More

    ಸದನದಲ್ಲಿ ಬಿಸಿಯೇರಿಸಿದ ‘ಸಿಂಗಲ್​ ಹೆಂಡ್ತಿ’… ಸಚಿವರ ವಿರುದ್ಧ ಗರಂ, ವಿಷಾದ ವ್ಯಕ್ತಪಡಿಸಿದ ಸುಧಾಕರ್​

    ಬೆಂಗಳೂರು: ಸಿಡಿ ಪ್ರಕರಣ ಇದೀಗ ಸಿಂಗಲ್​ ಹೆಂಡ್ತಿಯವರೆಗೆ ತಿರುಗಿದ್ದು, ಸದನದಲ್ಲಿ ಗರಂ ವಾತಾವರಣ ಸೃಷ್ಟಿಸಿದೆ. ಬಿಜೆಪಿ ಸಚಿವರಾಗಿದ್ದವರ ವಿರುದ್ಧ ಸಿಡಿ ಹಗರಣ ಬಂದಿದ್ದರಿಂದ ಪ್ರತಿಪಕ್ಷಗಳು ಬಿಜೆಪಿಯ ಎಲ್ಲ ಮುಖಂಡರ ವಿರುದ್ಧ ಟೀಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ತಿರುಗೇಟು ನೀಡಲು ಎಂಬಂತಎ ಆರೋಗ್ಯ ಸಚಿವ ಡಾ. ಕೆ.ಸುಧಾಕರ್​ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ರಮೇಶ್ ಕುಮಾರ್ ಎಲ್ಲರೂ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ ಎಂದು ಕಿಡಿ ಕಾರಿದ್ದರು.

    ಈ ವಿವಾದ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಖಂಡರು ಸುಧಾಕರ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಾನೂ ಸೇರಿದಂತೆ 224 ಶಾಸಕರ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನೂ ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತೆ ಎಂದು ಸುಧಾಕರ್​ ಹೇಳಿದ್ದರು.

    ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ದೇಶಪಾಂಡೆ, ರೇಣುಕಾಚಾರ್ಯ ಸೇರಿದಂತೆ ಕಾಂಗ್ರೆಸ್​ನ ಹಲವು ಮುಖಂಡರು ಸುಧಾಕರ್​ ವಿರುದ್ಧ ತಿರುಗಿಬಿದ್ದಿದ್ದು, ಕ್ಷಮೆ ಕೋರುವ ಪಟ್ಟು ಹಿಡಿದಿದ್ದಾರೆ. ಜತೆಗೆ ಕೆಲವರು ಸುಧಾಕರ್​ ಅವರ ರಾಜೀನಾಮೆಗೂ ಆಗ್ರಹಿಸಿದ್ದಾರೆ.

    ಈ ನಡುವೆ ಮಾತನಾಡಿರುವ ಎಂ.ಪಿ. ರೇಣುಕಾಚಾರ್ಯ ಅವರು, ಸುಧಾಕರ್ ಬಹಿರಂಗ ಕ್ಷಮೆ ಕೇಳಬೇಕು. ಅಡ್ಡದಾರಿ ಹಿಡಿದರೆ ಜನ ಬುದ್ದಿ ಕಲಿಸುತ್ತಾರೆ ಎಂದಿದ್ದಾರೆ.

    ಸುಧಾಕರ್​ ಅವರಿಗೆ ಮುಖ್ಯಮಂತ್ರಿ ಬುದ್ಧಿ ಹೇಳಬೇಕು ಎಂದು ಕಾಂಗ್ರೆಸ್​ ಮುಖಂಡರು ಆಗ್ರಹಿಸಿದ್ದಾರೆ. ಜತೆಗೆ ಅವರು, 224 ಶಾಸಕರ ಕ್ಷಮೆ ಕೇಳಬೇಕು. ಸುಖಾಸುಮ್ಮನೆ ಅವರು ವಿವಾದವನ್ನು ಅವರೇ ಮೈಮೇಲೆ ಎಳೆದುಕೊಂಡಿದ್ದಾರೆ. ಶಾಸಕಿಯರು ಕಣ್ಣೀರು ಹಾಕುತ್ತಿದ್ದಾರೆ. ನಾಳೆ ಅವರ ಕುಟುಂಬದವರು ಸದನಕ್ಕೆ ಕಳಿಸಬೇಕು ಅಂದ್ರೆ ಯಾವ ರೀತಿ ಕಳಿಸುತ್ತಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

    ಸುಧಾಕರ್​ ಸ್ಪಷ್ಟನೆ:
    ಈ ವಿವಾದ ಇಷ್ಟೆಲ್ಲಾ ತಾರಕಕ್ಕೆ ಏರುತ್ತಿದ್ದಂತೆಯೇ ಸುಧಾಕರ್​ ಅವರು ಟ್ವೀಟ್​ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ, ಜತೆಗೆ ತಮ್ಮ ಮಾತಿಗೆ ಸಮಜಾಯಿಷಿ ನೀಡಿದ್ದಾರೆ. ಕೆಲವು ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೆ. ಆದರೆ ಅದೀಗ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.

    ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ. ಹೀಗಾಗಿ ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ.

    ನಮ್ಮ ಹದಿನೇಳು ಜನರ ವಿರುದ್ಧ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲಾ ಶಾಸಕರಿಗೆ ನೋವು ಉಂಟು ಮಾಡುವ ಉದ್ದೇಶ ನನಗಿಲ್ಲ ಎಂದಿದ್ದಾರೆ.

    ಶುರುವಾಯ್ತು ಒಬ್ಳೇ ಹೆಂಡ್ತಿ ಚಾಲೆಂಜ್​! ಸತ್ಯಹರಿಶ್ಚಂದ್ರ ಯಾರಪ್ಪಾ ಎಂದು ಸವಾಲ್​ ಹಾಕಿದ ಸಚಿವ..

    ಸಚಿವ ಸುಧಾಕರ್​ ಕೊಟ್ಟ ‘ಒಬ್ಳೇ ಹೆಂಡ್ತಿ ಚಾಲೆಂಜ್’​ಗೆ ಕುಮಾರಸ್ವಾಮಿ ಏನು ಹೇಳಿದ್ರು ನೋಡಿ…

    ನೋಡ್ರಪ್ಪಾ ನನಗಿರೋದು ಒಬ್ಳೇ ಹೆಂಡ್ತಿ, ತನಿಖೆ ಆಗ್ಲಿ… ಸತ್ಯ ಹರಿಶ್ಚಂದ್ರ ಚಾಲೆಂಜ್​ ಸ್ವೀಕರಿಸಿದ ಡಿಕೆಶಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts