನ್ನಿ’

    ಧಾರವಾಡ: ಇದೆ 19 ಮತ್ತು 22ರಂದು ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿವೆ. ಈ ನಿಟ್ಟಿನಲ್ಲಿ ಇದಾಗಲೇ ರಾಜ್ಯಾದ್ಯಂತ ಸಕಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಭಯಮುಕ್ತ ವಾತಾವರಣ ನಿರ್ಮಿಸಲಾಗಿದೆ.

    ಈ ಕುರಿತು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು ಇದಾಗಲೇ ಮಕ್ಕಳಿಗೆ ಹಾಗೂ ಪಾಲಕರಿಗೆ ಸಾಕಷ್ಟು ಧೈರ್ಯವನ್ನು ತುಂಬಿದ್ದಾರೆ. ಇದೀಗ ಧಾರವಾಡದ ಡಿಡಿಪಿಐ ಮೋಹನ್ ಕುಮಾರ್ ಹಂಚಾಟೆ ಅವರು ಮತ್ತಷ್ಟು ಧೈರ್ಯ ತುಂಬಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ತೆಗೆದುಕೊಳ್ಳಲಾಗಿರುವ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

    ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಆತ್ಮವಿಶ್ವಾಸವೇ ಮುಖ್ಯ. ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಗೆ ಪರೀಕ್ಷಾ ಕೇಂದ್ರದಲ್ಲಿ ಆಕ್ಸಿಮೀಟರ್​, ಸ್ಯಾನಿಟೈಸರ್, ಮಾಸ್ಕ್​ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

    ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಹೆಲ್ತ್​ ಡೆಸ್ಕ್​ ರಚನೆ ಮಾಡಲಾಗುತ್ತಿದೆ. ಇದರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಥರ್ಮಲ್​ ಸ್ಕ್ಯಾನರ್​ ಮಾಡಲಾಗುತ್ತಿದೆ. ಒಂದು ವೇಳೆ ಅನಾರೋಗ್ಯ ಕಂಡುಬಂದರೆ ಅಂಥ ಮಕ್ಕಳಿಗೆ ಐಸೋಲೇಷನ್​ ಕೊಠಡಿಗೆ ಕಳುಹಿಸಲಾಗುತ್ತದೆ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದು ಕೊಠಡಿಯಲ್ಲಿ ಕೇವಲ 12 ವಿದ್ಯಾರ್ಥಿಗಳನ್ನು ಕುಳ್ಳರಿಸಲಾಗುತ್ತಿದೆ. ಆದ್ದರಿಂದ ಆತ್ಮವಿಶ್ವಾಸದಿಂದ ಕೇಂದ್ರಕ್ಕೆ ಬಂದು ಪರೀಕ್ಷೆ ಎದುರಿಸಿ, ಇದು ಸುರಕ್ಷಿತ ತಾಣವಾಗಿದೆ ಎಂದಿದ್ದಾರೆ.

    ಮದ್ವೆಗೆ ಬರೋದಾದ್ರೆ ವಧು ಹತ್ರ ಮಾತನಾಡ್ಬಾರ್ದು, ಮೇಕಪ್​ ಮಾಡಿರಬಾರ್ದು, 6 ಸಾವಿರ ರೂ. ಗಿಫ್ಟ್​ ತರಬೇಕು!

    ಚಾಮುಂಡಮ್ಮನ ದರ್ಶನ ಭಾಗ್ಯ ಸಿಗದಿದ್ದರೇನು? ಬ್ಯಾರಿಕೇಡ್​ ಬಳಿಯೇ ನಡೆಯಿತು ಪೂಜೆ,ಪುನಸ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts