More

    VIDEO: ವಿಷಕಾರಿ ಹಾವಿಗೆ ಸಹೋದರಿಯರಿಂದ ರಾಖಿ ಕಟ್ಟಿಸಲುಹೋಗಿ ಪ್ರಾಣ ತೆತ್ತ ‘ಸ್ನೇಕ್‌ಮ್ಯಾನ್’

    ಪಟ್ನಾ: ಸ್ನೇಹ್‌ಮ್ಯಾನ್‌ ಎಂದೇ ಹೆಸರಾಗಿದ್ದ ಯುವಕನೊಬ್ಬ ಇದೀಗ ಹಾವಿನಿಂದಲೇ ಪ್ರಾಣಕಳೆದುಕೊಂಡಿರುವ ಘಟನೆ ಬಿಹಾರದ ಸಾರಣ ಜಿಲ್ಲೆಯಲ್ಲಿ ನಡೆದಿದೆ.

    ವಿಷಕಾರಿ ಹಾವುಗಳನ್ನೂ ಹಿಡಿಯುವುದರಲ್ಲಿಯೂ ಪಳಗಿದ್ದ 25 ವರ್ಷದ ಮನಮೋಹನ್ ಉರ್ಫ್ ಬವುರಾ ಇದೇ ಧೈರ್ಯದಿಂದ ಹಾವುಗಳಿಗೆ ರಾಖಿ ಕಟ್ಟಿಸುವ ಪ್ರಯತ್ನ ಮಾಡಿದ್ದಾನೆ. ಸೋದರಿಯರಿಂದ ಈ ಹಾವುಗಳಿಗೆ ರಾಖಿ ಕಟ್ಟಿಸಲು ಮುಂದಾಗಿದ್ದಾನೆ.

    ಕಳೆದ 10 ವರ್ಷಗಳಿಂದ ಈತ ಹಾವುಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದನು. ರಕ್ಷಾ ಬಂಧನವಾಗಿದ್ದ ಭಾನುವಾರ ಎರಡು ನಾಗರಹಾವು ಹಿಡಿದಿದ್ದ ಮನಮೋಹನ್ ತನ್ನ ಇಸೋದರಿಯರಿಂದ ರಾಖಿ ಕಟ್ಟಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಅದರ ಬಾಲ ಹಿಡಿದುಕೊಂಡಿದ್ದಾನೆ. ಈ ವೇಳೆ ಒಂದು ಹಾವು ಮನಮೋಹನ್ ಕಾಲಿನ ಹೆಬ್ಬೆರಳನ್ನು ಕಚ್ಚಿದೆ.
    ಕೂಡಲೇ ಯವಕನಿಗೆ ಸ್ಥಳೀಯರು ಗಿಡಮೂಲಿಕೆ ಔಷಧಿ ಕೊಟ್ಟಿದ್ದಾರೆ. ಆದರೆ ಆರೋಗ್ಯ ಏರುಪೇರಾದ ಕಾರಣ, ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಹಾವು ಕಚ್ಚಿದರೆ ಅಗತ್ಯವಾಗಿ ಬೇಕಿದ್ದ ಆ್ಯಂಟಿವೆನಮ್ ಇಂಜೆಕ್ಷನ್ ಅಲ್ಲಿ ಇರದಿದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇಷ್ಟರಲ್ಲಿಯೇ ಯುವಕ ಪ್ರಾಣ ಬಿಟ್ಟಿದ್ದಾನೆ.

    ಯುವಕ ಮನಮೋಹನ್ ಸ್ಥಳೀಯವಾಗಿ ಸ್ನೇಕ್ ಬವುರಾ ಎಂದೇ ಪ್ರಸಿದ್ಧ ಪಡೆದಿದ್ದ. ಸುತ್ತಮುತ್ತದ ಗ್ರಾಮಗಳಲ್ಲಿ ಎಲ್ಲೇ ಹಾವು ಕಾಣಿಸಿಕೊಂಡರೂ ಈತನಿಗೇ ಕರೆ ಮಾಡಲಾಗುತ್ತಿತ್ತು. ಗ್ರಾಮಸ್ಥರಿಗೆ ಹಾವುಗಳನ್ನು ಕೊಲ್ಲದಂತೆ ಜಾಗೃತಿ ಸಹ ಮೂಡಿಸುತ್ತಿದ್ದ ಯುವಕ. ಆದರೆ ಅದೃಷ್ಟ ಕೆಟ್ಟಿತ್ತು. ಹಾವು ಕಚ್ಚಿದ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಆತ ಬದುಕುತ್ತಿದ್ದ ಎಂದು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.

    ಇಲ್ಲಿದೆ ನೋಡಿ ವಿಡಿಯೋ:

    ತಾಲಿಬಾನಿ ರಕ್ಕಸರು ಗಡಗಡ- 300 ಮಂದಿಯನ್ನು ಹೊಡೆದುರುಳಿಸಿದ ಪಂಜ್‌ಶೀರ್‌ ಯೋಧರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts