More

    ಆರು ಗಂಟೆ ಜಾಲತಾಣ ಸ್ಥಗಿತ; ಕಂಗೆಟ್ಟ ಬಳಕೆದಾರರು- ಏಳು ಬಿಲಿಯನ್‌ ಡಾಲರ್‌ ಕಳೆದುಕೊಂಡ ಜುಕರ್‌ಬರ್ಗ!

    ನವದೆಹಲಿ: ಸೋಮವಾರ (ಅ.4) ರಾತ್ರಿ ಸುಮಾರು 9 ಗಂಟೆಯಿಂದ ಮಧ್ಯರಾತ್ರಿ 3.30ರ ವರೆಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಮೆಸೆಂಜರ್‌ ಎಲ್ಲವೂ ಏಕಾಏಕಿ ಸ್ಥಗಿತಗೊಂಡಿದ್ದವು. ಮೆಸೇಜ್‌ ಕಳುಹಿಸಲಾಗದೇ, ಸ್ಟೇಟಸ್‌ ಅಪ್‌ಡೇಟ್‌ ಮಾಡಲು ಆಗದೇ ಕೋಟ್ಯಂತರ ಬಳಕೆದಾರರು ಏನಾಯಿತೆಂದು ತಿಳಿಯದೇ ಹುಚ್ಚರಂತಾಗಿದ್ದರು.

    ಇದು ಬಳಕೆದಾರರ ಮಾತಾದರೆ, ಈ ಕೆಲವೇ ಗಂಟೆಗಳಲ್ಲಿ ಫೇಸ್‍ಬುಕ್‍ನ ಷೇರು ಮೌಲ್ಯ ಕೆಲವೇ ಗಂಟೆಗಳಲ್ಲಿ ಶೇಕಡಾ 4.9 ರಷ್ಟು ಕುಸಿದಿದೆ. ಫೇಸ್‌ಬುಕ್‌ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತು ಸುಮಾರು 7 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ. ಮಾತ್ರವಲ್ಲದೇ, 121.6 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಜುಕರ್‌ಬರ್ಗ್ ಬಿಲ್ ಗೇಟ್ಸ್‌ಗಿಂತ ಹಿಂದೆ ಬಿದ್ದಿದ್ದಾರೆ. ಬ್ಲೂಮ್‌ ಬರ್ಗ್‌ನ ಸ್ಕಾಟ್ ಕಾರ್ಪೆಂಟರ್ ನೀಡಿರುವ ವರದಿಯ ಪ್ರಕಾರ, ಫೇಸ್‌ಬುಕ್ ಇಂಕ್ ನೆಟ್‌ವರ್ಕ್‌ನಿಂದ ದೈತ್ಯ ಕಂಪೆನಿಗಳು ಜಾಹೀರಾತನ್ನು ಹಿಂತೆಗೆದುಕೊಂಡಿದ್ದರಿಂದ ಈ ಪರಿಯ ಲಾಸ್‌ ಅನ್ನು ಜುಕರ್‌ಬರ್ಗ್‌ ಕಂಡಿದ್ದಾರೆ.

    ವಾಟ್ಸ್‌ಆ್ಯಪ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಡೌನ್‌ಟೆಕ್ಟರ್ ಪ್ರಕಾರ, ಶೇ .40 ರಷ್ಟು ಬಳಕೆದಾರರಿಗೆ ಆಪ್, ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ, ಶೇ .30 ರಷ್ಟು ಜನರಿಗೆ ಸಂದೇಶ ಕಳುಹಿಸಲು ತೊಂದರೆಯಾಗಿದೆ ಮತ್ತು ಶೇ. 22 ರಷ್ಟು ಮಂದಿ ವೆಬ್ ಆವೃತ್ತಿಯಲ್ಲಿ ಸಮಸ್ಯೆ ಎದುರಿಸಿದ್ದಾರೆ.

    ಜಗತ್ತಿನಲ್ಲಿ ಸುಮಾರು 200 ಕೋಟಿ ಫೇಸ್‍ಬುಕ್ ಬಳಕೆದಾರರಿದ್ದಾರೆ. ಭಾರತದಲ್ಲಿ 53 ಕೋಟಿ ವಾಟ್ಸ್​​ಆಯಪ್​ ಬಳಕೆದಾರರು, 41 ಕೋಟಿ ಫೇಸ್‍ಬುಕ್ ಬಳಕೆದಾರರು ಮತ್ತು 21 ಕೋಟಿ ಇನ್‍ಸ್ಟಾಗ್ರಾಮ್ ಬಳಕೆದಾರರು ಇದ್ದಾರೆ. ಇವರಲ್ಲಿ ಶೇ.90ಕ್ಕಿಂತ ಹೆಚ್ಚು ಮಂದಿ ಈ ಸಮಸ್ಯೆ ಎದುರಿಸಿದ್ದಾರೆ. ಅಸಲಿಗೆ ಇಂಥ ಸಮಸ್ಯೆಗಳು ಬಂದಾಗ ಕಂಪೆನಿಗಳು ರಹಸ್ಯವನ್ನು ಬಿಟ್ಟುಕೊಡುವುದಿಲ್ಲ. ತಾಂತ್ರಿಕ ದೋಷ ಕಾರಣ ಎಂದು ವಿವರಣೆ ನೀಡಲಾಗಿದ್ದು, ಜುಕರ್‌ಬರ್ಗ್‌ ಬಳಕೆದಾರರ ಕ್ಷಮೆ ಕೋರಿದ್ದಾರೆ.

    ಒಟ್ಟಿಗಿದ್ದದ್ದು ಐದಾರು ದಿನ- ಡಿವೋರ್ಸ್‌ಗೆ ಕೋರ್ಟ್‌ ಅಲೆದಾಡಿದ್ದು 26 ವರ್ಷ: ಹೀಗೊಂದು ವಿಚಿತ್ರ ಕೇಸ್‌!

    ಶಾರುಖ್‌ ಪತ್ನಿಗೂ ಡ್ರಗ್ಸ್‌ ನಂಟು? ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದ ಗೌರಿ ಖಾನ್‌!

    VIDEO: ಡ್ರಗ್ಸ್‌, ಸಿಗರೇಟ್‌, ಸೆಕ್ಸ್‌ ಎಲ್ಲದಕ್ಕೂ ಮಗನಿಗೆ ಓಕೆ ಅಂದಿದ್ದೇನೆ: ಶಾರುಖ್‌ ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts