More

    ನೋಟ್‌ ಮೇಲಿನ ವೈರಸ್‌ ಹೋಗಿಸಲು ಈ ದಂಪತಿ ಏನ್‌ ಮಾಡಿದ್ರು ನೋಡಿ…!

    ಸಿಯಾಲ್‌ (ದಕ್ಷಿಣ ಕೊರಿಯಾ): ಈಗ ಜನರಿಗೆ ಕರೊನಾ ವೈರಸ್‌ ಮೇಲೆ ಯಾವ ರೀತಿಯ ಹೆದರಿಕೆ ಎಂದರೆ ಹಣವನ್ನು ಮುಟ್ಟಲು ಕೂಡ ಹಿಂದೇಟು ಹಾಕುತ್ತಿದ್ದಾರೆ.

    ಹಣ ಕಂಡರೆ ಹೆಣನೂ ಬಾಯಿ ಬಿಡುತ್ತದೆ ಎನ್ನುವ ಗಾದೆಮಾತನ್ನು ಈ ಕರೊನಾ ಸುಳ್ಳು ಮಾಡಿರುವ ಕೆಲವು ಘಟನೆಗಳು ಇತ್ತೀಚೆಗೆ ನಡೆದಿವೆ. ರಸ್ತೆಯ ಮೇಲೆ ಬಿದ್ದಿರುವ ಕಂತೆ ಕಂತೆ ನೋಟುಗಳನ್ನು ಎತ್ತಿಕೊಳ್ಳದ ಜನ ಅದರ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದು ಅಲ್ಲಲ್ಲಿ ವರದಿಯಾಗಿದೆ.

    ಇದು ಒಂದೆಡೆಯಾದರೆ, ದಕ್ಷಿಣ ಕೊರಿಯಾದ ಸಿಯಾಲ್‌ನ ಇಯೋಮ್‌ ದಂಪತಿ ಮಾತ್ರ ತೀರಾ ವಿಚಿತ್ರ ಎನ್ನುವಂಥ ‘ಸಾಹಸ’ಕ್ಕೆ ಕೈ ಹಾಕಿರುವ ಘಟನೆ ನಡೆದಿದೆ. ತಮಗೆ ಸಂಬಂಧಿಕರು ಕೊಟ್ಟಿರುವ ನೋಟಿನ ಮೇಲೆ ಕರೊನಾ ಇರಬಹುದು ಎಂಬ ಭಯದಿಂದ ಇವರು ಏನು ಮಾಡಿದ್ದಾರೆ ಗೊತ್ತಾ? ಎಲ್ಲಾ ನೋಟುಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ಹಾಕಿ ತಿರುಗಿಸಿದ್ದಾರೆ!

    ಇವರ ಕುಟುಂಬಸ್ಥರೊಬ್ಬರು ಕರೊನಾದಿಂದ ನಿಧನರಾಗಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಪದ್ಧತಿಯಂತೆ ಕುಟುಂಬಸ್ಥರಿಗೆ ಸಂತಾಪದ ಹಣವಾಗಿ ಒಂದಿಷ್ಟು ದುಡ್ಡನ್ನು ನೀಡಲಾಗುತ್ತದೆ. ಅದರಂತೆ ಇಬ್ಬರು ಇವರಿಗೆ 50 ಸಾವಿರ ವೀನ್‌ (ಅಂದರೆ ಸುಮಾರು 3,140 ರೂಪಾಯಿ ನೀಡಿದ್ದರು.

    ಇದನ್ನೂ ಓದಿ: ರಾಮನಿಗಾಗಿ ಒಂದೂಕಾಲು ಲಕ್ಷ ಮಣ್ಣಿನ ಹಣತೆ: ಖುಷಿಯಲ್ಲಿ ಕುಂಬಾರರು

    ಆದರೆ ಶವಸಂಸ್ಕಾರದ ಸಂದರ್ಭದಲ್ಲಿ ಈ ಹಣವನ್ನು ನೀಡಿದ್ದರಿಂದ ಇಯೋಮ್‌ ದಂಪತಿಗೆ ಭಯವಾಗಿತ್ತು. ಕರೊನಾ ಸೋಂಕು ಇದಕ್ಕೆ ತಗುಲಿರುವ ಸಾಧ್ಯತೆ ಇದೆ ಎಂದು ಅವರು ಅಂದುಕೊಂಡರು. ಹಾಗೆಂದು ಸುಮ್ಮನೇ ಸಿಕ್ಕ ಹಣವನ್ನು ಬೀಸಾಕಲು ಬರುತ್ತದೆಯೇ? ಅದಕ್ಕಾಗಿಯೇ ಒಂದು ಪ್ಲ್ಯಾನ್‌ ಮಾಡಿದರು. ಅದೇನೆಂದರೆ ನೋಟುಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ಹಾಕಿ ತಿರುಗಿಸಿ ನಂತರ ಅದನ್ನು ಡ್ರೈಯರ್‌ನಲ್ಲಿ ಡ್ರೈ ಮಾಡಿದರು.

    ವಾಷಿಂಗ್‌ ಮಷಿನ್‌ ಸ್ಪಿನ್ ಆಗುತ್ತಿದ್ದಂತೆ ನೋಡುಗಳು ಹಾನಿಯಾಗಿದ್ದು, ಉಪಯೋಗಕ್ಕೆ ಬರದಂತಾಗಿವೆ. ಕೂಡಲೇ ಬ್ಯಾಂಕ್ ಆಫ್ ಕೋರಿಯಾಗೆ ತೆರಳಿರುವ ಗಂಡ, ನೋಟುಗಳು ತುಂಬಾ ಹಾನಿಯಾಗಿವೆ ಬೇರೆ ನೋಟುಗಳನ್ನು ಕೊಡಿ ಎಂದು ಕೇಳಿದ್ದಾರೆ. ಆದರೆ ಬ್ಯಾಂಕ್‍ನವರು ಹೊಸ ನೋಟುಗಳನ್ನು ಕೊಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ತುಂಬಾ ಮನವಿ ಮಾಡಿಕೊಂಡ ನಂತರ ಸ್ವಲ್ಪ ಹಣವನ್ನಷ್ಟೇ ನೀಡಲಾಗಿದೆ. ಅದರಲ್ಲಿ ಸರಿಯಾಗಿ ಎಷ್ಟು ಹಣ ಇದೆ ಎಂದು ತಿಳಿಯದ ಕಾರಣ, ಹಣವನ್ನು ಎಕ್ಸ್‌ಚೇಂಜ್‌ ಮಾಡಲು ಸಾಧ್ಯವಿಲ್ಲ ಎಂದ ಬ್ಯಾಂಕ್‌ ಸ್ವಲ್ಪ ಹಣವನ್ನು ನೀಡಿರುವುದಾಗಿ ಅಲ್ಲಿಯ ಮಾಧ್ಯಮಗಳು ವರದಿ ಮಾಡಿವೆ.

    ಕಳೆದ ತಿಂಗಳು ಕಿಮ್‌ ಎಂಬ ವ್ಯಕ್ತಿ ಮೈಕ್ರೋವೋವನ್‌ನಲ್ಲಿಟ್ಟು ಹಣ ಸುಟ್ಟುಕೊಂಡ ಘಟನೆಯೂ ವರದಿಯಾಗಿದೆ. (ಏಜೆನ್ಸೀಸ್‌)

    ಗಂಟಲದ್ರವದ ಬದಲು ಯುವತಿಯ ಯೋನಿದ್ರವ ಪಡೆದ ಲ್ಯಾಬ್‌ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts