More

    ಆಗ ಸಿಡಿ ಕೇಸ್‌ ಅಂದ್ರು… ಈಗ ಒಂದೇ ಹೆಂಡ್ತಿ ಅಂದ್ರು… ಒಟ್ನಲ್ಲಿ ಪಲಾಯನ ಮಾಡಲು ಏನೋ ಒಂದ್‌ ಬೇಕು…

    ಬೆಂಗಳೂರು: ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸುವುದು ಬಿಟ್ಟು ವಿಧಾನ ಮಂಡಲ ಅಧಿವೇಶನದಿಂದ ಓಡಿ ಹೋದರು ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಗೇಲಿ ಮಾಡಿದರು.

    ಸಿಎಂ ಗೃಹ ಕಚೇರಿ ‘ಕೃಷ್ಣಾ’ ದಲ್ಲಿ ಸಿಎಂ ಬಿಎಸ್‌ವೈ ಸಮಕ್ಷಮ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಜತೆಗೆ ಸಭೆಯಲ್ಲಿ ಗುರುವಾರ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.

    ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸುತ್ತಿರುವ ಪ್ರಕರಣವನ್ನು ಮುಂದಿಟ್ಟುಕೊಂಡು 4-5 ದಿನಗಳ ಸದನದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಿದರು. ಅಭಿವೃದ್ಧಿ, ಬಜೆಟ್ ಮೇಲಿನ ಚರ್ಚೆಗೆ ಬನ್ನಿ ಎಂದು ಸರ್ಕಾರ ಕರೆದರೆ ಕಲಾಪ ಬಿಟ್ಟು ಧರಣಿಗೆ ಇಳಿದರು.

    ನಂತರ ಹೋರಾಟ ಮುಂದುವರಿಸಲು ಯಾವುದೇ ವಿಷಯ ಸಿಗದ ಕಾರಣ ಸದನದ ಹೊರಗೆ ಸಚಿವ ಡಾ.ಕೆ.ಸುಧಾಕರ್ ನೀಡಿದ ಏಕಪತ್ನಿ, ಸತ್ಯಹರಿಶ್ಚಂದ್ರ ಕುರಿತ ಹೇಳಿಕೆಯನ್ನು ಮುಂದಿಟ್ಟು ಓಡಿ ಹೋದರು ಎಂದು ಬಿ.ಶ್ರೀರಾಮುಲು ಕುಟುಕಿದರು.

    ಪ್ರತಿಕ್ರಿಯೆಗೆ ನಕಾರ
    ಸಿಡಿ ಯುವತಿ 2ನೇ ವಿಡಿಯೋ ಬಿಡುಗಡೆ ಮಾಡಿದ್ದರ ಕುರಿತು ಪ್ರತಿಕ್ರಿಯಿಸಲು ಶ್ರೀರಾಮುಲು ನಿರಾಕರಿಸಿದರು. ಡಾ.ಕೆ.ಸುಧಾಕರ್ ಏಕಪತ್ನಿ ಕುರಿತು ಹೇಳಿಕೆ ತಪ್ಪು ಒಪ್ಪು ಎನ್ನುವ ಚರ್ಚೆ ಅನಗತ್ಯ. ಅವರು ಹೇಳಿಕೆ ನೀಡಿಯಾಗಿದೆ. ಯಾವ ನೆಲೆಯಲ್ಲಿ ಹೇಳಿಕೆ ನೀಡಿದೆನೆಂದು ಸಮಜಾಯಿಷಿ ಕೊಟ್ಟಾಗಿದೆ ಎಂದರು.

    ಆಡಳಿತ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಪಕ್ಷದ ಶಾಸಕರಿಗೆ ಅಸಮಾಧಾನ ಆಗಿರುವುದು ನಿಜ. ಆರ್ಥಿಕ ಸಮಸ್ಯೆಗೆ ಕರೊನಾ ಕಾರಣವೆಂಬುದು ಗೊತ್ತಿರುವ ವಿಚಾರ. ಆದರೂ ಆಯಾ ಕ್ಷೇತ್ರಗಳಲ್ಲಿ ನನೆಗುದಿಗೆ ಕಾಮಗಾರಿ ಚುರುಕುಗೊಳಿಸಲು, ಅನುದಾನ ಬಿಡುಗಡೆ ಮಾಡುವ ಕುರಿತು ಸಿಎಂ ಬಿಎಸ್ ವೈ ಪ್ರತಿಯೊಂದು ಇಲಾಖೆಗೆ ಡೆಡ್ ಲೈನ್ ನಿಗದಿ ಮಾಡಿದ್ದಾರೆ ಬಿ.ಶ್ರೀರಾಮುಲು ತಿಳಿಸಿದರು.

    ಸಚಿವ ಸುಧಾಕರ್​ ಕೊಟ್ಟ ‘ಒಬ್ಳೇ ಹೆಂಡ್ತಿ ಚಾಲೆಂಜ್’​ಗೆ ಕುಮಾರಸ್ವಾಮಿ ಏನು ಹೇಳಿದ್ರು ನೋಡಿ…

    ನೋಡ್ರಪ್ಪಾ ನನಗಿರೋದು ಒಬ್ಳೇ ಹೆಂಡ್ತಿ, ತನಿಖೆ ಆಗ್ಲಿ… ಸತ್ಯ ಹರಿಶ್ಚಂದ್ರ ಚಾಲೆಂಜ್​ ಸ್ವೀಕರಿಸಿದ ಡಿಕೆಶಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts